ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಎನ್ಕೌಂಟರ್ ನಲ್ಲಿ 4 ಎಲ್ಇಟಿ ಉಗ್ರರ ಸಾವು : ಮುಂದುವರೆದ ಕಾರ್ಯಾಚರಣೆ | Janata news
ಶೋಪಿಯಾನ್ : ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನಲ್ಲಿ ಇಂದು ಸೋಮವಾರ ಮುಂಜಾನೆ ಭಾರತೀಯ ಭದ್ರತಾ ಪಡೆಗಳೊಂದಿಗಿನ ಎನ್ಕೌಂಟರ್ ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯಿಬಾ( ಎಲ್ಇಟಿ) ಗೆ ಸಂಬಂಧ ಹೊಂದಿರುವ ಕನಿಷ್ಠ ನಾಲ್ಕು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಶೋಪಿಯಾನ್ನ ಮಣಿಹಾಲ್ ಪ್ರದೇಶದಲ್ಲಿ ಕೆಲವು ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಭೂಸೇನೆ ಮತ್ತು ಸಿಆರ್ಪಿಎಫ್ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಭಾರತೀಯ ಭದ್ರತಾ ಪಡೆ ಪ್ರದೇಶ ಸುತ್ತುವರೆಯುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ಆರಂಭಿದ್ದಾರೆ, ಬಳಿಕ ಭಾರತೀಯ ಪಡೆ ಪ್ರತಿದಾಳಿ ನಡೆಸಿದ್ದಾರೆ.
ಮಧ್ಯರಾತ್ರಿಯಿಂದ ನಿರಂತರವಾಗಿ ಈ ಪ್ರದೇಶದಲ್ಲಿ ನಡೆದ ಭಾರಿ ಶೋಧ ಕಾರ್ಯಾಚರಣೆ ಹಾಗೂ ಎನ್ಕೌಂಟರ್ ನಲ್ಲಿ ಒಟ್ಟು 4 ಎಲ್ಇಟಿ ಉಗ್ರಗಾಮಿಗಳನ್ನ ಸದೆಬಡಿಯಲಾಗಿದೆ.
ಈ ಪ್ರದೇಶದಲ್ಲಿ ಅಡಗಿರುವ ಕೆಲವು ಭಯೋತ್ಪಾದಕರನ್ನು ಹೊರಹಾಕಲು ಈ ಪ್ರದೇಶದಲ್ಲಿ ಭಾರಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಮೊಟ್ಟಮೊದಲು ವಿವರಗಳನ್ನು ಹಂಚಿಕೊಂಡ ಕಾಶ್ಮೀರ ವಲಯ ಪೊಲೀಸರು, ಶೋಪಿಯಾನ್ನಲ್ಲಿ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಕೊಲ್ಲಲ್ಪಟ್ಟ ಇಬ್ಬರು ಭಯೋತ್ಪಾದಕರು ಲಷ್ಕರ್-ಎ-ತೋಯಿಬಾ (ಎಲ್ಇಟಿ) ಗೆ ಸಂಬಂಧ ಹೊಂದಿದ್ದಾರೆ, ಎಂದು ಹೇಳಿದರು.
ಎನ್ಕೌಂಟರ್ ಸ್ಥಳದಲ್ಲಿ ಇನ್ನೂ ಇಬ್ಬರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ, ಎಂದು ಪೊಲೀಸರು ಹೇಳಿದ್ದಾರೆ. ಬಳಿಕ, ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಮತ್ತೊಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಶೋಪಿಯನ್ ಎನ್ಕೌಂಟರ್ ಮಾಹಿತಿ ಪ್ರಕಾರ, ಮತ್ತೊಬ್ಬ ಇನ್ನೂ ಗುರುತಿಸಲಾಗದ ಭಯೋತ್ಪಾದಕನನ್ನು ಕೊಲ್ಲಲಾಯಿತು(ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಎಲ್ಇಟಿಗೆ ಸಂಬಂಧಿಸಿದ ಒಟ್ಟು 04 ಉಗ್ರರು). ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಅಪರಾಧಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹುಡುಕಾಟ ನಡೆಯುತ್ತಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ, ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಕಟಿಸಿದ್ದಾರೆ.