ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ ಉದ್ಯಮಿಯ ಪುತ್ರಿಯ ಜೊತೆ ಮುಂಬೈ ಡ್ರಗ್ ಪೆಡ್ಲರ್ ಅರೆಸ್ಟ್! | Janata news
ಹುಬ್ಬಳ್ಳಿ : ಹುಬ್ಬಳ್ಳಿಯ ಪ್ರತಿಷ್ಠಿತ ಹೋಟೆಲ್ ಉದ್ಯಮಿಯ ಪುತ್ರಿಯ ಜೊತೆ ಮುಂಬೈ ಡ್ರಗ್ ಪೆಡ್ಲರ್ ನನ್ನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಬಳಿ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮುಂಬೈ ಮೂಲದ ಅಜಯ್ ರಾವ್ ಎಂಬ ಪೆಡ್ಲರ್ ಹಾಗೂ ಹುಬ್ಬಳ್ಳಿಯ ಹೋಟೆಲ್ ಉದ್ಯಮಿಯೊಬ್ಬರ ಪುತ್ರಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಅಜಯ್ ರಾವ್ ಮುಂಬೈ ಮೂಲದವನಾಗಿದ್ದು, ನಗರದ ಶಿಮ್ರಾನ್ ಜಿತ್ ಕೌರ್ ಈತನಿಂದ ಮಾದಕವಸ್ತು ಪಡೆಯುತ್ತಿದ್ದಳು ಎನ್ನಲಾಗ್ತಿದೆ.
ಇವರಿಂದ ಅಪಾರ ಪ್ರಮಾಣದ ಡ್ರಗ್ಸ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಿರುವ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
RELATED TOPICS:
English summary :Hubballi