Tue,Apr23,2024
ಕನ್ನಡ / English

ಫೆಡರಲ್ ನ್ಯಾಯಾದೀಶರಾಗಿ ಭಾರತೀಯ-ಅಮೆರಿಕನ್ ರೂಪಾ ರಂಗ ಪುಟ್ಟಗುಂಟಾ ನಾಮನಿರ್ದೇಶನ ಮಾಡಿದ ಬಿಡೆನ್ | Janata news

31 Mar 2021
1691

ವಾಶಿಂಗ್ಟನ್ : ಫೆಡರಲ್ ನ್ಯಾಯಾದೀಶರಾಗಿ ಭಾರತೀಯ-ಅಮೆರಿಕನ್ ರೂಪಾ ರಂಗ ಪುಟ್ಟಗುಂಟಾ ಅವರನ್ನು ನಾಮನಿರ್ದೇಶನ ಮಾಡುವ ಉದ್ದೇಶವನ್ನು ಅಮೆರಿಕ ಅಧ್ಯಕ್ಷ ಜೋ ಬಿಡನ್ ಮಂಗಳವಾರ ಪ್ರಕಟಿಸಿದ್ದಾರೆ. ಉನ್ನತ ನ್ಯಾಯಾಂಗ ಸ್ಥಾನಗಳಿಗೆ 10 ಇತರ ವೈವಿಧ್ಯಮಯ ಆಯ್ಕೆಗಳಲ್ಲಿ ಆಫ್ರಿಕನ್-ಅಮೇರಿಕನ್ ಮತ್ತು ಮುಸ್ಲಿಂ ಅಮೇರಿಕನ್ ಅಭ್ಯರ್ಥಿಗಳನ್ನು ಒಳಗೊಂಡಿದೆ.

ನ್ಯಾಯಾಧೀಶ ಪುಟ್ಟಗುಂಟಾ ಅವರು, ಪ್ರಸ್ತುತ ಬಾಡಿಗೆ ವಸತಿ ಆಯೋಗ, ಡಿಸಿ ಯಲ್ಲಿ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರಲ್ಲಿ ಆಯೋಗಕ್ಕೆ ಸೇರುವ ಮೊದಲು, ನ್ಯಾಯಾಧೀಶ ಪುಟ್ಟಗುಂಟ ಅವರು 2013 ರಿಂದ 2019 ರವರೆಗೆ, ವಿಚಾರಣೆಯಲ್ಲಿ ಮತ್ತು ಮೇಲ್ಮನವಿಯಲ್ಲಿ ಅಪರಾಧ ವಿಭಾಗದ ವಕೀಲ ಅಭ್ಯಾಸ ಕಾರ್ಯನಿರ್ವಹಿಸುತ್ತಿದರು.

ಅದಕ್ಕೂ ಮೊದಲು, ನ್ಯಾಯಾಧೀಶೆ ಪುಟ್ಟಗುಂಟಾ 2012 ರಿಂದ 2013 ರವರೆಗೆ ಡೆಲಾನಿ ಮೆಕಿನ್ನಿ, ಎಲ್.ಎಲ್.ಪಿ ಯಲ್ಲಿ ಕುಟುಂಬ ಮತ್ತು ಮೇಲ್ಮನವಿ ಕಾನೂನನ್ನು ಅಭ್ಯಾಸ ಮಾಡಿದ್ದರು.

ನ್ಯಾಯಾಧೀಶೆ ಪುಟ್ಟಗುಂಟಾ ಅವರು 2007 ರಲ್ಲಿ ಓಹಿಯೋ ಸ್ಟೇಟ್ ಮೊರಿಟ್ಜ್ ಕಾಲೇಜ್ ಆಫ್ ಲಾದಿಂದ ಜೂರಿಸ್ ಡಾಕ್ಟರ್ ಪದವಿ ಪಡೆದರು.

ಯುಎಸ್ ಸೆನೆಟ್ ದೃಡಪಡಿಸಿದರೆ, ನ್ಯಾಯಾಧೀಶ ಪುಟ್ಟಗುಂಟಾ ಡಿಸಿ ಡಿಸ್ಟ್ರಿಕ್ಟ್ ಗಾಗಿ ಅಮೇರಿಕ ಡಿಸ್ಟ್ರಿಕ್ಟ್ ಕೋರ್ಟ್ ನಲ್ಲಿ ಸೇವೆ ಸಲ್ಲಿಸಿದ ಮೊದಲ ಏಷ್ಯನ್ ಅಮೇರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ (ಎಎಪಿಐ) ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ, ಎಂದು ಶ್ವೇತಭವನ ತಿಳಿಸಿದೆ.

ಫೆಡರಲ್ ಬೆಂಚ್ ಅಮೆರಿಕಾದ ಜನರ ಸಂಪೂರ್ಣ ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು ಎಂಬ ಅಧ್ಯಕ್ಷರ ಆಳವಾದ ನಂಬಿಕೆಯನ್ನು ಈ ಉನ್ನತ ಅರ್ಹ ಅಭ್ಯರ್ಥಿಗಳು ಪ್ರತಿಬಿಂಬಿಸುತ್ತಾರೆ, ಎಂದು ಶ್ವೇತಭವನ ಹೇಳಿದೆ.

ಅಧ್ಯಕ್ಷೀಯ ನಾಮನಿರ್ದೇಶನಗಳಲ್ಲಿ 10 ಫೆಡರಲ್ ಸರ್ಕ್ಯೂಟ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗಳಿಗೆ ಮತ್ತು ಒಂದು ಕೊಲಂಬಿಯಾ ಜಿಲ್ಲೆಯ ಸುಪೀರಿಯರ್ ಕೋರ್ಟ್ ನ್ಯಾಯಾಧೀಶರಿಗಾಗಿ ಇರಲಿದೆ.

RELATED TOPICS:
English summary :Biden nominated Indian-American Rupa Ranga Puttagunta for Federal Judge

ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಪಾಕಿಸ್ತಾನದಲ್ಲಿ 20 ಭಯೋತ್ಪಾದಕರ ಹತ್ಯೆ : ವಿದೇಶಾಂಗ ಸಚಿವರ ಸ್ಪಷ್ಟನೆ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಹಲಾಲ್ ಕಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂಗಳು, ಹಿಂದೂಗಳ ಸಂಸ್ಥೆಗಳು ಬೆಳೆದರೆ ಸಹಿಸೋದೇ ಇಲ್ಲ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ
ಪ್ರಧಾನಿ ಮೋದಿ ಬೆಂಬಲಿಸಿ ಮಹಾರಾಷ್ಟ್ರ ರ್ಯಾಲಿಯಲ್ಲಿ ಎಂಎನ್‌ಎಸ್ ಅಧ್ಯಕ್ಷ ರಾಜ್ ಠಾಕ್ರೆ

ನ್ಯೂಸ್ MORE NEWS...