ಸಚಿವ ಬಿಸಿ ಪಾಟೀಲ್ ಗೆ ಮನೆಯಲ್ಲಿ ಲಸಿಕೆ ನೀಡಿದ ಆರೋಗ್ಯಾಧಿಕಾರಿ ಅಮಾನತು | ಜನತಾ ನ್ಯೂಸ್

02 Apr 2021
394
BC Patil

ಹಾವೇರಿ: : ಸಚಿವರಿಗೆ ಲಸಿಕೆ ನೀಡುವ ಸಲುವಾಗಿ ಬಿ ಸಿ ಪಾಟೀಲ್ ಅವರ ಮನೆಗೆ ಭೇಟಿ ನೀಡುವಂತೆ ತಮ್ಮ ಸಿಬ್ಬಂದಿಗಳಿಗೆ ಆದೇಶಿಸಿದ್ದ ಹಿರೇಕೆರೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಝಡ್. ಆರ್. ಮಕಂದರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ‌ ಸೇವೆಗಳ ಇಲಾಖೆ ಆಯುಕ್ತ ಕೆ.ವಿ. ತ್ರೀಲೋಕ ಚಂದ್ರ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಮನೆಯಲ್ಲಿಯೇ ಲಸಿಕೆ ಪಡೆದಿದ್ದಕ್ಕೆ ಸಚಿವ ಬಿ.ಸಿ. ಪಾಟೀಲ್ ವಿವಾದಕ್ಕೆ ಕಾರಣವಾಗಿದ್ದರು. ಮಾರ್ಚ್ 2 ರಂದು ಹಿರೇಕೆರೂರು ಮನೆಯಲ್ಲಿ ಸಚಿವ ಪಾಟೀಲ ಹಾಗೂ ಅವರ ಪತ್ನಿ ವನಜಾ ಪಾಟೀಲ ವ್ಯಾಕ್ಸಿನ್ ಹಾಕಿಸಿಕೊಂದಿದ್ದರು.

ಸರ್ಕಾರದ ನಿಯಮಗಳ ಪ್ರಕಾರ ವಯಸ್ಕರೇ ಆಗಲಿ ವೃದ್ದರೇ ಆಗಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡು ನಿಯಮಾನುಸಾರ ನಿಗದಿತ ಆಸ್ಪತ್ರೆಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಬೇಕು. ಆದರೆ ಸಚಿವರಿಗೆ ಲಸಿಕೆ ಹಾಕುವ ವಿಚಾರದಲ್ಲಿ ಹಿರೇಕೆರೂರು ಆರೋಗ್ಯ ಅಧಿಕಾರಿಗಳೇ ನಿಯಮಗಳನ್ನು ಮೀರಿ ನಡೆದುಕೊಳ್ಳುವ ಮೂಲಕ ಜನಸಾಮಾನ್ಯರಿಗೊಂದು ನಿಯಮ ಜನಪ್ರತಿನಿಧಿಗಳಿಗೊಂದು ನಿಯಮವೇ? ಎನ್ನುವ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದವು.

ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದ ಸಂಬಂಧ ಡಾ. ಮಕಾಂದಾರ್ ಅವರಿಗೆ ಕಾರಣ ಕೇಳಿ ಡಾ.ರಾಜೇಂದ್ರ ದೊಡ್ಡಮನಿ ಅವರು ಮಾರ್ಚ್ 2 ರಂದು ನೋಟಿಸ್ ಜಾರಿ ಮಾಡಿದ್ದರು. ಸಚಿವರು ತಾಲೂಕಿನ ಪ್ರಥಮ ಪ್ರಜೆಯಾಗಿದ್ದಾರೆ. ಅವರಿಗೆ ಬೈಲ್ಯಾಟರಲ್ ನೀ ಆಸ್ಟಿಯೋ ಆಥ್ರ್ರಿಟಿಸ್ ಹಾಗೂ ಕ್ರಾನಿಕ್ ಲೋಬ್ಯಾಕ್ ಎಖ್‍ಆರೋಗ್ಯ ಸಮಸ್ಯೆ ಇರುವುದರಿಂದ ಸಚಿವರ ಕರೆಯ ಮೇರೆಗೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅವಶ್ಯಕ ತುರ್ತು ಸೇವೆ ಅಂಬುಲೆನ್ಸ್ ಹಾಗೂ ಔಷಧಗಳೊಂದಿಗೆ ಸಚಿವರಿಗೆ ಕೋವಿಡ್-19 ಲಸಿಕೆಯನ್ನು ನೀಡಿ ನಂತರ 30 ನಿಮಿಷಗಳವರೆಗೆ ನಿಗಾವಹಿಸಲಾಗಿತ್ತು. ಇನ್ನು ಮುಂದೆ ಕೋವಿಡ್-19 ಮಾರ್ಗಸೂಚಿ ಪ್ರಕಾರ ಸಾರ್ವಜನಿಕರಿಗೆ ಲಸಿಕೆ ನೀಡುತ್ತೇವೆ ಎಂದು ಉತ್ತರ ನೀಡಿದ್ದರು.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಡಾ.ಮಕಂದರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

RELATED TOPICS:
English summary :BC Patil

ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ!  | ಜನತಾ ನ್ಯೂ&#
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#

ನ್ಯೂಸ್ MORE NEWS...