ಛತ್ತೀಸ್‌ಗಡ ನಕ್ಸಲ್ ದಾಳಿ : ಯೋಧರ ಬಲಿಧಾನ ವ್ಯರ್ಥವಾಗಲ್ಲ, ಇದನ್ನು ಪರಿಣಾಮ ನೀಡುತ್ತೇವೆ - ಅಮಿತ್ ಷಾ | ಜನತಾ ನ್ಯೂಸ್

04 Apr 2021
371
Chattisgarh Naxal attack : Will take it to resolution - Amit Shah

ನವದೆಹಲಿ : ಛತ್ತೀಸ್‌ಗಡದಲ್ಲಿ ಭದ್ರತಾ ಪಡೆಗಳ ಮೇಲೆ ಮಾವೋವಾದಿ ದಾಳಿಯ ಹಿನ್ನೆಲೆಯಲ್ಲಿ ಅಸ್ಸಾಂ ಚುನಾವಣಾ ಪ್ರವಾಸವನ್ನು ಕಡಿತಗೊಳಿಸಿ ದೆಹಲಿಗೆ ಮರಳಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಪರಿಸ್ಥಿತಿಯ ನಿರ್ವಹಣೆ ಮಾಡಿದ್ದಾರೆ ಮತ್ತು ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ, ಎಂದು ಹೇಳಿದರು.

ನಮ್ಮ ಯೋಧರು ಹುತಾತ್ಮರಾಗಿದ್ದಾರೆ, ಅವರಿಗೆ ನಾನು ಶೃದ್ಧಾಂಜಲಿ ಸಲ್ಲಿಸುತ್ತೇನೆ. ಮತ್ತು ಅವರ ಕುಟುಂಬದವರಿಗೆ ಹಾಗೂ ದೇಶದ ಜನತೆಗೆ ವಿಶ್ವಾಸ ನೀಡಲು ಬಯಸುತ್ತೆನೆಂದರೆ, ಯಾವ ಯೋಧರು ತಮ್ಮ ರಕ್ತವನ್ನು ದೇಶಕ್ಕಾಗಿ ಹರಿಸಿದ್ದಾರೋ ಅದು ವ್ಯರ್ಥವಾಗುವುದಿಲ್ಲ. ನಮ್ಮ ಹೋರಾಟ ಇನ್ನೂ ಅಧಿಕ ಶಕ್ತಿಯುತವಾಗಿ, ದೃಡವಾಗಿ ಮತ್ತು ತೀವ್ರತೆಯಿಂದ ಈ ನಕ್ಸಲರ ವಿರುದ್ಧ ಮುಂದುವರೆಯುತ್ತದೆ. ಮತ್ತು ನಾವು ಇದನ್ನು ಪರಿಣಾಮದ ವರೆಗೆ ಕೊಂಡೊಯ್ಯಲಿದ್ದೇವೆ, ಎಂದು ಅಮಿತ್ ಷಾ ಹೇಳಿದ್ದಾರೆ.

ನಮ್ಮ ಭದ್ರತಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಈ ರಕ್ತಪಾತವನ್ನು ನಾವು ಸಹಿಸುವುದಿಲ್ಲ ಮತ್ತು ಸೂಕ್ತ ಸಮಯದಲ್ಲಿ ಸೂಕ್ತವಾದ ಉತ್ತರವನ್ನು ನೀಡಲಾಗುವುದು" ಎಂದು ಅವರು ಹೇಳಿದರು. ಅಸ್ಸಾಂನಿಂದ ಹೊರಡುವ ಮೊದಲು, ಅವರು ಸೈನಿಕರಿಗೆ ಗೌರವ ಸಲ್ಲಿಸಿದರು ಮತ್ತು ಸೈನಿಕರ ತ್ಯಾಗವು ವ್ಯರ್ಥವಾಗುವುದಿಲ್ಲ ಎಂದು ಹೇಳಿದರು.

ಸಾವುನೋವುಗಳ ನಿಖರ ಸಂಖ್ಯೆಯನ್ನು ಕಂಡುಹಿಡಿಯಲಾಗುತ್ತಿದೆ, ಎಂದು ಗೃಹ ಸಚಿವರು ಹೇಳಿದರು. ಸಾವುನೋವುಗಳ ಸಂಖ್ಯೆಗಳಿಗೆ ಸಂಬಂಧಿಸಿದಂತೆ, ಎರಡೂ ಕಡೆಯವರು ನಷ್ಟವನ್ನು ಅನುಭವಿಸಿದ್ದಾರೆ ಮತ್ತು ನಿಖರ ಅಪಘಾತದ ಅಂಕಿಅಂಶಗಳನ್ನು ತಕ್ಷಣ ಕಂಡುಹಿಡಿಯಲಾಗದು, ಎಂದು ಶಾ ಹೇಳಿದರು.

ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ವಿವಿಧ ಭದ್ರತಾ ಪಡೆಗಳ ಇಪ್ಪತ್ತೆರಡು ಮಂದಿ ಸಾವನ್ನಪ್ಪಿದ್ದಾರೆ. ಮಾವೋವಾದಿಗಳೊಂದಿಗಿನ ನಾಲ್ಕು ಗಂಟೆಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 22 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ, 32 ಮಂದಿ ಗಾಯಗೊಂಡಿದ್ದಾರೆ ಮತ್ತು ಒಬ್ಬ ಜವಾನ್ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಸುಮಾರು 400 ಮಾವೋವಾದಿಗಳ ದೊಡ್ಡ ಗುಂಪು ಪ್ರಮುಖ ನಕ್ಸಲೈಟ್ ವಿರೋಧಿ ಕಾರ್ಯಾಚರಣೆಗಾಗಿ ಛತ್ತೀಸ್‌ಗಡದ ಕಾಡುಗಳಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಗಳ ಮೇಲೆ ಹೊಂಚು ಹಾಕಿ ಗುಂಡಿನ ದಾಳಿ ನಡೆಸಿದ್ದಾರೆ. 10 ದಿನಗಳ ಒಳಗೆ ನಡೆದ ಎರಡನೇ ಪ್ರಮುಖ ಮಾರಣಾಂತಿಕ ಹೊಂಚುಹಾಕಿ ನಡೆಸಿದ ಮಾವೋವಾದಿ ದಾಳಿಯಲ್ಲಿ ಕನಿಷ್ಠ 22 ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ.

RELATED TOPICS:
English summary :Chattisgarh Naxal attack : Will take it to resolution - Amit Shah

ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ!  | ಜನತಾ ನ್ಯೂ&#
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#

ನ್ಯೂಸ್ MORE NEWS...