ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೋವಿಡ್-19 ದೃಡ | ಜನತಾ ನ್ಯೂಸ್
ಪಾಟ್ನಾ : ಮೊದಲ ಕೋವಿಡ್-19 ಅಲೆಗಿಂದ ಈ ಭಾರಿ ಉತ್ತರ ಪ್ರದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಗಂಭಿರವಾಗಿ ಏರಿಕೆ ಕಾಣುತ್ತಿದ್ದು, ಈಗ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ತಮಗೆ ಕೊರೋನಾ ವರದಿ ಪಾಸಿಟಿವ್ ಬಂದಿದೆ, ಎಂದು ಖುದ್ದು ಯೋಗಿ ಈ ಬಗ್ಗೆ ಟಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷ ಅಖಿಲೇಶ್ ಯಾದವ್ಗೆ ಕೊರೋನಾ ಸೋಂಕು ತಗುಲಿದ ಬೆನ್ನಲ್ಲೇ, ಸಿಎಂ ಯೋಗಿ ಆದಿತ್ಯನಾಥ್ರವರಿಗೆ ಕೋವಿಡ್-19 ದೃಡಗೊಂಡಂತೆ ಆಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಈ ಕುರಿತು ಟ್ವೀಟ್ ಮಾಡಿದ್ದು, ಆರಂಭಿಕ ಲಕ್ಷಣ ಕಂಡು ಬಂದ ಹಿನ್ನೆಲೆ ನಾನು ಕೊರೋನಾ ಪರಿಶೀಲನೆ ಮಾಡಿಸಿಕೊಂದಿದ್ದೇನೆ. ನನ್ನ ವರದಿ ಪಾಸಿಟಿವ್ ಬಂದಿದೆ. ಸದ್ಯ ನಾನು ಸ್ವಯಂ ಐಸೋಲೇಷನ್ನಲ್ಲಿದ್ದೇನೆ ಹಾಗೂ ವೈದ್ಯರ ಎಲ್ಲಾ ಸಲಹೆಗಳನ್ನು ಅನುಸರಿಸುತ್ತಿದ್ದೇನೆ. ಎಲ್ಲಾ ಕಾರ್ಯಕ್ರಮಗಳನ್ನು ಹಾಗೂ ಸಭೆಯನ್ನು ವರ್ಚುವಲಿ ನಡೆಸುತ್ತಿದ್ದೇನೆ. ಸರ್ಕಾರದ ಎಲ್ಲಾ ಕಾರ್ಯಗಳು ಯಾವುದೇ ಅಡಚಣೆ ಇಲ್ಲದೇ ನಡೆಯುತ್ತಿದೆ. ಈ ನಡುವೆ ನನ್ನ ಸಂಪರ್ಕದಲ್ಲಿ ಬಂದ ಎಲ್ಲರೂ ಖಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಿ, ಎಚ್ಚರ ವಹಿಸಿ, ಎಂದಿದ್ದಾರೆ.