ಸಿಎಂ ಬಿ.ಎಸ್.ವೈ. ಉತ್ತಮ ಆರೋಗ್ಯಕ್ಕೆ ರಾಜ್ಯದ ರಾಜಕೀಯ ಮುಖಂಡ ಹಾರೈಕೆ | ಜನತಾ ನ್ಯೂಸ್

16 Apr 2021
733
State political leaders wishes for better health for CM BSY

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋವಿಡ್-19 ಸೋಂಕು ತಗಲಿರುವ ವಿಷಯ ತಿಳಿಯುತ್ತಿದ್ದಂತೆ ಪ್ರತಿಪಕ್ಷದ ಪ್ರಮುಖ ನಾಯಕರು ಸೇರಿದಂತೆ ಅನೇಕ ರಾಜಕೀಯ ಮುಖಂಡರು ಬೇಸರ ವ್ಯಕ್ತಪಡಿಸಿದ್ದು, ಬೇಗನೆ ಗುಣಮುಖರಾಗಲಿಎಂದು ಹಾರೈಸಿದ್ದಾರೆ.

ಈ ಪೈಕಿ ರಾಜ್ಯ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ನವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ, ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿಯವರು, ಕೊರೊನಾ ಸೋಂಕು ಪೀಡಿತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ಕರೋನಾದಿಂದ ಚೇತರಿಸಿಕೊಂಡು ಎಂದಿನಂತೆ ಆಡಳಿತದಲ್ಲಿ ಸಕ್ರಿಯರಾಗುವಂತೆ ಭಗವಂತನಲ್ಲಿ ಕೋರುತ್ತೇನೆ, ಎಂದು ಟ್ವೀಟ್ ಮಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಶೀಘ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ನಿಮ್ಮ ಉತ್ತಮ ಆರೋಗ್ಯಕ್ಕಾಗಿ ರಾಜ್ಯದ ಜನತೆಯ ಪ್ರಾರ್ಥನೆ ನಿಮ್ಮೊಂದಿಗಿದೆ, ಎಂದು ಡಿಸಿಎಂ ಡಾ.ಅಶ್ವಥನಾರಾಯಣ.ಸಿ.ಏನ್ ಟ್ವೀಟ್ ಮಾಡಿದ್ದಾರೆ.

ನಾಡಿನ ಜನಸೇವೆಯಲ್ಲಿ ಸದಾ ಕಾರ್ಯತತ್ಪರರಾಗಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಿಗೆ ಕೊರೋನಾ ಸೋಂಕು ದೃಢವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರ ಗುಣಮುಖರಾಗಿ ಎಂದಿನಂತೆ ಜನಸೇವೆಯಲ್ಲಿ ತೊಡಗುವಂತಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ, ಎಂದು ಸಣ್ಣ ಕೈಗಾರಿಕೆ ಹಾಗೂ ಮಾಹಿತಿ, ಸಾರ್ವಜನಿಕ ಸಂಪರ್ಕ ಖಾತೆ ಸಚಿವ ಸಿಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು, ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ನವರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ನಾಡಿನ ಜನತೆಯ ಆಶೀರ್ವಾದ ನಿಮ್ಮ ಮೇಲಿದೆ,ಅದಷ್ಟು ಬೇಗ ಸಂಪೂರ್ಣ ಗುಣಮುಖರಾಗಿ ನಾಡಿನ ಜನತೆಯ ಸೇವೆಯಲ್ಲಿ ನಿರತರಾಗಲಿ ಎಂದು ಪ್ರಾರ್ಥಿಸುತ್ತೆನೆ, ಎಂದು ಟ್ವೀಟ್ ಮಾಡಿದ್ದಾರೆ.

RELATED TOPICS:
English summary :State political leaders wishes for better health for CM BSY

ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#

ನ್ಯೂಸ್ MORE NEWS...