ಕೋವಿಡ್-19 ಮರಣಮೃದಂಗಕ್ಕೆ ರಾಜ್ಯಾದ್ಯಂತ 80 ಸಾವು, 17,489 ಹೊಸ ಪ್ರಕರಣ | ಜನತಾ ನ್ಯೂಸ್
ಬೆಂಗಳೂರು : ರಾಜ್ಯಾದ್ಯಂತ ಕಳೆದ ದಿನ ಕೋವಿಡ್-19 ಪ್ರಕರಣಗಳು ಅಪಾಯಕರ ರೀತಿಯಲ್ಲಿ ಏರಿಕೆ ಕಾಣುತ್ತಿದ್ದು, 17489 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಇದರಲ್ಲಿ ಹೆಚ್ಚಿನ ಪಾಲು ಹೊಂದಿರುವ ರಾಜಧಾನಿ ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆ 11,404 ಸಂಖ್ಯೆ ದಾಖಲಾಗಿದೆ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 262 ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಹಾಗೆಯೆ, ಪ್ರಕರಣಗಳ ಸಂಖ್ಯೆ ಶತಕ ದಾಟಿದ ಜಿಲ್ಲೆಗಳೆಂದರೆ ಕುಲಬುರಗಿಯಲ್ಲಿ 560, ಮೈಸೂರು ನಲ್ಲಿ 811, ಬೀದರ್ ನಲ್ಲಿ 359, ದಕ್ಷಿಣ ಕನ್ನಡದಲ್ಲಿ 309, ಹಾಸನದಲ್ಲಿ 224, ತುಮಕೂರುನಲ್ಲಿ 507, ಬಳ್ಳಾರಿ 355, ಧಾರವಾಡದಲ್ಲಿ 272, ಬೆಳಗಾವಿಯಲ್ಲಿ 188, ಚಿಕ್ಕಬಳ್ಳಾಪುರದಲ್ಲಿ 179, ದಾವಣಗೆರೆಯಲ್ಲಿ 172, ಕೋಲಾರದಲ್ಲಿ 144, ಚಾಮರಾಜನಗರದಲ್ಲಿ 136, ಕೊಪ್ಪಳದಲ್ಲಿ 121, ಉಡುಪಿಯಲ್ಲಿ 118, ರಾಮನಗರದಲ್ಲಿ 102 ಹಾಗೂ ಉತ್ತರ ಕನ್ನಡ 102 ಪ್ರಕರಣ ದಾಖಲಾಗಿದೆ.
ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 11,41,998ಕ್ಕೆ ಏರಿಕೆಯಾಗಿವೆ. ಕಳೆದ 24 ಗಂಟೆಯಲ್ಲಿ 80 ಮಂದಿ ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ, ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್-19 ಚೇತರಿಕೆ ಪ್ರಕರಣಗಳಲ್ಲಿ, ಬೆಂಗಳೂರು ನಗರದಲ್ಲಿ 3,253 ಜನ ಕೋವಿಡ್-19 ನಿಂದ ಗುಣಮುಖರಾಗಿದ್ದು ಸೇರಿದಂತೆ ರಾಜ್ಯಾಧ್ಯಂತ ಇಂದು 5,565 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು 10,09,549 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ರಾಜ್ಯಾದ್ಯಂತ ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದ್ದು ದಾಖಲಾದ 80 ಸಾವುಗಳಲ್ಲಿ, ಬೆಂಗಳೂರು ನಗರದಲ್ಲಿ 43 ಸಾವು ಸಂಭವಿಸಿದೆ ಹಾಗೂ ರಾಜ್ಯಾದ್ಯಂತ ಒಟ್ಟು ಕೋವಿಡ್ ಸಾವಿನ ಸಂಖ್ಯೆ 13,270 ಆಗಿದೆ.