ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಗೆ ನಲಪಾಡ್ ಧಮ್ಕಿ: ನಲಪಾಡ್ ವಿರುದ್ಧ ಪೊಲೀಸರಿಗೆ ದೂರು | ಜನತಾ ನ್ಯೂಸ್

22 Apr 2021
462
Bangalore

ಬೆಂಗಳೂರು : ಕೋವಿಡ್ ವಾರ್ ರೂಂ ರಚನೆ ಮಾಡುವ ವಿಚಾರದಲ್ಲಿ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ಭವ್ಯಾ ಅವರಿಗೆ ನಲಪಾಡ್ ಮತ್ತು ಆತನ ಆಪ್ತ ಪಟಾಲಂ ಧಮ್ಕಿ ಹಾಕಿದ್ದಾರೆ.

ಕೋವಿಡ್ ವಾರ್ ರೂಂ ಸ್ಥಾಪನೆ ವಿರೋಧಿಸಿ ಎಸ್.ಸಿ ಸಮುದಾಯದ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯಾಗೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಧಮ್ಮಿ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಭವ್ಯಾ ರಕ್ಷಣೆ ಕೋರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕೋವಿಡ್ ವಾರ್ ರೂಂ ನಿರ್ಮಾಣದ ಕೆಲಸದ ವೇಳೆ ಅಡ್ಡಿಪಡಿಸಿ ನಲಪಾಡ್ ಭವ್ಯಾಗೆ ಧಮ್ಮಿ ಹಾಕಿದ್ದಾರೆ ಎನ್ನಲಾಗಿದೆ.

ಬಸವಕಲ್ಯಾಣದಲ್ಲಿ ನಡೆದ ಚುನಾವಣಾ ಪ್ರಚಾರಕ್ಕೆ ಹೋದಾಗ ಸಹ ತೊಂದರೆ ಕೊಟ್ಟಿದ್ದಾರೆ. ನನ್ನ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ದೆಹಲಿಯಲ್ಲೂ ಕೂಡ ನಲಪಾಡ್​ ನನ್ನ ಮೇಲೆ ಕೂಗಾಡಿ, ಕೆಲ ಶಾಸಕರು ಹಾಗೂ ಕೆಪಿಸಿಸಿ ಕಾರ್ಯದರ್ಶಿಗಳಿಗೆ ಹೊಡೆಯುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಮೂರು ಪುಟಗಳ ಸುದೀರ್ಘ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರ ವಿರುದ್ಧ ಭವ್ಯ ಕಂಪ್ಲೆಂಟ್ ಕೊಟ್ಟಿದ್ದಾರೆ. ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು, ಹೊಡೆಯುವ ಹಾಗೆ ಕೈ ತೋರಿಸಿದ್ದಾರೆ. ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಆರ್ಧ ಗಂಟೆಯ ನಂತರ ಮತ್ತೆ 5 ಜನರು ಬಂದು ನಮ್ಮ ಬಾಸ್ ನಲಪಾಡ್​​ರವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ಭವ್ಯ ಆರೋಪ ಮಾಡಿದ್ದಾರೆ.

ನಾನು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದು ದಿನಾಂಕ: 21.04.2021 ರಂದು ಮದ್ಯಾಹ್ನ 3-45 ಗಂಟೆ ಸಮಯದಲ್ಲಿ ರಾಜ್ಯಾಧ್ಯಕ್ಷರಾದ ರಕ್ಷ ರಾಮಯ್ಯ ರವರ ನೇತೃತ್ಯದಲ್ಲಿ ಯುವ ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ನಿಂದ ಬಳಲುತ್ತಿರವವರಿಗೆ ಆಸ್ಮತ್ರೆ, ಔಷಧಿ, ಪ್ಲಾಸ್ಮಾ ಈ ವ್ಯವಸ್ಥೆಯನ್ನು ಮಾಡಲು ನಾನು ಮತ್ತು ಸಹೋದ್ಯೋಗಿಗಳು ವಾರ್ ರೂಮ್ ಮಾಡುತ್ತಿದ್ದಾಗ, ಶಾಸಕರಾದ ಹಾರಿಸ್ ರವರ ಮಗ ಮೊಹಮ್ಮದ್ ನಲಪಾಡ್, ಭಾಸ್ಕರ್, ಗೋವರ್ಧನ್, ಆಗಸ್ಟಿನ್ ಹಾಗೂ ಇತರೆ 15ಕ್ಕೂ ಹೆಚ್ಚು ಜನರು ಯುವ ಕಾಂಗ್ರೆಸ್ ಕಚೇರಿಗೆ ಏಕಾಏಕಿಯಾಗಿ ಬಂದು ನನ್ನನ್ನು ಗುರಿಯಾಗಿಸಿಕೊಂಡು ಬೈಯ್ದು ಹೊಡೆಯುವ ಹಾಗೆ ಕೈ ತೋರಿಸಿ ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಏಕವಚನದಲ್ಲಿ ನಿಂದಿಸಿ ಅಲ್ಲಿಂದ ಹೊರಟು ಹೋದರು ಆರ್ಧ ಗಂಟೆಯ ನಂತರ ಯಾರೋ 5 ಜನರು ಬಂದು ನಮ್ಮ ಬಾಸ್ ನಲಪಾಡ್ ರವರ ತಂಟೆಗೆ ಬಂದರೆ ನಾವು ನಿಮ್ಮನ್ನು ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳಿ ಹೋಗಿರುತ್ತಾರೆ. ಇದೇ ರೀತಿ ಬಸವ ಕಲ್ಯಾಣದಲ್ಲಿ ನಡೆದ ಚುನಾವಣೆ ಪ್ರಚಾರಕ್ಕೆ ಹೋದಾಗ ಸಹ ತೊಂದರೆಯನ್ನು ಕೊಟ್ಟಿರುತ್ತಾರೆ. ಆದ್ದರಿಂದ ಸದರಿಯವರುಗಳನ್ನು ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿ ಸೂಕ್ತ ಬಂದೋಬಸ್ತ್ ಮಾಡಬೇಕೆಂದು ನೀಡಿದ ದೂರು ಇತ್ಯಾದಿ.

RELATED TOPICS:
English summary :Bangalore

ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#
ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸ್ ಪಡೆ ಬಳಸುವ ಅನಿವಾರ್ಯತೆಯನ್ನ ಜನತೆ ಸೃಷ್ಟಿಸಬಾರದು | ಜನತಾ ನ್ಯೂ&#
ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸ್ ಪಡೆ ಬಳಸುವ ಅನಿವಾರ್ಯತೆಯನ್ನ ಜನತೆ ಸೃಷ್ಟಿಸಬಾರದು | ಜನತಾ ನ್ಯೂ&#
ಕೊರೋನಾದಿಂದ ಕವಿ ಸಿದ್ದಲಿಂಗಯ್ಯ ನಿಧನ! | ಜನತಾ ನ್
ಕೊರೋನಾದಿಂದ ಕವಿ ಸಿದ್ದಲಿಂಗಯ್ಯ ನಿಧನ! | ಜನತಾ ನ್

ನ್ಯೂಸ್ MORE NEWS...