ಕೊರೋನಾ ಪಾಸಿಟಿವ್ ಭಯಾನಕ ಅನುಭವ ತೆರೆದಿಟ್ಟ ನಟಿ ಶಾಲಿನಿ! | ಜನತಾ ನ್ಯೂಸ್

22 Apr 2021
528
shalini satyanarayan tested positive

ಬೆಂಗಳೂರು : ನಟಿ ಶಾಲಿನಿ ಸತ್ಯನಾರಾಯಣ ಅವರಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಶಾಲಿನಿ ಕ್ವಾರಂಟೈನ್ ಆಗಿದ್ದಾರೆ.

ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವ ನಟಿ ಶಾಲಿನಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಜ್ವರ ಹಾಗೂ ಗಂಟಲು ನೋವು ಕೂಡ ಶಾಲಿನಿರವರನ್ನ ಬಾಧಿಸುತ್ತಿದೆ. ಕೋವಿಡ್ ಕಾಯಿಲೆಯಿಂದ ತಮಗಾದ ಭಯಾನಕ ಅನುಭವನ್ನು ನಟಿ ಶಾಲಿನಿ ತೆರೆದಿಟ್ಟಿದ್ದಾರೆ.

ಎಲ್ಲಾ ಸುರಕ್ಷತಾ ಕ್ರಮಗಳನ್ನು ನಾನು ಚಾಚೂ ತಪ್ಪದೆ ಪಾಲಿಸಿದ್ದರೂ ಕೊರೋನಾ ವೈರಸ್ ಧೃಡಪಟ್ಟಿದೆ. ಮೊದಲು ನನಗೆ ಗಂಟಲು ಸಮಸ್ಯೆ ಶುರುವಾಯಿತು.

ನಂತರ ಸುಸ್ತು ಕಾಡಲು ಆರಂಭಿಸಿತು. 12 ಗಂಟೆ ಶೂಟಿಂಗ್ ಮಾಡುವುದರಿಂದ ಸುಸ್ತಾಗುತ್ತಿದೆ ಎಂದು ನಾನು ಭಾವಿಸಿದ್ದೆ. ಆದರೆ, ಅದ್ಯಾವಾಗ ಮೂಗು, ಗಂಟಲು ಮತ್ತು ಕಿವಿ ನೋವು ಶುರುವಾಯಿತೋ.. ಆಗ ವೈದ್ಯರ ಬಳಿ ಹೋದೆ. ಕೊರೋನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಎಂದು ಕಂಡುಬಂತು.

ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಕ್ವಾರಂಟೈನ್ ಆದೆ. ನನ್ನ ಪತಿ ಹಾಗೂ ಮಗಳ ಕೊರೊನಾ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಕಂಡುಬಂತು. ಹೀಗಾಗಿ, ಮಗಳನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ವಿ.

ಈಗ ನನ್ನ ಪತಿಗೂ ಪಾಸಿಟಿವ್ ಕಂಡುಬಂದಿದೆ. ನಾವಿಬ್ಬರೂ ಮನೆಯಲ್ಲೇ ಬೇರೆ ಬೇರೆ ರೂಮ್ನಲ್ಲಿ ಕ್ವಾರಂಟೈನ್ ಆಗಿದ್ದೇವೆ. ನಮ್ಮನ್ನ ನಾವು ನೋಡಿಕೊಳ್ಳುತ್ತಿದ್ದೇವೆ.

ನನ್ನ ಕ್ವಾರಂಟೈನ್ ದಿನಗಳು ಭಯಾನಕವಾಗಿದೆ. ಈಗ ಸ್ವಲ್ಪ ಚೇತರಿಸಿಕೊಂಡಿದ್ದೇನೆ. ಆದರೂ ಶ್ವಾಸಕೋಶ ಸೋಂಕಿನಿಂದ ಉಸಿರಾಟಕ್ಕೆ ತುಂಬಾ ಸಮಸ್ಯೆ ಆಗುತ್ತಿದೆ. ಸಿಂಪಲ್ ಬ್ರೀಥಿಂಗ್ ಎಕ್ಸರ್ಸೈಸ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಬಾಯಿ ತೆರೆಯುವುದಕ್ಕೇ ನೋವಾಗುತ್ತಿದೆ.

ನೋವಿನಿಂದಾಗಿ ಪ್ರತಿ ಗಂಟೆ ಕಣ್ಣೀರು ಹಾಕಿದ್ದೇನೆ. ಒಮ್ಮೊಮ್ಮೆ ಎದ್ದು ಹಲ್ಲುಜ್ಜುವುದಕ್ಕೂ ನನಗೆ ಕಷ್ಟ ಆಗುತ್ತದೆ. ಈ ಕೊರೊನಾ ಕಾಯಿಲೆ ದೇಹವನ್ನು ಮಾತ್ರವಲ್ಲ ಮಾನಸಿಕವಾಗಿಯೂ ನಮ್ಮನ್ನು ಕುಗ್ಗಿಸುತ್ತದೆ.

ರಾತ್ರಿ ಹೊತ್ತು 103 ಡಿಗ್ರಿ ಜ್ವರ ಇರುತ್ತಿತ್ತು. ನಾನು ಎಂಟನೇ ತರಗತಿ ಓದುವಾಗ ಹೀಗೇ ಸಾವು-ಬದುಕಿನ ನಡುವೆ ಹೋರಾಡಿದ್ದೆ. ಒಂದುವರೆ ತಿಂಗಳು ಆಸ್ಪತ್ರೆಯಲ್ಲಿದ್ದೆ. ಆ ಘಟನೆ ಇದೀಗ ಕಣ್ಮುಂದೆ ಬರುತ್ತಿದೆ. ನೀರು ಕುಡಿಯೋದಕ್ಕೂ ತುಂಬಾ ಕಷ್ಟ ಆಗುತ್ತಿದೆ. ಬರೀ ನೀರು ಕುಡಿದು ಎಷ್ಟೋ ಬಾರಿ ವಾಂತಿ ಮಾಡಿದ್ದೇನೆ ಎಂದು ಕೋವಿಡ್ ಕರಾಳ ದಿನಗಳ ಅನುಭವನ್ನು ನಟಿ ಶಾಲಿನಿ ಬಿಚ್ಚಿಟ್ಟಿದ್ದಾರೆ.

ನಮಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ, ನಮಗೆ ಯಾವ ಸಮಸ್ಯೆಯೂ ಕಾಡುತ್ತಿಲ್ಲ, ನಾವು ಹುಷಾರಾಗಿದ್ದೇವೆ ಅಂತ ಹಲವು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕ್ತಾರೆ. ಆದರೆ ಅದು ಹೇಗೆ ಸಾಧ್ಯ? ಕೊರೊನಾ ಬಂದ್ಮೇಲೆ ಚೆನ್ನಾಗಿದ್ದೇನೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಅದಕ್ಕೆ ನಾನೇ ಸಾಕ್ಷಿ. ಸೆಲೆಬ್ರಿಟಿಗಳಾಗಿ ನಮಗೆ ಸಾಮಾಜಿಕ ಜವಾಬ್ದಾರಿ ಇದೆ. ಹೀಗಾಗಿ ಜನರಿಗೆ ರಿಯಾಲಿಟಿಯನ್ನೇ ತಿಳಿಸಬೇಕು ಎಂದು ಶಾಲಿನಿ ಹೇಳಿದ್ದಾರೆ.

RELATED TOPICS:
English summary :shalini satyanarayan tested positive

ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಪಾಕ್ ಪತ್ರಕರ್ತರಿಗೆ
ಪಾಕ್ ಪತ್ರಕರ್ತರಿಗೆ "ಆರ್ಟಿಕಲ್ 370 ಹಿಂತೆಗೆವ" ಕುರಿತು ಆಶ್ವಾಸನೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#

ನ್ಯೂಸ್ MORE NEWS...