24 ಗಂಟೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್! | ಜನತಾ ನ್ಯೂಸ್
ನವದೆಹಲಿ: : ಕಳೆದ 24 ಗಂಟೆಗಳಲ್ಲಿ ಒಟ್ಟು 3,32,730 ಹೊಸ ಕೋವಿಡ್ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಇದು ವಿಶ್ವದಲ್ಲೇ ದಿನವೊಂದಕ್ಕೆ ದಾಖಲಾದ ಹೆಚ್ಚು ಪ್ರಕರಣಗಳಾಗಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶುಕ್ರವಾರ ಬೆಳಗ್ಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ ಈವರೆಗೂ ಒಟ್ಟು 1,62,63,695 ಕರೊನಾ ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 1,93,279 ಸೋಂಕಿತರು ಗುಣಮುಖರಾಗಿದ್ದರೆ, 2,263 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ದೇಶದಲ್ಲಿ 24,28,616 ಸಕ್ರೀಯ ಪ್ರಕರಣಗಳಿದ್ದು, ಈವರೆಗೂ 1,36,48,159 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
RELATED TOPICS:
English summary :Corona Virus in India