ಮಾಸ್ಕ್ ಧರಿಸದೆ ಫೋಟೊಗೆ ಫೋಸ್ ನೀಡಿದ ಉಡುಪಿ ಜಿಲ್ಲಾಧಿಕಾರಿ: ನಿಯಮಗಳು ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲವೇ? ನಿಟ್ಟಿಗರ ಪ್ರಶ್ನೆ? | ಜನತಾ ನ್ಯೂಸ್

24 Apr 2021
515
Udupi

ಉಡುಪಿ : ಮದ್ವೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರ ಫೋಟೋವೊಂದು ವೈರಲ್‌ ಆಗಿದ್ದು, ಈ ಫೋಟೋದಲ್ಲಿ ಡಿಸಿ ಮಾಸ್ಕ್‌ ಹಾಕಿಕೊಳ್ಳದೇ ಇರೋದು, ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ ಇರುವುದು ಕಂಡು ಬರುತ್ತಿದೆ.

ಈಗಾಗಲೇ ಕೊರೊನಾ ಎರಡನೇ ಅಲೆ ಹಿನ್ನಲೆ ರಾಜ್ಯಸರಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮದುವೆ ಸಮಾರಂಭಗಳಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಭಾಗವಹಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

ಆದರೆ ಉಡಪಿ ಜಿಲ್ಲಾಧಿಕಾರಿ ಜಗದೀಶ್ ಅವರು ನಿನ್ನೆ ಶುಕ್ರವಾರ ರಾತ್ರಿ ಎಡಿಷನಲ್ ಎಸ್ಪಿ ಅವರ ಮಗಳ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೆ ಮಾಸ್ಕ್ ಇಲ್ಲದೇ ಫೋಟೋ ಫೋಸ್‌ ಕೊಟ್ಟಿರುವ ಘಟನೆ. ಅವರು ಭಾಗವಹಿಸಿರುವ ಕಾರ್ಯಕ್ರಮಗಳ ಪೋಟೋ ವಿಡಿಯೋ ಇದೀಗ ವೈರಲ್ ಆಗಿದೆ.

ಇವೆಲ್ಲದರ ನಡುವೆ Shame on u Udupi DC ಅಂತ ಫೇಸ್‌ ಬುಕ್‌ ಸೇರಿದಂತೆ ಇತರೆ ಮಾಧ್ಯಮಗಳಲ್ಲಿ ಡಿಸಿ ವಿರುದ್ದ ಜನತೆ ಕಿಡಿಕಾರುತಿದ್ದಾರೆ.

ನಗರದ ಅಮೃತ್ ಗಾರ್ಡನ್‌ನಲ್ಲಿ ಶುಕ್ರವಾರ ರಾತ್ರಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಅವರ ಪುತ್ರಿಯ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಫೋಟೊಗೆ ಫೋಸ್ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಸರ್ಕಾರದ ನಿಯಮಗಳಿರುವುದು ಕೇವಲ ಸಾರ್ವಜನಿಕರಿಗೆ ಮಾತ್ರವೇ, ಜಿಲ್ಲಾಧಿಕಾರಿಗೆ, ಸರ್ಕಾರಿ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಮದುವೆ ಹಾಗೂ ಇತರೆ ಶುಭ ಸಮಾರಂಭಗಳಿಗೆ 50 ಮಂದಿ ಮಾತ್ರ ಸೇರಲು ಅನುಮತಿ ಎಂಬ ನಿಯಮ ಪಾಲನೆ ಆಗಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.

ಜನತೆಗೆ ಬೀದಿಯಲ್ಲಿ ಬುದ್ದಿ ಹೇಳೋ ಡಿಸಿ ಸಾಹೇಬ್ರೇ ಇದೇನಿದು ನಿಮ್ಮ ನಡೆ ಅಂತ ಉಡುಪಿ ಜಿಲ್ಲಾಧಿಕಾರಿ ಜಗದೀಶ್‌ ಅವರು ನೀತಿ ಹೇಳೋರು ನೀರಿನಲ್ಲಿ ನಿಂತಿಕೊಂಡು ………. ಮಾಡಿದ್ದದರಂತೆ ನೀವು ಮಾಡಿದ್ದು, ಮಾಡಿರೋದು ಸರಿನಾ ಅಂತ ಉಡುಪಿ ಹಾಗೂ ರಾಜ್ಯದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ.

ಈಚೆಗೆ ಉಡುಪಿ ಜಿಲ್ಲಾಧಿಕಾರಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಬಸ್‌ಗಳ ವಿರುದ್ಧ ಈಚೆಗೆ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಬಸ್‌ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಬಸ್‌ನಿಂದ ಕೆಳಗಿಸಿದ್ದರು. ಬಸ್‌ನಿಂದ ಇಳಿಸಿದರೆ ಮನೆ ತಲುಪುವುದು ತಡವಾಗುತ್ತದೆ ಎಂದು ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಹಲವರು ಜಿಲ್ಲಾಧಿಕಾರಿ ನಡೆಯನ್ನು ಟೀಕಿಸಿದ್ದರು.

RELATED TOPICS:
English summary :Udupi

ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಪಾಕ್ ಪತ್ರಕರ್ತರಿಗೆ
ಪಾಕ್ ಪತ್ರಕರ್ತರಿಗೆ "ಆರ್ಟಿಕಲ್ 370 ಹಿಂತೆಗೆವ" ಕುರಿತು ಆಶ್ವಾಸನೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಪ್ರಹ್ಲಾದ್​ ಜೋಶಿ | ಜನತಾ ನ್ಯೂ&#
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಪ್ರಹ್ಲಾದ್​ ಜೋಶಿ | ಜನತಾ ನ್ಯೂ&#
ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#
ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#

ನ್ಯೂಸ್ MORE NEWS...