ವಿಕ್ಟೋರಿಯಾ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ, ಪೋರ್ಟೇಬಲ್ ಆಕ್ಸಿಜನ್ ಪೂರೈಕೆ | ಜನತಾ ನ್ಯೂಸ್

25 Apr 2021
427
Sudhakar

ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಿಸಲು ಚಿಂತಿಸಲಾಗಿದೆ. ವೆಂಟಿಲೇಟರ್ ಆಸ್ಪತ್ರೆ ಕೊರತೆ ಕಾಣುತ್ತಿದೆ. ನಿನ್ನೆಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಖಾಸಗಿ ಆಸ್ಪತ್ರೆಗಳಲ್ಲಿ 75% ಕೋವಿಡ್ ಬೆಡ್ ತೆಗೆದುಕೊಳ್ಳುವ ನಿರ್ಧಾರ ಆಗಿದೆ. 2 ರಿಂದ 2500 ಐಸಿಯು ಹಾಸಿಗೆ, ವೆಂಟಿಲೇಟರ್ ಘಟಕಗಳು ‌ಮಾಡಬೇಕು ಅನ್ನೋ ನಿರ್ಧಾರ ಆಗಿದೆ. ಎಲ್ಲಾ ವೈದ್ಯಕೀಯ ಕಾಲೇಜು, ತೃತೀಯ ಚಿಕಿತ್ಸೆ ಹಂತದ ಆಸ್ಪತ್ರೆಗಳಲ್ಲಿ ಮೇಕ್ ಶಿಫ್ಟ್ ಹಾಸ್ಪಿಟಲ್ ಮಾಡಲು‌ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿಕ್ಟೋರಿಯಾ ಆವರಣದಲ್ಲಿ ಒಂದು ಕಟ್ಟಡದಲ್ಲಿ 85 ಹಾಸಿಗೆ, ಪಿಎಂಎಸ್ ಎಸ್ ವೈನಲ್ಲಿ 180 ಹಾಸಿಗೆಯನ್ನು ಸಂಪೂರ್ಣ ಕೋವಿಡ್ ಗೆ ಮೀಸಲಿಡಲಾಗುವುದು. ಜೊತೆಗೆ 100 ರಿಂದ 150 ಐಸಿಯು ಹಾಸಿಗೆ ಇರುವ ಆಸ್ಪತ್ರೆ ನಿರ್ಮಿಸಲಾಗುವುದು. ಇದನ್ನು ಅಂತಿಮಗೊಳಿಸಲಾಗುವುದು. ಹಲವು ಜಿಲ್ಲಾ ಕೇಂದ್ರಗಳ ಮೆಡಿಕಲ್ ಕಾಲೇಜುಗಳ ಆವರಣದಲ್ಲಿ ಈ ರೀತಿ ಮೇಕ್ ಶಿಫ್ಟ್ ಆಸ್ಪತ್ರೆ ರೂಪಿಸಲಾಗುವುದು ಎಂದರು.

ಬೆಂಗಳೂರಿಗೆ 5,000, ಬೇರೆ ಜಿಲ್ಲೆಗಳಿಗೆ ತಲಾ ಒಂದು ಸಾವಿರದಂತೆ ಪೋರ್ಟೇಬಲ್ ಆಕ್ಸಿಜನ್ ನೀಡಲಾಗುವುದು. ಆಕ್ಸಿಜನ್ ಬೇಕಾದವರು ಮಾತ್ರ ಇಂತಹ ಸೌಲಭ್ಯ ಬಳಸಿಕೊಳ್ಳಬಹುದು. ಮನೆ ಆರೈಕೆಯಲ್ಲಿರುವವರಿಗೆ ಸಿಐಐ ಸಹಯೋಗದಲ್ಲಿ ಮಾರ್ಗದರ್ಶನ ನೀಡಲಾಗುವುದು ಎಂದರು.

ಎಲ್ಲಾ ಕಡೆ 100 ರಿಂದ 150 ಬೆಡ್ನ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತದೆ. ಬೀದರ್, ಶಿವಮೊಗ್ಗ, ಮೈಸೂರು, ತುಮಕೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಾಡ್ಯೂಲರ್ ಐಸಿಯು ತೆರೆಯಲು ಸಿಎಂ‌ ಸೂಚಿಸಿದ್ದಾರೆ. ಮೈಲ್ಡ್ ಕೇಸ್ನವರಿಗೆ ಪೋರ್ಟೆಬಲ್ ಆಕ್ಸಿಜನ್ ಸಿಗುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಗೆ 1 ಸಾವಿರ, ನಗರ ವ್ಯಾಪ್ತಿಯಲ್ಲಿ 5 ಸಾವಿರ ಪೋರ್ಟೆಬಲ್ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುವುದು. ಇಸ್ರೇಲ್​ನಿಂದ ಪೋರ್ಟೆಬಲ್ ಆಕ್ಸಿಜನ್ ಉಪಕರಣಗಳು ತರಿಸಲಾಗುತ್ತದೆ ಎಂದು ತಿಳಿಸಿದರು.

RELATED TOPICS:
English summary :Sudhakar

ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 596 ಸಾವು : 39,305 ಹೊಸ ಪ್ರಕರಣ, ಬೆಂಗಳೂರಿನಲ್ಲಿ 16,747 | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಲೈಂಗಿಕ ಕ್ರಿಯೆ ನಡೆಸಿ, ವಿಷ ಕುಡಿದ ಪ್ರೇಮಿಗಳು: ಮಾರ್ಗಮಧ್ಯದಲ್ಲಿ ಪಾಲಕರಿಗೆ ಹೇಳಿದಳು ಸ್ಫೋಟಕ ರಹಸ್ಯ! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ಗಂಗಾ ನದಿಯಲ್ಲಿ ತೇಲುತ್ತಿವೆ ಕೋವಿಡ್ ಸೋಂಕಿತರ​ ಮೃತ ದೇಹಗಳು! | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ರೆಮ್‌ಡಿಸಿವಿರ್ ಕಾಳಸಂತೆ: ದುಬಾರಿ ಬೆಲೆಗೆ ಮಾರಾಟ ಮಾಡ್ತಿದ್ದ ಖದೀಮರು ಅರೆಸ್ಟ್ | ಜನತಾ ನ್ಯೂ&#
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಕೊವಿಡ್​ನಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮೂರನೇಬಾರಿಗೆ ಮುಂದೂಡಿಕೆ! | ಜನತಾ ನ್
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ!  | ಜನತಾ ನ್ಯೂ&#
ಆ್ಯಂಬುಲೆನ್ಸ್​ ಸಿಗದೇ ಬೆಂಗಳೂರಿನಂದ ಮಂಡ್ಯ ತನಕ ಎದೆಗೆ ಮಲಗಿಸಿಕೊಂಡು ತಾಯಿಯ ಮೃತದೇಹ ಆಟೋದಲ್ಲಿ ಸಾಗಿಸಿದ ಮಗ! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಅಸ್ಸಾಂನ 15ನೇ ಮುಖ್ಯಮಂತ್ರಿಯಾಗಿ ಹಿಮಾಂತ ಬಿಸ್ವಾ ಶರ್ಮಾ ಪ್ರಮಾಣ ವಚನ ಸ್ವೀಕರ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ ಬಾಯಿಗೆ ಬೀಗ ಹಾಕಿಕೊಂಡ್ರೆ ಲಾಕ್ ಡೌನ್ ಯಶಸ್ವಿಯಾಗಲಿದೆ: ಕೆ.ಎಸ್.ಈಶ್ವರಪ್ಪ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಹೆಚ್ಚು ಸೋಂಕು ಪತ್ತೆಯಾಗಬಾರದೆಂದು ಸರ್ಕಾರ ಪರೀಕ್ಷೆ ಕಡಿಮೆ ಮಾಡಿದೆ : ಸಿದ್ದರಾಮಯ್ಯ | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ಕೊರೊನಾ ಎರಡನೇ ಅಲೆ ನಡುವೆ ರಾಜ್ಯದಲ್ಲಿ 35 ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆ! | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#
ರವಿ ಡಿ ಚನ್ನಣ್ಣನವರ್‌ಗೆ ಕೊರೊನಾ ಪಾಸಿಟಿವ್ | ಜನತಾ ನ್ಯೂ&#

ನ್ಯೂಸ್ MORE NEWS...