ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು | ಜನತಾ ನ್ಯೂಸ್
ಬಳ್ಳಾರಿ : ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊರೊನಾ ಲಾಕ್ ಡೌನ್ ಕಾರಣ ಸ್ವಗ್ರಾಮಕ್ಕೆ ಬರುವಾಗಿ ನಸುಕಿನ 1.45 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಬಳ್ಳಾರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿದ್ದ ಬಸವರಾಜ ಭೀಮರಾವ ಬೆಳ್ಳೂರು(52), ಅವರ ಪುತ್ರ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಭೀಮರಾವ ಬೆಳ್ಳೂರು (30), ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ಸುನೀಲ್ ಶಿವರಾಜ ಪಾಟೀಲ(30) ಹಾಗೂ ಕಾರು ಚಾಲಕ ಕೊರಡಂಪಳ್ಳಿಯ ರೇವಣಸಿದ್ದ ಬಸವರಾಜ(30) ಎಂದು ಗುರುತಿಸಲಾಗಿದೆ.
ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ತಮ್ಮ ಊರಿಗೆ ವಾಪಸ್ ಆಗುವಾಗ ಇವರಿದ್ದ ಕಾರು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ತಲುಪಿದಾಗ ಲಾರಿ ಢಿಕ್ಕಿ ಹೊಡೆಯಿತೆನ್ನಲಾಗಿದೆ.