ಹಸೆಮಣೆ ಏರಬೇಕಿದ್ದ ಯುವಕ ಆಕ್ಸಿಜನ್ ಸಿಗದೇ ನರಳಾಡಿ ಕೊರೊನಾಗೆ ಬಲಿ | ಜನತಾ ನ್ಯೂಸ್

01 May 2021
573
Bangalore

ಬೆಂಗಳೂರು : ಹಸೆಮಣೆ ಏರಬೇಕಿದ್ದ ವರ ಕೊರೊನಾ ಸೋಂಕಿಗೆ ಬಲಿಯಾದ ಘಟನೆ ಬೆಂಗಳೂರು ನಗರದಲ್ಲಿ ವರದಿಯಾಗಿದೆ.

28 ವರ್ಷದ ಸಾಗರ್ ಎ.ಜಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಯುವಕನಾಗಿದ್ದು, ಕುಟುಂಬಸ್ಥರು ಮುಂದಿನ ತಿಂಗಳು ಯುವಕನಿಗೆ ಮದುವೆ ಮಾಡುವ ಸಿದ್ಧತೆಯಲ್ಲಿದ್ದರು. ಎಂಗೇಜ್ಮೆಂಟ್ ಮಾಡದೆ, ಕೇವಲ ಸರಳ ಮದುವೆಗೆ ಕುಟುಂಬಸ್ಥರು ಪ್ಲಾನ್ ಮಾಡಿದ್ದರು.

ನಗರದ ಟೆಸ್ಕೊ ಖಾಸಗಿ ಕಂಪನಿಯಲ್ಲಿ ಐಸಿ ರೋಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಾಗರ್, ಐಸಿಯು ಬೆಡ್, ಆಕ್ಸಿಜನ್ ಸಿಗದೆ ನರಳಾಡಿ ಸಾವನ್ನಪ್ಪಿದ್ದಾರೆ. ಸದ್ಯ ಮೃತನ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

78 ವರ್ಷದ ಯಡಿಯೂರಪ್ಪ ಕೊರೊನಾದಿಂದ ಚಿಕಿತ್ಸೆ ಪಡೆದು ಗುಣಮುಖರಾಗ್ತಾರೆ. ಆದರೆ 28 ವರ್ಷದ ನನ್ನ ಸ್ನೇಹಿತನಿಗೆ ಚಿಕಿತ್ಸೆ ಲಭ್ಯವಾಗಲಿಲ್ಲ. ಕನಿಷ್ಠ ಪಕ್ಷ ಬೆಡ್ ವ್ಯವಸ್ಥೆ ಮಾಡಲು ಕೂಡ ಆಗಲಿಲ್ಲ. ಆದರೆ ಸಿಎಂ, ಮಿನಿಸ್ಟರ್, ಶಾಸಕರಿಗೆ ಮಣಿಪಾಲ್, ನಮ್ಮಂತರವರು ಮಣ್ಣುಪಾಲು ಎಂದು ಸ್ನೇಹಿತನನ್ನು ಕಳೆದುಕೊಂಡ ಯುವಕ ಆಕ್ರೋಶ ಹೊರಹಾಕಿದ್ದಾರೆ.

ಏ.12 ರಂದು ನಾಗರಬಾವಿಯ ಮೆಕ್ಲೂ ಲ್ಯಾಬ್ ಟೆಸ್ಟ್ ಮಾಡಿಸಿದಾಗ ಸಾಗರ್ ಕೊರೊನಾ ವರದಿ ನೆಗೆಟಿವ್ ಬಂದಿತ್ತು. ಆದರೆ ಯುಗಾದಿ ಹಬ್ಬದ ನಂತರ ಚಳಿ, ಜ್ವರ ಕಾಣಿಸಿಕೊಂಡಿತ್ತು. ಆಗ ವೈದ್ಯರರನ್ನ ಭೇಟಿ ತಪಾಸಣೆ ನಡೆಸಿದ ವೇಳೆ ಕೊರೊನಾ‌ ಸೋಂಕು ದೃಢವಾಗಿತ್ತು.

ಬಿಬಿಎಂಪಿ ಮಾಹಿತಿ ಮೇರೆಗೆ ಹೋಂ ಐಸೋಲೇಷನ್ ಆಗಿದ್ದರು. ಆದರೆ ಹಬ್ಬದ ಕಳೆದ ಒಂದು ವಾರದ ಬಳಿಕ ಮಧ್ಯ ರಾತ್ರಿ ಸುಸ್ತು, ಬೇಧಿ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ವೇಳೆ ಆಸ್ಪತ್ರೆ ತೆರಳಿ ಸಿಟಿ ಸ್ಕ್ಯಾನಿಂಗ್ ಮಾಡಿಸಿದರೆ ನ್ಯುಮೋನಿಯಾ ತುಂಬಾ ಸೀರಿಯಸ್ ಆಗಿದೆ ಎಂದರು. ತುಂಬಾ ಸೀರಿಯಸ್ ಆಗಿದೆ ಆದರೂ, ಎಲ್ಲೂ ಐಸಿಯು ಬೆಡ್ ಸಿಕ್ಕಿಲ್ಲ.

ನಮಗಾದ ರೀತಿ ಯಾರಿಗೂ ಆಗದಿರಲಿ ಎಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದು, ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED TOPICS:
English summary :Bangalore

ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಪಾಕ್ ಪತ್ರಕರ್ತರಿಗೆ
ಪಾಕ್ ಪತ್ರಕರ್ತರಿಗೆ "ಆರ್ಟಿಕಲ್ 370 ಹಿಂತೆಗೆವ" ಕುರಿತು ಆಶ್ವಾಸನೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#

ನ್ಯೂಸ್ MORE NEWS...