ರಾಜ್ಯದಲ್ಲಿ ಇವತ್ತೂ ಕೊರೋನಾ ಅಬ್ಬರ: 49,058 ಮಂದಿಗೆ ಸೋಂಕು, 328 ಸೋಂಕಿತರು ಸಾವು! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಇವತ್ತು ಒಂದೇ ದಿನ 49,058 ಜನರಿಗೆ ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 17,90,104 ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಬೆಂಗಳೂರು ನಗರದಲ್ಲಿ 23,706 ಸೇರಿದಂತೆ, ಇಂದು ಬರೋಬ್ಬರಿ 49,058 ಮಂದಿಗೆ ಸೋಂಕು ತಗುಲಿದ್ದು, 328 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 23,706 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 139 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇಂದು 18,943 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 23,706 ಜನರಿಗೆ ಸೋಂಕು ತಗಲಿದ್ದು 139 ಮಂದಿ ಸಾವನ್ನಪ್ಪಿದ್ದಾರೆ. 3,32,732 ಸಕ್ರಿಯ ಪ್ರಕರಣಗಳಿವೆ.
ಇನ್ನೂ ಇಂದು 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 139 ಜನರು ಸೇರಿದಂತೆ ರಾಜ್ಯಾಧ್ಯಂತ ಕಿಲ್ಲರ್ ಕೊರೋನಾಗೆ 328 ಜನರು ಬಲಿಯಾಗಿದ್ದಾರೆ. ಈ ಮೂಲಕ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ 17,212ಕ್ಕೆ ಏರಿಕೆಯಾಗಿದೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 665, ಬಳ್ಳಾರಿ 922, ಬೆಳಗಾವಿ 843, ಬೆಂಗಳೂರು ಗ್ರಾಮಾಂತರ 963, ಬೆಂಗಳೂರು ನಗರ 23,706, ಬೀದರ್ 336, ಚಾಮರಾಜನಗರ 707, ಚಿಕ್ಕಬಳ್ಳಾಪುರ 609, ಚಿಕ್ಕಮಗಳೂರು 452, ಚಿತ್ರದುರ್ಗ 126, ದಕ್ಷಿಣ ಕನ್ನಡ 1,191, ದಾವಣಗೆರೆ 672, ಧಾರವಾಡ 824, ಗದಗ 191, ಹಾಸನ 1,403, ಹಾವೇರಿ 236, ಕಲಬುರಗಿ 1,652, ಕೊಡಗು 697, ಕೋಲಾರ 756, ಕೊಪ್ಪಳ 357, ಮಂಡ್ಯ 1,301, ಮೈಸೂರು 2,531, ರಾಯಚೂರು 819, ರಾಮನಗರ 413, ಶಿವಮೊಗ್ಗ 635, ತುಮಕೂರು 2,418, ಉಡುಪಿ 1,526, ಉತ್ತರ ಕನ್ನಡ 734, ವಿಜಯಪುರ 662 ಮತ್ತು ಯಾದಗಿರಿಯಲ್ಲಿ 721 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.