ರೋಹಿಣಿ ಸಿಂಧೂರಿ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್: ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್​ ಮುಖಂಡನ ಗಂಭೀರ ಆರೋಪ | ಜನತಾ ನ್ಯೂಸ್

09 May 2021
405
Rohini sinduri

ಮೈಸೂರು : ಡಿ.ಸಿ ರೋಹಿಣಿ ಸಿಂಧೂರಿ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ನಿರ್ಮಾಣ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ನಿವಾಸವು ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು ಎಂದು ಜೆಡಿಎಸ್‌ ಮುಖಂಡ ಕೆ.ವಿ. ಮಲ್ಲೇಶ್‌ ಕಿಡಿ ಕಾರಿದ್ದಾರೆ.

ಭಾನುವಾರ ಮೈಸೂರಲ್ಲಿ ಮಾತಾಡಿದ ಕೆ. ವಿ. ಮಲ್ಲೇಶ್, ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದರು.

ಕೋವಿಡ್ ಕಾಲದಲ್ಲಿ ದಿನದ 24 ಗಂಟೆಯೂ ಕಾಲ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಿ. ಹಾಗಾದರೆ, ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತದೆ. ಜನಪರವಾಗಿ ಚಿಂತಿಸುವ ಜಿಲ್ಲಾಧಿಕಾರಿಯಾದವರು ಇಂತಹ ಕೆಲಸ ಮಾಡುವರೇ? ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ ಎಂದಿದ್ದಾರೆ.

janata

ಆರ್.ಟಿ.ಐ ಮೂಲಕ ಮಾಹಿತಿ ಕೋರುವೆ. ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು ಎಂದು ತಾಯಂದಿರ ದಿನವಾದ ಇಂದು ಆಗ್ರಹಿಸುತ್ತೇನೆ. ಜನರಿಗೆ ಒಳ್ಳೆಯದು ಮಾಡಲು ಆಗದಿದ್ದರೆ, ಮೈಸೂರಿನಿಂದ ನಿರ್ಗಮಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡರೂ ನಿಮ್ಮ ಹತ್ತಿರ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಯಾರೇ ಪಾರಂಪರಿಕ ಕಟ್ಟಡದ ಸಮೀಪ ಕಟ್ಟಡ ಕಟ್ಟಬೇಕಾದರೆ ಡಿಸಿ ಅನುಮತಿ ಕಡ್ಡಾಯ. ಈ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದರು.

ಸ್ವಿಮ್ಮಿಂಗ್‌ ಪೂಲ್ ನಿರ್ಮಾಣದಿಂದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿದೆ ಎಂದು ಪೂಲ್​ನ ಚಿತ್ರಗಳನ್ನು ಪ್ರದರ್ಶಿಸಿ ಮಲ್ಲೇಶ್ ಗಂಭೀರ ಆರೋಪ ಮಾಡಿದರು.

RELATED TOPICS:
English summary :Rohini sinduri

ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#

ನ್ಯೂಸ್ MORE NEWS...