ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್ ಡೌನ್! | ಜನತಾ ನ್ಯೂಸ್

10 May 2021
416
HD Kumaraswamy

ಬೆಂಗಳೂರು : ಲಾಕ್​ಡೌನ್ ಅಲ್ಲದ ಕಠಿಣ ಲಾಕ್​ಡೌನ್. ಜನ ಹೊರಗೆ ಬಂದರೆ ದನಕ್ಕೆ ಬಡಿದಂತೆ ಬಡಿಯುವ ಲಾಕ್​ಡೌನ್ ಇಂದಿನಿಂದ ಜಾರಿಗೆ ಬರಲಿದೆ. ಜನಸಂಚಾರ ತಡೆಯುವುದೇ ಲಾಕ್​​ಡೌನ್ ಎಂದು ಭಾವಿಸಿರುವ ಸರ್ಕಾರ, ಸಂಕಷ್ಟದಲ್ಲಿ ನಾಗರಿಕರನ್ನು ಮರೆತಿರುವುದು ದುರಂತ. ನಾವು ಸೂಚಿಸಿದ ಲಾಕ್​ಡೌನ್ ಇದಾಗಿರಲಿಲ್ಲ. ನಾವು ಹೇಳಿದ್ದು ಜನಹಿತದ ಲಾಕ್​ಡೌನ್ ಆಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಟ್ವೀಟ್​​ ಮಾಡಿದ್ದಾರೆ.

ಲಾಕ್ ಡೌನ್ ಮಾಡಿ ಜನರ ಜೀವ ಉಳಿಸಿ ಎಂದು ನಾನು ಮೊದಲೇ ಹೇಳಿದ್ದೆ. ಹಾಗೆ ಹೇಳುವಾಗ ಲಾಕ್ ಡೌನ್ ನಿಂದ ಜನ ಜೀವನಕ್ಕೆ ಆಗುವ ತೊಂದರೆಗಳಿಗೆ ಪರಿಹಾರ ಕ್ರಮಗಳಿರಬೇಕು, ಜನರ ಅಗತ್ಯವನ್ನು ಸರ್ಕಾರ ಭರಿಸಬೇಕೆಂದು ಹೇಳಿದ್ದೆ. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ನೀಡಬೇಕಾದ ಪರಿಹಾರ ಕ್ರಮಗಳಿಂದ ವಿಮುಖವಾಗಿರುವ ಸರ್ಕಾರ ಬೇಜವಾಬ್ದಾರಿತನ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನರಿಗೆ ಎಲ್ಲಿ ಪರಿಹಾರ ನೀಡಬೇಕಾಗುತ್ತದೆಯೋ, ಜೀವನ ನಿರ್ವಹಣೆಗೆ ನೆರವು ನೀಡಬೇಕಾಗಿ ಬರುತ್ತದೆಯೋ ಎಂಬ ದುರಾಲೋಚನೆ ಮಾಡಿರುವ ಸರ್ಕಾರ ಲಾಕ್ ಡೌನ್ ಎಂಬ ಪದವನ್ನು ಧೈರ್ಯದಿಂದ ಹೇಳುತ್ತಲೇ ಇಲ್ಲ. ಕಠಿಣ ನಿಯಮ ಎಂದು ಹೇಳಿ ಲಾಕ್ ಡೌನ್ ನಿಂದ ದೂರ ನಿಂತಿದೆ. ಕೇಂದ್ರವೂ ಇದೇ ಕುತಂತ್ರದ ನಡೆಯನ್ನು ಅನುಸರಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.

ಲಾಕ್ ಡೌನ್ ಎಂದರೆ ಜನ ಹೊರ ಹೋಗಲಾಗದ ಪರಿಸ್ಥಿತಿ. ಬದುಕಿನ ಅಗತ್ಯವನ್ನು ದುಡಿದುಕೊಳ್ಳಲಾಗದ ದುಸ್ಥಿತಿ. ಸರ್ಕಾರವೇ ಇದರ ಹೊಣೆಗಾರ, ಅದಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂಬುದೂ ನನ್ನ ನಿಲುವು, ಸಲಹೆ. ಸರ್ಕಾರ ಸಂಪೂರ್ಣ ಲಾಕ್ ಡೌನ್ ಘೋಷಿಸಬೇಕಿತ್ತು ಮತ್ತು ಪರಿಹಾರ ನೀಡಬೇಕಿತ್ತು. ಆದರೆ ಈವರೆಗೆ ಪರಿಹಾರ ಪ್ಯಾಕೇಜ್ ನ ಮಾತೇ ಇಲ್ಲ ಎಂದಿದ್ದಾರೆ.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಕೇಂದ್ರ ಸರ್ಕಾರಕ್ಕೆ ಕಾಯದೇ ಲಾಕ್ ಡೌನ್ ಮಾಡಿವೆ. ಜನರಿಗೆ ಆಹಾರ ಸೇರಿದಂತೆ ಪರಿಹಾರ ಘೋಷಿಸಿವೆ. ಆಂಧ್ರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಇದು ಸರ್ಕಾರಗಳ ಜವಾಬ್ದಾರಿಯುತ ನಡೆ. ಆದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೇಂದ್ರದ ದುರ್ನಡೆಯನ್ನು ರಾಜ್ಯ ಅನುಸರಿಸಬಾರದು ಎಂದು ಒತ್ತಾಯಿಸಿದ್ದಾರೆ.

ಮನೆಗಳಿಂದ ಹೊರ ಬರುವ ಜನರ ಮೇಲೆ ದರ್ಪ ಪ್ರದರ್ಶಿಸುವುದನ್ನು ಬಿಟ್ಟು, ಜನ ಹೊರಗೆ ಬಾರದಂತೆ ಅವರ ಅಗತ್ಯಗಳನ್ನು ಪೂರೈಸುವ, ಪರಿಹಾರ ಒದಗಿಸುವ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು. ಈ ವಿಚಾರದಲ್ಲಿ ನೆರೆ ರಾಜ್ಯಗಳು ಅನುಸರಿಸುತ್ತಿರುವ ಕ್ರಮಗಳನ್ನು ರಾಜ್ಯ ಅವಲೋಕಿಸಬೇಕು. ಜನರ ಆರೋಗ್ಯ ಎಷ್ಟು ಮುಖ್ಯವೋ ಜನರ ಬದುಕೂ ಅಷ್ಟೇ ಮುಖ್ಯವಾಗಬೇಕು ಎಂದು ಅವರು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

RELATED TOPICS:
English summary :HD Kumaraswamy

ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ  | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ  ಸ್ಪಷ್ಟನೆ | ಜನತಾ ನ್
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ ಸ್ಪಷ್ಟನೆ | ಜನತಾ ನ್
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ?  | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#

ನ್ಯೂಸ್ MORE NEWS...