ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ಮಾಡಿದ ಪಿಎಫ್‌ಐ ಯುವಕರು! | ಜನತಾ ನ್ಯೂಸ್

10 May 2021
487
Chamarajanagara

ಚಾಮರಾಜನಗರ : ವಯೋವೃದ್ದರೊಬ್ಬರು ಸಹಜವಾಗಿ ಮೃತಪಟ್ಟರೂ ಕೊರೋನಾ ಸೋಂಕು ಇರಬಹುದೆಂದು ಭಾವಿಸಿದ ಗ್ರಾಮಸ್ಥರು ಅವರ ಶವಸಂಸ್ಕಾರಕ್ಕೆ ಹೆಗಲು ಕೊಡದೆ ಕೊನೆಗೆ ಬೈಕ್ ನಲ್ಲಿ ಶವ ಸಾಗಿಸಿದ ಹೃದಯವಿದ್ರಾವಕ ಸಂಗತಿಯು ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.

ಈ ಗ್ರಾಮದ 75 ವರ್ಷ ಪ್ರಾಯದ ವೃದ್ಧರೋರ್ವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಆದರೆ ಇದನ್ನೂ ಕೊರೊನಾ ಸಾವು ಎಂದೇ ತೀರ್ಮಾನಿಸಿಕೊಂಡ ಅಕ್ಕ ಪಕ್ಕದವರು, ಅವರ ಶವಕ್ಕೆ ಹೆಗಲು ಕೊಡಲು ಮುಂದೆ ಬಂದಿಲ್ಲ.

ಯಾರೂ ಶವಸಂಸ್ಕಾರಕ್ಕೆ ಮುಂದಾಗದಿದ್ದಾಗ ಕೊನೆಗೆ ಪಿಎಫ್‌ಐ ಕಾರ್ಯಕರ್ತರು ಬೈಕ್ ನಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದಿದ್ದಾರೆ.

ಕೊನೆಗೆ ವೃದ್ಧನ ಸಂಬಂಧಿಕರು ಕೊಳ್ಳೇಗಾಲದ ಪಿಎಫ್‌ಐ ಕಾರ್ಯಕರ್ತರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ತಕ್ಷಣ ಆಲಹಳ್ಳಿ ಗ್ರಾಮಕ್ಕೆ ಧಾವಿಸಿದ ಪಾಪುಲರ್ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಸದಸ್ಯರು ವಾಹನ ಅಥವಾ ಆಂಬ್ಯುಲೆನ್ಸ್ ಸಿಗದೇ ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವಸಂಸ್ಕಾರ ನೆರವೇರಿಸಿದ್ದಾರೆ.

ಪಿಎಫ್‌ಐ ಸಂಘಟನೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಪ್ರಯಾಸಪಟ್ಟು ಕೊಂಡೊಯ್ದಿದ್ದಾರೆ. ಕೊನೆಗೆ ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗಲೂ ಯಾರೊಬ್ಬರು ಸಹ ಮುಂದೆ ಬಾರದೆ ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲ ಮೃತರ ಜಮೀನಿನಲ್ಲೂ ಮಣ್ಣು‌ ಮಾಡಲು ಅವಕಾಶ ನೀಡದೆ ಸ್ಥಳೀಯರು ಅಮಾನವೀಯತೆ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್‌ ಠಾಣೆಗೆ ಸುದ್ದಿ ಮುಟ್ಟಿಸಲಾಯಿತು. ಆಗ ಪೋಲಿಸರು ಸ್ಥಳಕ್ಕೆ ತೆರಳಿ ಶವ ಹೂಳಲು ಗೋಮಾಳದಲ್ಲಿ ಜಾಗ‌ ತೋರಿಸಿದ್ದಾರೆ. ನಂತರ ಸಂಘಟನೆಯ ಯುವಕರೇ ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಪಿಎಫ್‌ಐ ಯುವಕರ ತಂಡದ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

RELATED TOPICS:
English summary :Chamarajanagara

ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ  | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ  ಸ್ಪಷ್ಟನೆ | ಜನತಾ ನ್
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ ಸ್ಪಷ್ಟನೆ | ಜನತಾ ನ್
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ?  | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#

ನ್ಯೂಸ್ MORE NEWS...