120ಟನ್ ಆಮ್ಲಜನಕ ಹೊತ್ತು ರಾಜ್ಯಕ್ಕೆ ಬಂದ ರೈಲು! | ಜನತಾ ನ್ಯೂಸ್

11 May 2021
416
Bangalore

ಬೆಂಗಳೂರು : ರಾಂಚಿಯ ಟಾಟಾನಗರದಿಂದ ರಾಜ್ಯಕ್ಕೆ ಆಕ್ಸಿಜನ್ ಕಂಟೇನರ್‌ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಇಂದು ಬೆಂಗಳೂರು ತಲುಪಿದೆ.

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದ್ದು, ಸುಮಾರು 120 ಟನ್ ಆಕ್ಸಿಜನ್ ಹೊತ್ತ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಜೆಮ್‌ಶೆಡ್‌ಪುರ್‌ನಿಂದ ಸೋಮವಾರ ಹೊರಟಿತ್ತು. ಇಂದು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಿದೆ.

ಗ್ರೀಮ್ ಕಾರಿಡಾರ್​ಗಳ ಮೂಲಕ ಜೆಮ್​ಶೆಡ್​ಪುರದಿಂದ ನಿನ್ನೆ ಬೆಳಗಿನ ಜಾವ ಹೊರಟ ಈ ರೈಲು 30 ತಾಸಿನ ಬಳಿಕ ಇಂದು ಬೆಳಗ್ಗೆ 9.30ಕ್ಕೆ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ತಲುಪಿತು.

ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‌ಗಳು ತಲುಪಿವೆ. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್‌ಗಳು ಈಗ ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಆಗಮಿಸಿವೆ.

janata

ಕ್ಯಾಂಟರ್​ನಲ್ಲಿರುವ ಆಕ್ಸಿಜನ್ ಅನ್​ಲೋಡ್ ಮಾಡಿದ ನಂತರ ಖಾಲಿ ಕಂಟೇನರ್​ಗಳನ್ನು ಕಳಿಂಗನಗರ್​ಗೆ ಕಳುಹಿಸಲಾಗುತ್ತದೆ. ಕಳಿಂಗ ನಗರ್​ಗೆ ಖಾಲಿ ಕಂಟೇನರ್​​ಗಳು ತಲುಪಲು ಸುಮಾರು 30 ಗಂಟೆ ಸಮಯ ಹಿಡಿಯುತ್ತದೆ. ಅಲ್ಲಿ ಐದಾರು ಗಂಟೆಗಳಲ್ಲಿ ಆಕ್ಸಿಜನ್ ರೀಫಿಲ್​ ಆಗಲಿದ್ದು ಮತ್ತೆ ಅಲ್ಲಿಂದ ಬೆಂಗಳೂರಿಗೆ ಆಕ್ಸಿಜನ್ ತುಂಬಿದ ಕಂಟೇನರ್​ಗಳು ಬಂದು ತಲುಪಲಿವೆ.

ಇನ್ನು ಈ ಬಗ್ಗೆ ಮೇ 10 ರಂದು ಮಾತನಾಡಿದ್ದ ಕಂದಾಯ ಸಚಿವ ಅಶೋಕ್, ಆಕ್ಸಿಜನ್ ಕೊರತೆ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ. ರೈಲಿನ ಮೂಲಕ ಆಕ್ಸಿಜನ್ ರಾಜ್ಯಕ್ಕೆ ಬರುತ್ತದೆ. ಎಲ್ಲಾ ಕೊವಿಡ್ ಸೆಂಟರ್ಗಳಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಬೆಂಗಳೂರಿನಲ್ಲಿ 2 ಸಾವಿರ ಕಾನ್ಸಂಟ್ರೇಟರ್ ಅಳವಡಿಸುತ್ತೇವೆ. ಪ್ರತಿ ತಾಲೂಕಿಗೂ 40 ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಕೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಅಶೋಕ್ ತಿಳಿಸಿದ್ದರು.

ಇನ್ನು ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟವನ್ನು ಬಲಪಡಿಸಲು ಪ್ರಯತ್ನಿಸಿದ ರಾಜ್ಯ ಮತ್ತು ಕರ್ನಾಟಕದ ಇತರ ಕೇಂದ್ರ ಸಚಿವರಿಗೆ ನಿರಂತರ ಬೆಂಬಲ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಟ್ವೀಟ್ ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

RELATED TOPICS:
English summary :Bangalore

ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#
ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಜೂನ್ ಅಂತ್ಯದ ಒಳಗಾಗಿ ಪೂರ್ಣ: ಸಿಎಂ ಯಡಿಯೂರಪ್ಪ ‌ | ಜನತಾ ನ್ಯೂ&#
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಜೂನ್ ಅಂತ್ಯದ ಒಳಗಾಗಿ ಪೂರ್ಣ: ಸಿಎಂ ಯಡಿಯೂರಪ್ಪ ‌ | ಜನತಾ ನ್ಯೂ&#
ರೋಹಿಣಿ ಸಿಂಧೂರಿ ಅವರ ಬಳಿ ದಾಖಲೆಗಳು ಇದೆ ಎಂದರೆ ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? | ಜನತಾ ನ್ಯೂ&#
ರೋಹಿಣಿ ಸಿಂಧೂರಿ ಅವರ ಬಳಿ ದಾಖಲೆಗಳು ಇದೆ ಎಂದರೆ ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? | ಜನತಾ ನ್ಯೂ&#
ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ  ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#

ನ್ಯೂಸ್ MORE NEWS...