ಮಲಗಿದ್ದ ವೃದ್ಧೆಯನ್ನು ಎಳೆದೊಯ್ದು ಕೊಂದ ಬೀದಿ ನಾಯಿಗಳು! | ಜನತಾ ನ್ಯೂಸ್
ಬೆಂಗಳೂರು : ಬೀದಿನಾಯಿಗಳ ದಾಳಿಗೆ ವೃದ್ಧೆ ಬಲಿಯಾಗಿದ್ದು, ತಡರಾತ್ರಿ ನಾಯಿಗಳು ದಾಳಿ ಮಾಡಿ ವೃದ್ಧೆಯನ್ನು ತಿಂದು ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ಭಿಕ್ಷುಕಿ ವೃದ್ಧೆ ನಿನ್ನೆ ರಾತ್ರಿ 9:30ರ ಸುಮಾರಿಗೆ ಬೀದಿ ಬದಿಯಲ್ಲಿ ಮಲಗಿದ್ದ ವೇಳೆ 7-8 ಶ್ವಾನಗಳು ಅವರ ಮೇಲೆ ದಾಳಿ ಮಾಡಿದ್ದವು. ಅಲ್ಲಿದ್ದ ಜನರು ಆ ನಾಯಿಗಳನ್ನ ಓಡಿಸಿ ವೃದ್ಧೆಯನ್ನ ರಕ್ಷಿಸಿದ್ದರು. ಮತ್ತೆ ನಾಯಿಗಳು ರಾತ್ರಿ 11.30ರ ವೇಳೆಗೆ ವೃದ್ಧೆಯನ್ನ ಎಳೆದೊಯ್ದು ಭೀಕರವಾಗಿ ದಾಳಿ ಮಾಡಿ ಕಚ್ಚಿ ಕೊಂದಿವೆ ಎನ್ನಲಾಗಿದೆ.
ವೃದ್ಧೆಯನ್ನು ಎಳೆದೊಯ್ದ ಶ್ವಾನಗಳು, ಆಕೆಯನ್ನು ಕೊಂದು ಅಲ್ಪಸ್ವಲ್ಪ ತಿಂದಿವೆ. ವೃದ್ಧೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಲಾಕ್ಡೌನ್ ಕಾರಣ ಶ್ವಾನಗಳಿಗೆ ಊಟ ಸಿಗದೇ ಮನುಷ್ಯರನ್ನು ಟಾರ್ಗೆಟ್ ಮಾಡುತ್ತಿವೆ ಎಂದು ಊಹಿಸಲಾಗಿದೆ. ಘಟನೆ ಬಗ್ಗೆ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.