ಕೊರೋನ ಪ್ರಕರಣ ಇಳಿಕೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದ್ದಾರೆ: ಡಿ.ಕೆ.ಶಿವಕುಮಾರ್ ಆರೋಪ | ಜನತಾ ನ್ಯೂಸ್

15 May 2021
419
DKShivakumar

ಬೆಂಗಳೂರು : ರಾಜ್ಯದಲ್ಲಿ ಕೊವಿಡ್ ಟೆಸ್ಟ್ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೊವಿಡ್ ಟೆಸ್ಟ್ ಕಡಿಮೆ ಮಾಡಲು ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ.

ರಾಜ್ಯದಲ್ಲಿ ಕೊರೋನ ಸೋಂಕು ಪ್ರಕರಣ ಸಂಖ್ಯೆ ಕಡಿಮೆ ತೋರಿಸಲು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವುದು ಸರಿಯಲ್ಲ. ಇದು ಸರ್ಕಾರವೇ ಜನರನ್ನು ಹತ್ಯೆ ಮಾಡುವ ನಿರ್ಧಾರ. ಜನರ ಸಾವಿಗೆ ಸರ್ಕಾರವೇ ನೇರ ಕಾರಣವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

ಲಾಕ್​ಡೌನ್​ ವಿಚಾರದಲ್ಲಿ ನಾವು ಮೂಗು ತುರಿಸುವುದಿಲ್ಲ. ಲಾಕ್​ಡೌನ್​ ನಿರ್ಧಾರವನ್ನು ರಾಜ್ಯ ಸರ್ಕಾರಕ್ಕೆ ಬಿಡುತ್ತೇನೆ. ಹಾಗಂತ ಮಾಡಿದ ತಪ್ಪು ತಿದ್ದಿಕೊಳ್ಳದಿದ್ದರೆ ಸುಮ್ಮನೆ ಇರಲ್ಲ ಎಂದು ಹೇಳಿದ್ದಾರೆ.

ಬೈ ಎಲೆಕ್ಷನ್ ಕರ್ತವ್ಯಕ್ಕೆ ಹೋಗಿದ್ದ ಶಿಕ್ಷಕರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಡಿಕೆಶಿ ಇದಕ್ಕೆ ನಮ್ಮ ಸ್ವಯಂಕೃತ ಅಪರಾಧವೇ ಕಾರಣ. ಆಡಳಿತ ನಡೆಸುವವರೇ ಇದಕ್ಕೆ ಹೊಣೆ. ಉಪಚುನಾವಣೆ ವೇಳೆ ಎಲ್ಲರೂ ಜಾಗೃತಿ ವಹಿಸಬೇಕಾಗಿತ್ತು. ಯಾವ ಪಕ್ಷದವರೂ ಸರಿಯಾದ ಅಂತರವನ್ನು ಕಾಪಾಡಲಿಲ್ಲ. ನಾನು ಪ್ರಯತ್ನಿಸಿದೆ ಆದರೆ ಜನರ ಜಂಜಾಟ ಹೆಚ್ಚಾಗಿತ್ತು. ಸರ್ಕಾರ ಚುನಾವಣೆ ಮಾಡುವುದು ಬೇಡವೆಂದು ಹೇಳಿದ್ದರೆ, ಚುನಾವಣಾ ಆಯೋಗ ಏನೂ ಮಾಡುವುದಕ್ಕೆ ಆಗುತ್ತಿರಲಿಲ್ಲ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಐಸಿಎಂಆರ್ ವರದಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದೆ. ಸರ್ಕಾರ ಶೇ.50 ರಷ್ಟು ಪರೀಕ್ಷೆ ಕಡಿಮೆ ಮಾಡಲು ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಪರೀಕ್ಷೆ ಮಾಡಿದಷ್ಟು ಜನ ಜಾಗೃತರಾಗಿರುತ್ತಾರೆ. ಸೋಂಕಿನ ಪ್ರಕರಣ ಹೆಚ್ಚಾಗುತ್ತದೆ ಎಂದು ಪರೀಕ್ಷೆ ಪ್ರಮಾಣ ಕಡಿಮೆ ಮಾಡುವುದು ಸರಿಯಲ್ಲ. ಜನರನ್ನು ಸರ್ಕಾರವೇ ಹತ್ಯೆ ಮಾಡಿದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಹೆಚ್ಚಿನ ಪರೀಕ್ಷೆ ನಡೆಸಬೇಕು. ಇದರಿಂದ ಸೋಂಕಿತರು ಆರಂಭದಲ್ಲೇ ಗುಣಪಡಿಸಿಕೊಳ್ಳಲು ನೆರವಾಗುತ್ತದೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ ಈ ರೀತಿ ಆದೇಶ ನೀಡಲಾಗಿದೆ ಎಂದರು.

ಮಂತ್ರಿಗಳು ಈಗ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಕೆಲಸ ಮಾಡಿ ಎಂದು ನಾನು ಕಳೆದ ತಿಂಗಳ 18ರಂದೇ ಹೇಳಿದ್ದೆ. ವಿರೋಧ ಪಕ್ಷದವರು ಹೇಳಿದ್ದನ್ನು ಮಾಡಲು ಈ ಸರ್ಕಾರ ಬೇಕಾ? ಇವರ ಕೈಯಲ್ಲಿ ಇದನ್ನು ನಿಭಾಯಿಸಲು ಸಾಧ್ಯವಿಲ್ಲ. ಇವರು ಮನೆಗೆ ಹೋಗಿ, ರಾಜ್ಯಪಾಲರ ಆಡಳಿತ ಬರುವುದೇ ಉತ್ತಮ ಎಂದು ತಿಳಿಸಿದರು.

RELATED TOPICS:
English summary :DKShivakumar

ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#
ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ | ಜನತಾ ನ್ಯೂ&#
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಜೂನ್ ಅಂತ್ಯದ ಒಳಗಾಗಿ ಪೂರ್ಣ: ಸಿಎಂ ಯಡಿಯೂರಪ್ಪ ‌ | ಜನತಾ ನ್ಯೂ&#
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಜೂನ್ ಅಂತ್ಯದ ಒಳಗಾಗಿ ಪೂರ್ಣ: ಸಿಎಂ ಯಡಿಯೂರಪ್ಪ ‌ | ಜನತಾ ನ್ಯೂ&#
ರೋಹಿಣಿ ಸಿಂಧೂರಿ ಅವರ ಬಳಿ ದಾಖಲೆಗಳು ಇದೆ ಎಂದರೆ ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? | ಜನತಾ ನ್ಯೂ&#
ರೋಹಿಣಿ ಸಿಂಧೂರಿ ಅವರ ಬಳಿ ದಾಖಲೆಗಳು ಇದೆ ಎಂದರೆ ಕ್ರಮ ಕೈಗೊಳ್ಳಲು ತಡ ಮಾಡಿದ್ದೇಕೆ? | ಜನತಾ ನ್ಯೂ&#
ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ  ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#

ನ್ಯೂಸ್ MORE NEWS...