ಸತತ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅಜ್ಜಿ, 3 ವರ್ಷದ ಮೊಮ್ಮಗು ಸಾವು | ಜನತಾ ನ್ಯೂಸ್
ಬೆಳಗಾವಿ : ಅರಬ್ಬಿ ಸಮುದ್ರದಲ್ಲಿ ಸೈಕ್ಲೋನ್ ಪರಿಣಾಮ ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮೂರು ವರ್ಷದ ಮಗು ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಸತತವಾಗಿ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗೆ ಮಲಗಿದ್ದ ಅಜ್ಜಿ ಮೊಮ್ಮಗ ಅಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ಬೆಳಗಾವಿಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.
ದೊಡ್ಡವ್ವ ಪಟ್ಟೇದ(55), ಅವರ ಮೊಮ್ಮಗ ಅಭಿಷೇಕ(3) ಮೃತ ದುರ್ದೈವಿಗಳು. ಇಟಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಅಜ್ಜಿ ಹಾಗೂ ಪುಟ್ಟ ಮಗು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸುರೇಶ್ ಪಟೇದ ಹಾಗೂ ಮಂಗಳಾ ಪಟೇದ ಎಂಬ ದಂಪತಿಗೆ ಗಾಯವಾಗಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ.