ರಜೆಗೆ ಬಂದಿದ್ದ ಸೈನಿಕ ತೋಟದ ಮನೆಯಲ್ಲಿ ಕ್ವಾರಂಟೈನ್! | ಜನತಾ ನ್ಯೂಸ್
ಹಾವೇರಿ : ವರ್ಷದ ರಜೆಗೆ ಬಂದಿದ್ದ ಸೈನಿಕ ಮನೆಗೆ ಹೋಗದೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ತೋಟದ ಮನೆಯಲ್ಲಿ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.
ಸವಣೂರು ತಾಲೂಕಿನ ಹುರಳಿಕೊಪ್ಪಿ ಗ್ರಾಮದ ಸೈನಿಕ 35 ವರ್ಷದ ಮಾಲತೇಶ್ ತಿಪ್ಪಕ್ಕನವರ್, ಕಳೆದ ಎಂಟು ದಿನಗಳಿಂದ ಗ್ರಾಮದ ಶಶಿಧರ ಎಲಿಗಾರ್ ಕುಟುಂಬಕ್ಕೆ ಸೇರಿದ ತೋಟದ ಮನೆಯಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಒಂದು ವರ್ಷದ ನಂತರ ಗ್ರಾಮಕ್ಕೆ ಆಗಮಿಸಿದ ಮಾಲತೇಶ್ ಸಂಬಂಧಿಕರು, ಗ್ರಾಮಸ್ಥರ ಆರೋಗ್ಯದ ಹಿತದೃಷ್ಠಿಯ ಕಾರಣ ಕ್ವಾರಂಟೈನ್ ಆಗಿದ್ದು, ತಾವೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದಾರೆ.
RELATED TOPICS:
English summary :Haveri