ಕೊರೊನಾ ಔಷಧಿ ಮಾರಾಟ ಸೋಗಿನಲ್ಲಿ ಹಣ ಸುಲಿಗೆ, ಇಬ್ಬರು ಆಫ್ರಿಕನ್ ಪ್ರಜೆ ಅರೆಸ್ಟ್! | ಜನತಾ ನ್ಯೂಸ್

20 May 2021
420
Bangalore

ಬೆಂಗಳೂರು : ನಕಲಿ ಮೆಡಿಕಲ್ ಕಂಪನಿ ಸೋಗಿನಲ್ಲಿ ರೆಮ್​ಡಿಸಿವರ್ ಇಂಜೆಕ್ಷನ್ ಸೇರಿದಂತೆ ಕೊರೊನಾ ಸಂಬಂಧಿತ ಔಷಧಿ ಮಾರಾಟ ಮಾಡುವುದಾಗಿ ನಂಬಿಸಿ, ಸಾರ್ವಜನಿಕರಿಂದ ಹಣ ಸುಲಿಗೆಗೆ ಇಳಿದಿದ್ದ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ನಗರ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ಅಳದೆ ಅಬ್ದುಲ್ಲಾ ಯೂಸುಫ್ ಬಂಧಿತ ಆಫ್ರಿಕನ್ ಪ್ರಜೆಗಳು. ನಕಲಿ ಮೆಡಿಕಲ್ ಕಂಪನಿ ಹೆಸರಿನಲ್ಲಿ ಸಾರ್ವಜನಿಕರನ್ನ ಸಂಪರ್ಕಿಸುತ್ತಿದ್ದ ಆರೋಪಿಗಳು, ರೆಮ್ಡೆಸಿವ್ ಹಾಗೂ ಮತ್ತಿತರ ಔಷಧಿಗಳನ್ನ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದರು. ಮೊಹಮ್ಮದ್ ಇಸ್ಮಾಯಿಲ್ ಸಿಮ್ ವ್ಯಾಪಾರಿಯಾಗಿದ್ದು, ಯಲಹಂಕದಲ್ಲಿ ವಾಸವಾಗಿದ್ದ ಪ್ರಕರಣದ ಎರಡನೇ ಆರೋಪಿ ಸ್ನೇಹಿತ‌ನಾಗಿದ್ದ.

ಸದ್ಯ ಬಂಧಿತ ಆರೋಪಿಗಳಿಂದ 4 ಮೊಬೈಲ್​, ಒಂದು ಹಾರ್ಡ್ ಡಿಸ್ಕ್, 110 ಸಿಮ್ ಕಾರ್ಡ್ ಹಾಗೂ 4 ಲಕ್ಷ ಸಹಿತ 10 ಬ್ಯಾಂಕ್ ಅಕೌಂಟ್​ನ್ನ ಪೊಲೀಸ್ರು ಜಪ್ತಿ ಮಾಡಿದ್ದಾರೆ.

ನಗರದ ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದ ಮೊಹಮ್ಮದ್ ಒಂದು ಬ್ಯಾಂಕ್ ಖಾತೆ ವಿವರ ನೀಡಿದರೆ 10 ಸಾವಿರ ರೂಪಾಯಿ ಪಡೆಯುತ್ತಿದ್ದ‌. ಇದೇ ರೀತಿ 10ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ನೈಜಿರಿಯಾ ಪ್ರಜೆಗೆ ನೀಡಿ ಹಣ ಪಡೆದಿದ್ದ.‌ ಜೊತೆಗೆ ಸಿಮ್ ಕಾರ್ಡ್ ಗಳನ್ನು ಪಡೆದಿದ್ದ.

ಹೊಸ‌ ಹೊಸ ನಂಬರ್ ಗಳ ಮೂಲಕ ಮೆಡಿಕಲ್‌ ಕಂಪನಿ ಹೆಸರಿನಲ್ಲಿ ಕೊರೊನಾ ಔಷಧಿ ನೀಡುವುದಾಗಿ ಹೇಳಿ ವಾಟ್ಸಾಪ್ ಗಳಲ್ಲಿ ಸಂದೇಶ ಹರಿಬಿಡುತ್ತಿದ್ದ.ಇದನ್ನು ನಂಬುತ್ತಿದ್ದ ಸಾರ್ವಜನಿಕರು ಆರೋಪಿಗಳನ್ನು ಸಂಪರ್ಕಿಸಿ ಕೊರೊನಾ ಔಷಧಿ ಪಡೆಯಲು ಆನ್​​ಲೈನ್‌ ಮುಖಾಂತರ ಮುಂಗಡ ಹಣ ಪಾವತಿ ಮಾಡುತ್ತಿದ್ದರು. ಹಣ ಖಾತೆಗೆ ಬೀಳುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದ.

RELATED TOPICS:
English summary :Bangalore

ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ  | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ  ಸ್ಪಷ್ಟನೆ | ಜನತಾ ನ್
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ ಸ್ಪಷ್ಟನೆ | ಜನತಾ ನ್
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ?  | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#

ನ್ಯೂಸ್ MORE NEWS...