ಕಾಂಗ್ರೆಸ್ ಸರ್ಕಾರಕ್ಕೊಂದು ಸಂವಿಧಾನ, ಭಾರತೀಯ ಜನತಾ ಪಕ್ಷಕ್ಕೊಂದು ಸಂವಿಧಾನವೇ? | ಜನತಾ ನ್ಯೂಸ್

22 May 2021
494
Eshwarappa

ಶಿವಮೊಗ್ಗ : ಸಿದ್ದರಾಮಯ್ಯ ಅವರು ಡಿಸಿ, ಸಿಇಒ ಜೊತೆ ಸಭೆ ನಡೆಸಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.. ಹೀಗಾಗಿ ಮುಂದಿನ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದ ಸಿದ್ದರಾಮಯ್ಯ ಅವರಿಗೆ ಸಚಿವ ಕೆಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ, ಕಾಂಗ್ರೆಸ್ ಸರ್ಕಾರಕ್ಕೊಂದು ಸಂವಿಧಾನ, ಭಾರತೀಯ ಜನತಾ ಪಕ್ಷಕ್ಕೊಂದು ಸಂವಿಧಾನವೇ ? ನಾನು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕನಾಗಿದ್ದಾಗ ರಾಜ್ಯದಲ್ಲಿದ್ದ ಬರಗಾಲ ಪರಿಸ್ಥಿತಿಯನ್ನು ಚರ್ಚಿಸಲು ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದೆ. ಆಗ ನನಗೆ ಎಲ್ಲಾ ಜಿಲ್ಲಾಧಿಕಾರಿಗಳು ಹೇಳಿದ್ದು ಒಂದೇ ಉತ್ತರ, "ನೀವು ವಿರೋಧ ಪಕ್ಷದ ನಾಯಕರಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಲು ಸರ್ಕಾರದಿಂದ ಅನುಮತಿ ಇಲ್ಲ. ಈ ಕುರಿತು ಸರ್ಕಾರದ ಆದೇಶವಿದೆ" ಎಂದು.

ಆಗ ತಾವೇ ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಮಯ. ಬರಗಾಲದ ಪರಿಸ್ಥಿತಿಯನ್ನು ನಿಭಾಯಿಸಯವ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚರ್ಚಿಸಲು ಅನುಮತಿ ನೀಡಬೇಕೆಂದು ನಾನು ನಿಮಗೆ ಪತ್ರವನ್ನು ಸಹ ಬರೆದೆ. ನಿಮ್ಮಿಂದ ಅದಕ್ಕೆ ಯಾವ ಉತ್ತರವೂ ಬರಲಿಲ್ಲ. ಈಗ ನೀವು ಪ್ರಸ್ತಾಪಿಸಿರುವ ಪ್ರಜಾಪ್ರಭುತ್ವ, ಸಂವಿಧಾನ ಆಗ ಇರಲಿಲ್ಲವೇ? ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಹರಿಹಾಯ್ದಿದ್ದಾರೆ.

ತಾವೂ ಸೇರಿದಂತೆ ಡಿ.ಕೆ. ಶಿವಕುಮಾರ್, ಯು.ಟಿ. ಖಾದರ್, ಜಯರಾಮ್ ರಮೇಶ್, ವೇಣುಗೋಪಾಲ್, ಮನಿಷ್ ತಿವಾರಿ ಮತ್ತಿತರ ಕಾಂಗ್ರೆಸ್ ಮುಖಂಡರು ಲಸಿಕೆಗೆ ಕುರಿತು ಆರಂಭದಲ್ಲೇ ಅಪ ಪ್ರಚಾರ ಮಾಡಿದಿರಿ. ಮೊದಲು ಪ್ರಧಾನಿ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಂಡರೇ ಪುರುಷತ್ವ ನಾಶವಾಗುತ್ತದೆ. ಮುಸ್ಲಿಮರ ಸಂತತಿ ತಡೆಯಲು ಬಳಸುತ್ತಿದ್ದಾರೆ ಎಂದೆಲ್ಲ ಜನರಿಗೆ ತಪ್ಪು ಸಂದೇಶ ನೀಡಿದ ಪರಿಣಾಮ ಜನರು ಹಿಂದೇಟು ಹಾಕಿದ್ದರು. ಇದು ಸೋಂಕು ಹರಡಲು ಪ್ರಮುಖ ಕಾರಣ ಎಂದು ದೂರಿದ್ದಾರೆ.

"ಸರ್ಕಾರದಿಂದ ಲಸಿಕೆ ನೀಡಲು ಅಗುತ್ತಿಲ್ಲ, ಈ ಸರ್ಕಾರ ಸತ್ತು ಹೋಗಿದೆ ಎಂದು ಹೇಳುತ್ತಾರೆ. ಮಧ್ಯಪ್ರದೇಶ ಸೇರಿದಂತೆ ಪಂಜಾಬ್‌, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಆ ರಾಜ್ಯಗಳಲ್ಲಿ ಶೇ.100ರಷ್ಟು ಲಸಿಕೆ ನೀಡಿದ್ದೀರಾ?. ಈ ರೀತಿಯಾದ ರಾಜಕೀಯ ಏಕೆ?" ಎಂದು ಕೇಳಿದ್ದಾರೆ.

ಸಂದಿಗ್ಧಕರ ಸನ್ನಿವೇಶದಲ್ಲಿ ರಾಜಕೀಯ ಲಾಭಕ್ಕೋಸ್ಕರ ಅನಗತ್ಯ ಟೀಕೆಗಳನ್ನು ಮಾಡದೆ ಜವಾಬ್ದಾರಿಯುತ ವಿಪಕ್ಷ ನಾಯಕನಾಗಿ ಸಲಹೆ ಸೂಚನೆಗಳನ್ನು ನೀಡಿ ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

RELATED TOPICS:
English summary :Eshwarappa

ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಜಾರಕಿಹೊಳಿ ಸಿಡಿ ಕೇಸ್​: ತನಿಖಾಧಿಕಾರಿಗಳ ಮುಂದೆ ನರೇಶ್​ಗೌಡ, ಶ್ರವಣ್ ಹಾಜರ್​​ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ  ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಬಾಂಗ್ಲಾದೇಶ ಗಡಿಯಲ್ಲಿ ಬಂಧಿತ ಚೀನಾ ಪ್ರಜೆಯಿಂದ 1,300 ಭಾರತೀಯ ಸಿಮ್ ಕಾರ್ಡ್‌ ಕಳ್ಳಸಾಗಣೆ | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#

ನ್ಯೂಸ್ MORE NEWS...