ಯುವತಿಯ ಮೇಲೆ ಗ್ಯಾಂಗ್ ರೇಪ್: ಗುಪ್ತಾಂಗದಲ್ಲಿ ಬೀಯರ್ ಬಾಟಲ್ ಹಾಕಿ ವಿಡಿಯೋ ಮಾಡಿದ ನೀಚರು | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿ 22 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿ ವಿಡಿಯೋ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಮದ್ಯದ ಬಾಟೆಲ್ ಇರಿಸಿ ವಿಕೃತಿ ಮರೆದಿದ್ದಾರೆ.
ಸುಮಾರು 10 ದಿನಗಳ ಹಿಂದೆ ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ಈ ಅತ್ಯಾಚಾರ ನಡೆದಿದೆ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಸಂತ್ರಸ್ಥೆ ಮತ್ತು ಆರೋಪಿಗಳು ಬಾಂಗ್ಲಾ ದೇಶದ ಮೂಲದವರು ಎನ್ನಲಾಗಿದೆ. ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು.
ಆರೋಪಿಗಳು ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದರು. ರಾಮಮೂರ್ತಿ ನಗರದ ಎನ್ ಆರ್ ಐ ಕಾಲೋನಿಯಲ್ಲಿ ವಾಸವಾಗಿದ್ದರು. ಅಲ್ಲಿಯೇ ವೇಶ್ಯಾವಾಟಿಕೆ ದಂದೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.
ಸಂತ್ರಸ್ಥೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಬಾಂಗ್ಲಾ ದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಆ ವಿಡಿಯೋ ವೈರಲ್ ಆಗಿತ್ತು. ಆರೋಪಿಗಳೆಲ್ಲರೂ ಸಂತ್ರಸ್ತೆಗೆ ಪರಿಚಯಸ್ಥರೇ ಎನ್ನಲಾಗಿದೆ.
ಸಂತ್ರಸ್ಥೆಯ ವಿಡಿಯೋ ವೈರಲ್ ಆದ ನಂತರ ಅಸ್ಸಾಂ ರಾಜ್ಯದ ಪೊಲೀಸರು ವಿಡಿಯೋ ಬಗ್ಗೆ ತನಿಖೆ ನಡೆಸಿದ್ದರು. ಕೃತ್ಯದಲ್ಲಿ ಬಾಂಗ್ಲಾ ಮೂಲದವರು ಇರುವುದು ತಿಳಿದುಬಂದ ನಂತರ ಬಾಂಗ್ಲಾ ದೇಶದ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ಥೆ ಕುಟುಂಬದ ಸದಸ್ಯರನ್ನ ಪತ್ತೆಮಾಡಿದ್ದರು. ಆರೋಪಿಗಳ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿರುವ ರಾಮಮೂರ್ತಿ ನಗರ ಠಾಣೆ ಪೊಲೀಸರು ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಇನ್ನಿಬ್ಬರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಆರೋಪಿಗಳು ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದರು ಎನ್ನಲಾಗಿದೆ.