ಮೈಸೂರು ಜಿಲ್ಲಾಡಳಿತ ಕೊವಿಡ್​ನಿಂದ ಸಾವನ್ನಪ್ಪಿದವರ ಸಂಖ್ಯೆ ಮುಚ್ಚಿಟ್ಟಿದೆ: ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಾ.ರಾ.ಮಹೇಶ್​ | ಜನತಾ ನ್ಯೂಸ್

31 May 2021
409
Mysuru

ಮೈಸೂರು : ಜಿಲ್ಲಾಡಳಿತ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಮುಚ್ಚಿಟ್ಟಿದೆ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆರೋಪಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಸಾ.ರಾ. ಮಹೇಶ್​, ರೋಹಿಣಿ ಸಿಂಧೂರಿ ಅವರಿಂದ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡಲಾಗಿದೆ. ಮೈಸೂರು ಜಿಲ್ಲೆ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು ಜಿಲ್ಲೆ ನಂ 1. ಅತಿಹೆಚ್ಚು ಸಾವು ಆಗಿರುವ ಜಿಲ್ಲೆಗಳಲ್ಲೂ ಮೈಸೂರು ನಂ 1. ಆದರೂ ಸುಳ್ಳು ಲೆಕ್ಕ ಕೊಟ್ಟ ಸರ್ಕಾರದ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಾವಿನ ಸಂಖ್ಯೆಯನ್ನು ಏಕೆ ಮುಚ್ಚಿಡುತ್ತಿದ್ದೀರಿ? ನಿಮಗೆ ಮಾನವೀಯತೆ, ಮನುಷ್ಯತ್ವ, ತಾಯಿ ಹೃದಯ ಇಲ್ಲವೇ? ಸರ್ಕಾರವನ್ನೂ ಏಕೆ ದಿಕ್ಕು ತಪ್ಪಿಸುತ್ತಿದ್ದೀರಿ? ಸಾವಿನಲ್ಲೂ ಸುಳ್ಳು ಲೆಕ್ಕ ಕೊಟ್ಟಿದ್ದೇಕೆ? ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಶಾಸಕ ಸಾ.ರಾ.ಮಹೇಶ್​ ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲೇ 969 ಸೋಂಕಿತರು ಸಾವನ್ನಪ್ಪಿದ್ದಾರೆ. ಮೇ 1 ರಿಂದ 29ರ ವರೆಗೆ 969 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ 238 ಜನರ ಲೆಕ್ಕವನ್ನು ಕೊಟ್ಟಿದೆ. 731 ಜನರ ಸಾವಿನ ಲೆಕ್ಕವನ್ನು ಜಿಲ್ಲಾಡಳಿತ ಕೊಟ್ಟಿಲ್ಲ ಎಂದು ಜಿಲ್ಲಾಡಳಿತ ವಿರುದ್ಧ ಆರೋಪಿಸಿದ್ದಾರೆ.

ಈ ರೀತಿ ಲೆಕ್ಕ ಕೊಡುವುದಕ್ಕೆ ಐಎಎಸ್ ಏಕೆ ಬೇಕು? ಎಸ್‌ಎಸ್‌ಎಲ್​ಸಿ ಓದಿದವರು ಕೊಡಬಹುದು. ಡಿಸಿ ರೋಹಿಣಿ ಸಿಂಧೂರಿ ತಮ್ಮ ಸಾರ್ವಜನಿಕ ಸೇವೆಯ ಎಲ್ಲವೂ ಇದೇ ರೀತಿ ಮೋಸದ್ದು. ಇಲ್ಲಿಗೆ ಕಳಂಕ ರಹಿತ ಒಳ್ಳೆಯ ಅಧಿಕಾರಿ ಬೇಕು. ಇದನ್ನು ನಾನು ಅವತ್ತೇ ಇದನ್ನು ಹೇಳಿದ್ದೆ. ಇದಕ್ಕಿಂತ ದಾಖಲಾತಿ ಬೇಕು ಅಂದರೆ ಸತ್ತವರ ಮನೆಗೆ ಹೋಗೋಣ. ಸಾವಿನ ಲೆಕ್ಕದ ಸಮಗ್ರ ತನಿಖೆಯಾಗಬೇಕು.

ಮೈಸೂರು ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಇಳಿಸಿದ್ದೇವೆ, ಮೈಸೂರಿನಲ್ಲಿ ನಾನು ಸಾಧನೆ ಮಾಡಿದ್ದೇನೆ ಅಂತ ತೋರಿಸಿಕೊಳ್ಳುತ್ತಿದ್ದಾರೆ. ಟೆಸ್ಟಿಂಗ್ ಕಡಿಮೆ ಮಾಡಿದ ಪರಿಣಾಮ ಕೇಸ್ ಕಡಿಮೆ ಆಗಿದೆ. ಈ ವಿಚಾರವನ್ನು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರ ಸೂಚನೆ ಬಳಿಕ 8000 ಟೆಸ್ಟಿಂಗ್ ಶುರುವಾಗಿದೆ.

ನಗರದಲ್ಲಿ ಕರೊನಾದಿಂದ ಮೃತಪಟ್ಟಿರುವ ಸಂಖ್ಯೆಯ ದಾಖಲೆ ತೆಗೆಸಿದ್ದೇನೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಎಷ್ಟು ಸಾವಿರ ಜನ ಸತ್ತಿದ್ದಾರೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅದರ ಮಾಹಿತಿಯನ್ನೂ ತರಿಸುತ್ತೇನೆ. ನಿನ್ನೆ ಕೆ.ಆರ್.ನಗರದಲ್ಲಿ ಸಾವು ಝೀರೋ ಅಂತ ಲೆಕ್ಕ ತೋರಿಸಿದ್ದಾರೆ. ಆದರೆ ನನ್ನ ಗಮನಕ್ಕೆ ಬಂದಂತೆ ಚಿಕ್ಕನಾಯಕನಹಳ್ಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಲಾಗಿದೆ.

ಏಕೆ ಸಾವುಗಳನ್ನು ಮುಚ್ಚಿಡುತ್ತಿದ್ದೀರಿ? ಮೃತರ ಕುಟುಂಬಗಳಿಗೆ ಯಾವುದಾದರೂ ರೂಪದಲ್ಲಿ ಸಹಾಯ ಆಗಬೇಕಲ್ವ? ನಿಮ್ಮ ಸುಳ್ಳು ಲೆಕ್ಕದಿಂದಾಗಿ ಮೃತರ ಕುಟುಂಬಸ್ಥರಿಗೆ ಮೋಸ ಆಗೋದು ಬೇಡ ಎಂದು ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್​ ಕಿಡಿಕಾರಿದ್ದರು.

RELATED TOPICS:
English summary :Mysuru

ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಜಮ್ಮು ಕಾಶ್ಮೀರ : ಉಗ್ರರ ದಾಳಿಯಲ್ಲಿ 2 ಯೋಧರು ಹುತಾತ್ಮ ಹಾಗೂ 3 ಗಾಯ, 2 ನಾಗರಿಕರ ಸಾವು | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಕೋವಿಡ್-19 ರಾಜ್ಯಾದ್ಯಂತ 159 ಸಾವು : 8,249 ಹೊಸ ಪ್ರಕರಣ, ಬೆಂಗಳೂರಿನಲ್ಲಿ 1,154 | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಬಡತನ ಹೋಗಲಾಡಿಸಲು ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಜನಸಂಖ್ಯೆ ನಿಯಂತ್ರಣ ಅಗತ್ಯ - ಅಸ್ಸಾಂ ಸಿಎಂ ಬಿಸ್ವಾ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಕವಿ ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಸೆಲ್ಫಿ ತೆಗೆಯಲು ತೆರಳಿದ್ದ ಕೊಪ್ಪಳದ ಯುವಕನ ಶವ ಸಮುದ್ರ ತೀರದಲ್ಲಿ ಪತ್ತೆ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಎಚ್ಚರಿಕೆಯಿಂದಿರಿ, ಮೈಮರೆಯಬೇಡಿ, ನಿಯಮ ಸಡಿಲಿಕೆಯಿಂದ ಸೋಂಕು ಹೆಚ್ಚಾದರೆ ಮತ್ತೆ ಕ್ರಮ: ಸುಧಾಕರ್ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ಪಿಯು ಮೌಲ್ಯಮಾಪನವನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದು ಬೇಡ: ಸುರೇಶ್ ಕುಮಾರ್ ಸ್ಪಷ್ಟನೆ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ವಿಪಕ್ಷ ನಾಯಕಾರಾಗಿ ಸಿದ್ದರಾಮಯ್ಯ ವಿಫಲ, ಅವರಿಗೆ ಬುದ್ದಿಯಿಲ್ಲ: ಈಶ್ವರಪ್ಪ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ಬ್ರಾಹ್ಮಣರ ಬಗ್ಗೆ ಅವಹೇಳನಕಾರಿ ಟ್ವೀಟ್​ ಆರೋಪ, ನಟ ಚೇತನ್​ ಬಂಧನಕ್ಕೆ ಶಿವರಾಮ್​ ಹೆಬ್ಬಾರ್​ ಆಗ್ರಹ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#
ರಾಜ್ಯದ ಬ್ಯಾಂಕಿಂಗ್‌ ವಲಯದಲ್ಲಿ ಕನ್ನಡಿಗರೇ ಇರಬೇಕು: ಹೆಚ್​​​ಡಿಕೆ ಒತ್ತಾಯ | ಜನತಾ ನ್ಯೂ&#
ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸ್ ಪಡೆ ಬಳಸುವ ಅನಿವಾರ್ಯತೆಯನ್ನ ಜನತೆ ಸೃಷ್ಟಿಸಬಾರದು | ಜನತಾ ನ್ಯೂ&#
ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸ್ ಪಡೆ ಬಳಸುವ ಅನಿವಾರ್ಯತೆಯನ್ನ ಜನತೆ ಸೃಷ್ಟಿಸಬಾರದು | ಜನತಾ ನ್ಯೂ&#
ಕೊರೋನಾದಿಂದ ಕವಿ ಸಿದ್ದಲಿಂಗಯ್ಯ ನಿಧನ! | ಜನತಾ ನ್
ಕೊರೋನಾದಿಂದ ಕವಿ ಸಿದ್ದಲಿಂಗಯ್ಯ ನಿಧನ! | ಜನತಾ ನ್

ನ್ಯೂಸ್ MORE NEWS...