ಪವರ್ ಬೆಗ್ಗರ್ ಗಳ ಬಗ್ಗೆ ನಾನು ಮಾತನಾಡುವುದಿಲ್ಲ: ಡಿ.ಕೆ. ಶಿವಕುಮಾರ್ | ಜನತಾ ನ್ಯೂಸ್

01 Jun 2021
465
DKShivakumar

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರು ಪವರ್​​ ಬೆಗ್ಗರ್​​ಗಳು ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಪವರ್ ಬೆಗ್ಗರ್ ಗಳು. ಅವರ ಬಗ್ಗೆ ಮಾತನಾಡುವುದಿಲ್ಲ. ಅವರೇನು ಏನು ಬೇಕಾದರೂ ಮಾಡಿಕೊಳ್ಳಲಿ. ಕೊರೋನ ಸಮಯದಲ್ಲಿ ಜನರ ಜೀವ ಉಳಿಸೋದು ನಮ್ಮ ಕರ್ತವ್ಯ. ಅವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡುವುದು ಬೇಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹಿಂದೆ ಯಡಿಯೂರಪ್ಪ ವಿರುದ್ಧ ದೂರು ನೀಡಲು ಸಚಿವ ಯೋಗೇಶ್ವರ್ ದಿಲ್ಲಿಗೆ ಹೋಗಿದ್ದರು. ಈಗ ಅವರ ವಿರುದ್ಧ ದೂರು ನೀಡಲು ವಿಜಯೇಂದ್ರ ದಿಲ್ಲಿಗೆ ಹೋಗಿದ್ದಾರೆ ಎಂದು ಪ್ರಸ್ತಾಪಿಸಿದಾಗ ಶಿವಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದರು.

ನಾನು ಪವರ್ ಬೆಗ್ಗರ್ ಗಳ ಬಗ್ಗೆ ಮಾತನಾಡುವುದಿಲ್ಲ. ಎರಡು-ಮೂರು ಪಕ್ಷ ಸುತ್ತಿದವರನ್ನು ಯಡಿಯೂರಪ್ಪನವರು ತಮ್ಮ‌ ಮನೆಗೆ ಕರೆದುಕೊಂಡು ಹೋದರು. ಈಗ ಅನುಭವಿಸಲಿ ಬಿಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿ. ಕೊರೋನ ಸಮಯದಲ್ಲಿ ಜನರ ಜೀವ ಉಳಿಸೋದು ನಮ್ಮ ಕರ್ತವ್ಯ. ಇವರೆಲ್ಲಾ ಪವರ್ ಬೆಗ್ಗರ್ ಗಳು. ಇವರ ಬಗ್ಗೆ ಮಾತನಾಡಿ ಸಮಯ ಹಾಳು ಮಾಡುವುದು ಬೇಡ ಎಂದರು.

ಇವರು ದೆಹಲಿಗಾದರೂ ಹೋಗಲಿ, ಅಂಡಮಾನ್ ಗಾದರೂ ಹೋಗಲಿ. ಇದು ಎರಡು, ಮೂರು ಪಕ್ಷಗಳ ಸರ್ಕಾರ ಅಂತಾ ಮಾತನಾಡಲು ಅವರಿಗೆ ಶಕ್ತಿ ಕೊಟ್ಟವರು ಯಾರು? ಯಡಿಯೂರಪ್ಪನವರೇ ತಾನೇ? ರಾಜಕಾರಣದಲ್ಲಿ ನಾವು ಮಾಡಿದ್ದನ್ನು ನಾವೇ ಅನುಭವಿಸಬೇಕು ಎಂದರು.

ಇದೇ ವೇಳೆ ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ ಅಂಶದ ವಿಚಾರವಾಗಿ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸುಧಾಕರಣ್ಣ ನೀನು ಮೊದಲು ಔಷಧಿ ಕೊಡಿಸೋದು ನೋಡು. ಕಂದಾಯ ಇಲಾಖೆ ಇದೆ, ಕಾರ್ಪೊರೇಷನ್ ಇದೆ, ಪಂಚಾಯತ್ ಇದೆ, ಅಲ್ಲಿನ ಅಧಿಕಾರಿಗಳು ಡೆತ್ ಆಡಿಟ್ ಮಾಡಲಿ. ನೀನು ಡೆತ್ ಆಡಿಟ್ ಮಾಡೋದು ಬೇಡ, ನೀನು ಮೊದಲು ವ್ಯಾಕ್ಸಿನೇಷನ್‌ ಕೊಡಿಸೋದು ನೋಡು, ನಿನ್ನ ಕೈಯಲ್ಲಿ ಡೆತ್ ಆಡಿಟ್ ಮಾಡಿಸೋಕೆ ಆಗಲ್ಲ. ರಾಜಸ್ಥಾನ ಸಿಎಂ ಡೆತ್ ಆಡಿಟ್ ಮಾಡಿಸೋದಾಗಿ ಘೋಷಣೆ ಮಾಡಿದ್ದಾರೆ. ಇಲ್ಲೂ ಕೂಡ ಡೆತ್ ಆಡಿಟ್ ಮಾಡೋದಾಗಿ ಘೋಷಣೆ ಮಾಡಲಿ ಎಂದರು.

RELATED TOPICS:
English summary :DKShivakumar

ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಪತ್ನಿ ಸಾವಿನ ಗಳಿಗೆ ಸರಿಯಿಲ್ಲ, 3 ತಿಂಗಳು ಮನೆಗೆ ಬರಬೇಡ: ಪತ್ನಿಯ ಸಂಬಂಧಿಕರಿಂದಲೇ ಮನೆಗೆ ಕನ್ನ ಆರೋಪ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕೋವಿಡ್ 3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ, ವಿನಯ್ ಗುರೂಜಿ ಸಲಹೆ | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಕಾಂಗ್ರೆಸ್​ ವಿರುದ್ಧ ಫೇಸ್​ಬುಕ್ ಪೋಸ್ಟ್ , ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು! | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಮಗುವಿನೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಸಿಎಂ ಸ್ಥಾನ ಖಾಲಿ ಇಲ್ಲ‌ ಎಂದು ಬೋರ್ಡ್‌ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ- ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ಯುವಕನ ಬರ್ಬರ ಕೊಲೆ, ಶವ ಸುಟ್ಟು ಹಾಕಿದ ದುಷ್ಕರ್ಮಿಗಳು | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ನಡು ರಸ್ತೆಯಲ್ಲಿ ಆ್ಯಂಬುಲೆನ್ಸ್​ನಿಂದ ಜಿಗಿದು ಕತ್ತು ಕೊಯ್ದುಕೊಂಡ ಮಾನಸಿಕ ಅಸ್ವಸ್ಥ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಪತ್ನಿ ಸತ್ತಳೆಂದು ಪತಿ ಆತ್ಮಹತ್ಯೆ: ಮನನೊಂದು ಮಕ್ಕಳು ಆತ್ಮಹತ್ಯೆ | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಅತ್ತೆ ಮತ್ತು ಸೊಸೆ ನಡುವೆ ಗಲಾಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಸೊಸೆ ಸಾವು | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ಮೇಕೆದಾಟು ಯೋಜನೆ : ಪ್ರಧಾನಿಯಿಂದ ಭಾಷಾ ದುರಭಿಮಾನಿ ಬಿಜೆಪಿ ಸಂಸದರು ಉತ್ತರ ಪಡೆಯಬೇಕು - ಎಚ್‌ಡಿಕೆ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ವಿದ್ಯಾರ್ಥಿನಿ ಆತ್ಮಹತ್ಯೆ: ಮನನೊಂದ ತಂದೆ ಹೃದಯಾಘಾತದಿಂದ ಮೃತ | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#
ಮನೆಯಲ್ಲಿ ಆಟವಾಡುತ್ತಾ ಇಲಿ ಪಾಷಾಣ ತಿಂದು ಮಗು ದಾರುಣ ಸಾವು | ಜನತಾ ನ್ಯೂ&#

ನ್ಯೂಸ್ MORE NEWS...