ಕನ್ನಡ ಭಾಷೆಯ ಅವಹೇಳನಕಾರಿ ಪ್ರಕಟಣೆ : ಕಿಡಿಗೇಡಿ ವೆಬ್ಸೈಟ್ ನಿಂದ ತಪ್ಪು ಮಾಹಿತಿ, ಗೂಗಲ್ ಸರ್ಚ್ ಎಡವಟ್ಟು | ಜನತಾ ನ್ಯೂಸ್

03 Jun 2021
449

ಬೆಂಗಳೂರು : ಮಾಹಿತಿ ಹುಡುಕುವ ತಂತ್ರಜ್ಞಾನದ ದೈತ್ಯ ಎಂದು ಕರೆಯಲ್ಪಡುವ ಗೂಗಲ್​ನಲ್ಲಿ, "ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು?" ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದ್ದು, ಶ್ರೀಗಂಧದಷ್ಟೇ ಶ್ರೇಷ್ಠ ಕನ್ನಡದ ಬಗ್ಗೆ ಈ ರೀತಿಯ ಹೇಳಿಕೆ ಕುರಿತು, ಸಾಕಷ್ಟು ಜನರಲ್ಲಿ ಗೂಗಲ್ ಕುರಿತು ಅಸಮಾಧಾನ ಹಾಗೂ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನದ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದೆ. ಹಲವರು, ಗೂಗಲ್​ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ತಪ್ಪಿತಸ್ತ ವೆಬ್ಸೈಟ್ ಮೇಲೆ ಕ್ರಮ ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು, ಎಂದು ಆಗ್ರಹಿಸಿದ್ದಾರೆ.

ಅಸಲಿಯತ್ತಿನಲ್ಲಿ, debtconsolidationsquad.com ಎಂಬ ವೆಬ್ ಪೋರ್ಟಲ್ ಕನ್ನಡದ ವಿರುದ್ಧ ದ್ವೇಷದ ಕಾರಣದಿಂದಲೋ, ಏನೋ, ಈ ರೀತಿಯ ತಪ್ಪು ಹಾಗೂ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದು, ಮಾಹಿತಿ ಪ್ರಕಟಿಸಲಾಗಿದೆ.

ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು? ಎಂಬ ಅರ್ಥವಿಲ್ಲದ ಪ್ರಶ್ನೆಯೇ ಅಪ್ರಯೋಜಕವಾದ ಕಾರಣದಿಂದ, ಬೇರೆ ಯಾವ ಪೋರ್ಟಲ್ ನಲ್ಲೂ ಸಿಗದೇ, ಗೂಗಲ್ ಸರ್ಚ್ ನಲ್ಲಿ ಈ ವೆಬ್ ಪೋರ್ಟಲ್ ನ ಈ ದ್ವೇಷದ ಪ್ರಕಟಣೆ ಕಂಡುಬಂದಿದೆ.

ಗೂಗಲ್​ ಲ್ಲಿ Ugliest Language in India ಎಂದು ಹುಡುಕಿದಾಗ ಕನ್ನಡ ಎಂಬ ಉತ್ತರ ಸಿಗುತ್ತಿದೆ. ಆದರೆ, ಆ ಉತ್ತರಕ್ಕೆ ಕಾರಣವಾಗಿರುವ ಕೆಳಗಿನ debtconsolidationsquad.com ಎಂಬ ಜಾಲತಾಣದ ಲಿಂಕ್ ನ್ನು ತೆರೆಯಲು ಪ್ರತ್ನಿಸಿದರೆ ಅದು ಈಗ ಕೆಲಸ ಮಾಡುತ್ತಿಲ್ಲ. ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ತಮ್ಮ ಪ್ರಕಟಣೆಯನ್ನು ಆ ವೆಬ್ ಪೋರ್ಟಲ್ ಭಯದಿಂದ ಸದ್ಯ ಹಿಂಪಡೆದಿದೆ.

ಆದರೆ, ಗೂಗಲ್​ನ ಕ್ಯಾಶ್ ನಲ್ಲಿ ಈ ಲಿಂಕ್ ಹಾಗೂ ಪ್ರಕಟಣೆ ಅಳಿಸಿ ಹೋಗಲು ಕೆಲವು ಸಮಯ ಬೇಕಾಗುವ ಸಾದ್ಯತೆಗಳಿವೆ. ಈ ಮಧ್ಯೆ, ಯಾವುದೋ ಬೇರೆ ಅಲ್ಪಜ್ಞಾನವಿರುವ ವೆಬ್ ಪೋರ್ಟಲ್ ಪ್ರಕಟಣೆಯ ತಪ್ಪಿನ ಬಿಸಿಯನ್ನು ಗೂಗಲ್​ ಸರ್ಚ್ ಇಂಜಿನ್ ಎದುರಿಸಬೇಕಾಗಿದೆ.

ಗೂಗಲ್​ನಲ್ಲಿ ಈ ರೀತಿಯ ಉತ್ತರ ಬರಲು ಕಾರಣ ಈ ವೆಬ್​ಸೈಟ್​ನಲ್ಲಿ ಪ್ರಕಟವಾದ ಲೇಖನವಾಗಿದ್ದು ಸದ್ಯ ಅದು ಮರೆಯಾಗಿರುವುದರಿಂದ ಲೇಖನದಲ್ಲಿ ಏನಿತ್ತು, ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು, ಎಂಬ ಮಾಹಿತಿ ಸಿಕ್ಕಿಲ್ಲ.

RELATED TOPICS:
English summary :Kannada language derogatory publication: Misleading info from mischievous website, Google search mistake

ರಾಜ್ಯದಲ್ಲಿ 1,531 ಪ್ರಕರಣ ಪತ್ತೆ, ಕೊರೋನಾಗೆ 19 ಬಲಿ! | ಜನತಾ ನ್ಯೂ&#
ರಾಜ್ಯದಲ್ಲಿ 1,531 ಪ್ರಕರಣ ಪತ್ತೆ, ಕೊರೋನಾಗೆ 19 ಬಲಿ! | ಜನತಾ ನ್ಯೂ&#
ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#

ನ್ಯೂಸ್ MORE NEWS...