2 ತಿಂಗಳ ಹಿಂದೆ ಮದುವೆಯಾಗಿದ್ದ ಮೈಸೂರಿನ ಇಂಜಿನಿಯರ್ ಕೋವಿಡ್ಗೆ ಬಲಿ! | ಜನತಾ ನ್ಯೂಸ್
ಮೈಸೂರು : ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇಂಜಿನಿಯರ್ ಓರ್ವ ಕೋವಿಡ್ಗೆ ಬಲಿಯಾಗಿರುವ ಘಟನೆ ನಗರದ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ.
ಮೈಸೂರಿನ ಆಲನಹಳ್ಳಿ ಬಡಾವಣೆ ನಿವಾಸಿ, ಇಂಜಿನಿಯರ್ ನವೀನ್ ಕುಮಾರ್ ಮೃತ ದುರ್ದೈವಿ. ಬೆಂಗಳೂರಿನ ಜೈನ್ ವಿವಿಯಲ್ಲಿ ಕೆಲಸ ಮಾಡುತ್ತಿದ್ದ ನವೀನ್, ಎರಡು ತಿಂಗಳ ಹಿಂದಷ್ಟೆ ಮದುವೆ ಆಗಿದ್ದರು.
ಕಳೆದ ವಾರ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ.
RELATED TOPICS:
English summary :Mysuru