ದ್ವಿತೀಯ PUC ಪರೀಕ್ಷೆಗಳು ಕ್ಯಾನ್ಸಲ್, ಎಸ್‌ಎಸ್‌ಎಲ್​ಸಿಗೆ 2 ಪೇಪರ್​ ಪರೀಕ್ಷೆ: ಸಚಿವ ಸುರೇಶ್ ಕುಮಾರ್ | ಜನತಾ ನ್ಯೂಸ್

04 Jun 2021
419

ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ ಸೋಂಕಿತರು ಹೆಚ್ಚಾಗಿರುವ ಹಾಗೂ ಎರಡನೇ ಅಲೆ ಇರುವ ಕಾರಣ, ದ್ವಿತೀಯ ಪಿಯುಸಿ ಪರೀಕ್ಷೆಯನ್ನ ರದ್ದು ಮಾಡಿರುವುದಾಗಿ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದು ಮಾಡದೇ ಇರಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಸಚಿವ ಸುರೇಶ್‌ ಕುಮಾರ್‌ ಮಾಹಿತಿ ನೀಡಿದರು.

ಒಂದನೇ ಪತ್ರಿಕೆಯಲ್ಲಿ ವಿಜ್ಞಾನ, ಗಣಿತ, ಸಮಾಜವಿಜ್ಞಾನ (science, maths and socialscience) ಮೂರು ವಿಷಯಗಳು ಸೇರಿ ಇರುತ್ತದೆ. ಇದರಲ್ಲಿ ಮಲ್ಟಿ ಚಾಯ್ಸ್‌ ಪ್ರಶ್ನೆಗಳು ಇರುತ್ತವೆ. ಪ್ರತಿ ಪ್ರಶ್ನೆಗೂ ನಾಲ್ಕೈದು ಉತ್ತರ ಇರುತ್ತವೆ. ಇವು ಸರಳ ಮತ್ತು ನೇರವಾಗಿರುತ್ತದೆ. ಅವುಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ಇನ್ನೊಂದು ಲಾಂಗ್ವೇಜ್‌ ಪರೀಕ್ಷೆ. (ಕನ್ನಡ/ ಸಂಸ್ಕೃತ/ಹಿಂದಿ ಮತ್ತು ಇಂಗ್ಲಿಷ್‌) ಇದರಲ್ಲಿಯೂ ಇದೇ ರೀತಿ ಮಲ್ಟಿ ಚಾಯ್ಸ್‌ ಪ್ರಶ್ನೆಗಳು ಇರಲಿವೆ. ಮಕ್ಕಳಿಗೆ ಗ್ರೆಡೇಷನ್‌ ಅಂದರೆ ಎ ಪ್ಲಸ್‌, ಎ, ಈ ರೀತಿಯಾಗಿ ನೀ ಡಲಾಗುತ್ತದೆ. ಯಾರಿಗಾದರೂ ಒಂದು ವೇಳೆ ಕೋವಿಡ್‌ ಅಥವಾ ಇನ್ನಾವುದೇ ಕಾರಣಗಳಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅವರಿಗೆ ಪೂರಕ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಇನ್ನು SSLC ಪರೀಕ್ಷೆ ನಡೆಸುವುದೇ ಅಂತಿಮ ತೀರ್ಮಾನವಲ್ಲ. ಪರೀಕ್ಷೆ ನಡೆಸುವ ಸಮಯದಲ್ಲಿ ಕೊರೊನಾ 3ನೇ ಅಲೆ ಬಂದರೆ ಆಗಲೂ ಆ ತಕ್ಷಣಕ್ಕೆ ನಿರ್ಧಾರ ಮರುಪರಿಶೀಲಿಸುತ್ತೇವೆ. ಪರೀಕ್ಷೆ ನಡೆಸಬೇಕಾ, ಬೇಡವಾ ಎಂದು ನಿರ್ಧರಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಲಾಗಿದ್ದು, ಪ್ರಥಮ ಪಿಯುಸಿ ಫಲಿತಾಂಶ ಆಧರಿಸಿ ಗ್ರೇಡಿಂಗ್ ನೀಡಲಾಗುವುದು. ಫಲಿತಾಂಶ ಸಮಾಧಾನವಿಲ್ಲದಿದ್ದರೆ ಪರೀಕ್ಷೆ ಬರೆಯಬಹುದು. ಕೊರೊನಾ ಕಡಿಮೆಯಾದ ನಂತರ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುತ್ತೇವೆ. ಸದ್ಯ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ಪಾಸ್. ಈ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಸೇರಿದಂತೆ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸಲಹೆ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ನೀಡಲು ಕಷ್ಟ. ಪರೀಕ್ಷೆ ನಡೆಸದೆ ಗ್ರೇಡಿಂಗ್ ಕೊಡುವುದಕ್ಕೆ ಕಷ್ಟವಾಗುತ್ತದೆ. ಈ ವಿದ್ಯಾರ್ಥಿಗಳು 9ನೇ ತರಗತಿ ಪರೀಕ್ಷೆಯನ್ನೂ ಬರೆದಿಲ್ಲ. ಯಾವ ಆಧಾರದಲ್ಲಿ ಫಲಿತಾಂಶ ನೀಡಬೇಕೆಂದೂ ಗೊತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ SSLC ಪರೀಕ್ಷೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆಯಾಗಲಿದೆ. ಕೊವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿದೆ. ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ.

ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಿ ಪರೀಕ್ಷೆ ನಡೆಸುತ್ತೇವೆ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುತ್ತೇವೆ. ಎಲ್ಲರಿಗೂ N95 ಮಾಸ್ಕ್ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸುರೇಶ್​ ಕುಮಾರ್ ತಿಳಿಸಿದ್ದಾರೆ.

RELATED TOPICS:
English summary :2nd PUC Exam 2021

ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#

ನ್ಯೂಸ್ MORE NEWS...