ಯಡಿಯೂರಪ್ಪ ಎ1 ಆರೋಪಿ, ಮುಖ್ಯಮಂತ್ರಿಯೊಂದಿಗೆ ಅಧಿಕಾರಿಗಳನ್ನು ಸೇರಿಸಿ ಕೇಸ್ ಹಾಕ್ತಿನಿ | ಜನತಾ ನ್ಯೂಸ್

05 Jun 2021
454
Revanna

ಹಾಸನ : ರಾಜ್ಯದ ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ ನಡೆದಿದೆ. ಇದಕ್ಕೆ ಪೂರಕ ದಾಖಲೆ ನನ್ನ ಬಳಿ ಇದೆ, ಯಡಿಯೂರಪ್ಪ ಅವರನ್ನೇ ಎ1 ಮಾಡುತ್ತೇನೆ, ನಾನೇನು ಕೇರ್ ಮಾಡಲ್ಲ, ಕಾನೂನು ಹೋರಾಟ ಮಾಡುತ್ತೇನೆ. ಏನೇನು ನಡಿತಿದೆ ನೀರಾವರಿ ಇಲಾಖೆಯಲ್ಲಿ ಎಂದು ಗೊತ್ತಿದೆ. ಮುಖ್ಯಮಂತ್ರಿಯೊಂದಿಗೆ ಅಧಿಕಾರಿಗಳನ್ನು ಸೇರಿಸಿ ಕೇಸ್ ಹಾಕ್ತಿನಿ. ರಾಜ್ಯವನ್ನು ಬಿಜೆಪಿಗೆ ಅಡ ಇಟ್ಟಿದ್ದಾರಾ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ 3 ತಿಂಗಳಲ್ಲಿ 60 ಸಾವಿರ ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೆಚ್‌.ಡಿ. ರೇವಣ್ಣ ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ. 1.97 ರಷ್ಟಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡುವುದರಲ್ಲೂ ರಾಜಕೀಯ ಶುರುವಾಗಿದೆ.

ಕಾರ್ಖಾನೆಗಳ ಮಾಲೀಕರಿಂದ ಹಣ ಪಡೆದು ವ್ಯಾಕ್ಸಿನ್ ನೀಡಲಿ. ಸರ್ಕಾರದ ಉಚಿತ ವ್ಯಾಕ್ಸಿನ್ ಏಕೆ ಕೊಡಬೇಕು. ಹಳ್ಳಿಗಳಲ್ಲಿ ಇದು ವರೆಗೂ ಶೇ.10 ವ್ಯಾಕ್ಸಿನ್ ನೀಡಿಲ್ಲ, ಗ್ರಾಮೀಣ ಪ್ರದೇಶದಲ್ಲಿ ವ್ಯಾಕ್ಸಿನ್ ಇಲ್ಲ, ಇಂದು ಆಟೋ ಡ್ರೈವರ್​ಗಳಿಗೆ ಸರ್ಕಾರದಿಂದ ಲಸಿಕೆ ನೀಡಲಾಗುತ್ತಿದೆ.

ಬಿಜೆಪಿ ಶಾಸಕರ ಫೋಟೋ ಏಕೆ ಹಾಕಬೇಕಿತ್ತು. ಯಡಿಯೂರಪ್ಪ ಅವರ ಮನೆಯಿಂದ ಕೊಡುತ್ತಿದ್ದಾರಾ? ಎಂದು ಹೆಚ್‌.ಡಿ.ರೇವಣ್ಣ ಪ್ರಶ್ನಿಸಿದ್ದಾರೆ. ಶಾಸಕರ ಎರಡು ಕೋಟಿ ಗ್ರಾಂಟ್​ ಹಣವನ್ನು ಕೊಡ್ತಿಲ್ಲಾ, ನೀರಾವರಿ ಇಲಾಖೆಯಲ್ಲಿ ನೂರಾರು ಕೋಟಿ ಲೂಟಿ ನಡೆಯುತ್ತಿದೆ. ಕಾನೂನುಗಳನ್ನು ಗಾಳಿಗೆ ತೂರಲಾಗುತ್ತಿದೆ.

ಆರು ಕೋಟಿ ಜನತೆಯ ತೆರಿಗೆ ಹಣದಿಂದ ವ್ಯಾಕ್ಸಿನ್ ಕೊಡುತ್ತಿದ್ದಾರೆ. ರೈತರನ್ನ ಯಾರೂ ಹೇಳೋರು ಕೇಳೋರು ಇಲ್ಲ, ಎಲ್ಲರ ಬಳಿ ಚಂದಾ ಎತ್ತಲು ಯಾಕೆ ಹೋಗಬೇಕು? ಲೂಟಿ ಹೊಡೆಯೋಕಾ? ಮುಖ್ಯಮಂತ್ರಿಗಳೇ ಹಣಕಾಸು ಮಂತ್ರಿ, ಆಮೇಲೆ ಅಧಿಕಾರಿಗಳು, ಅದೇನ್ ಮಾಡುತ್ತಾರೆ ನೋಡೋಣ. ಎಲ್ಲಾ ದಾಖಲೆಗಳನ್ನು ರೆಡಿ ಮಾಡುತ್ತಿದ್ದೇನೆ.

103 ಜನಕ್ಕೆ ಒಂದು ಕಾನೂನು, ಬಿಜೆಪಿ ಶಾಸಕರಿಗೆ ಒಂದು ಕಾನೂನು, ನಾನು ಹೇದರಿಕೊಂಡು ಓಡಿ ಹೋಗಲ್ಲ, ಸಿದ್ದರಾಮಯ್ಯ ಒಬ್ಬರೇ ಕೂಗಾಡುವ ಪರಿಸ್ಥಿತಿಯಿದೆ. ಕಾಂಗ್ರೆಸ್ ವಿರೋಧ ಪಕ್ಷ, ಅವರು ಏನು ಮಾತನಾಡುತ್ತಿಲ್ಲ ಈ ಪರಿಸ್ಥಿತಿ ಬಂದು ಹೋಗಿದೆ ರಾಜ್ಯದಲ್ಲಿ, ದೇವರು ಶಕ್ತಿಕೊಟ್ಟಾಗ ನಾನು ಕೆಲಸ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED TOPICS:
English summary :Revanna

ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಒಂದುವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಎಂಜಿನಿಯರ್ ಸಾವು | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಬೆಂಗಳೂರಿಗೆ ವಾಪಸ್ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ : ಸಿಎಂ ಬಿಎಸ್​​ವೈ | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಆಡುತ್ತಿದ್ದಾಗ ತೆಂಗಿನ ಮರ ಬಿದ್ದು ಬಾಲಕ ಸಾವು | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಕಚ್ಚಿದ ಹಾವು ಹಿಡಿದು ಆಸ್ಪತ್ರೆಗೆ ಬಂದ ವ್ಯಕ್ತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಉಡುಪಿ: ಪುಸ್ತಕ ಅಂಗಡಿ, ಮೊಬೈಲ್ ಅಂಗಡಿ ತೆರೆಯಲು ಬುಧವಾರ ಒಂದು ದಿನಕ್ಕೆ ಅನುಮತಿ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಪಿಯುಸಿ ಪರೀಕ್ಷೆ ರದ್ದು: ಮನನೊಂದ ಶಿರಸಿ ವಿದ್ಯಾರ್ಥಿನಿ ಆತ್ಮಹತ್ಯೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕಾಂಗ್ರೆಸ್‌ ಹೋರಾಡುತ್ತಿರುವುದು ಬೆಲೆ ಇಳಿಸಲೋ, ಪೆಟ್ರೋಲ್‌ ಅನ್ನು ಜಿಎಸ್‌ಟಿಗೆ ಸೇರಿಸಲೋ? ಎಚ್‌ಡಿಕೆ ಪ್ರಶ್ನೆ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 144 ಸಾವು, 9,785 ಹೊಸ ಪ್ರಕರಣ : ಬೆಂಗಳೂರಲ್ಲಿ 2454 | ಜನತಾ ನ್ಯೂ&#
ಪಾಕ್ ಪತ್ರಕರ್ತರಿಗೆ
ಪಾಕ್ ಪತ್ರಕರ್ತರಿಗೆ "ಆರ್ಟಿಕಲ್ 370 ಹಿಂತೆಗೆವ" ಕುರಿತು ಆಶ್ವಾಸನೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ಬೆಂಗಳೂರಿನ ರೌಡಿ ಗ್ಯಾಂಗ್‌ಗಳಿಗೆ ಪಿಸ್ತೂಲ್ ಮಾರ್ಕೆಟ್ ಸತೀಶ್ ಸೇರಿ ಮೂವರ ಬಂಧನ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ವಿದ್ಯಾರ್ಥಿಗಳು ಶಾಲಾ ಶುಲ್ಕ ಪಾವತಿಸಿಲ್ಲ ಎಂದು ಆನ್ ಲೈನ್ ಕ್ಲಾಸ್ ನಿಲ್ಲಿಸುವಂತಿಲ್ಲ: ಸುರೇಶ್‌ ಕುಮಾರ್‌ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#
ಕೆರೆಗೆ ಹಾರಿ ಪೊಲೀಸ್ ಕಾನ್ಸ್​ಟೇಬಲ್ ಆತ್ಮಹತ್ಯೆ | ಜನತಾ ನ್ಯೂ&#

ನ್ಯೂಸ್ MORE NEWS...