ಗಾಂಧೀಜಿ ಮರಿಮೊಮ್ಮಗಳಿಗೆ 7 ವರ್ಷ ಜೈಲುಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ ಕೋರ್ಟ್ | ಜನತಾ ನ್ಯೂಸ್

08 Jun 2021
414
Gandhiji granddaughter

ದಕ್ಷಿಣ ಆಫ್ರಿಕಾ : ಆರು ದಶಲಕ್ಷ ರ್ಯಾಂಡ್ ವಂಚನೆ ಮತ್ತು ಖೋಟಾ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳಿಗೆ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಗಾಂಧಿ ಮರಿ ಮೊಮ್ಮಗಳಾದ ಆಶೀಶ್ ಲತಾ ರಾಮ್ ಗೋಬಿಬ್ ದೋಷಿ ಎಂದು ಡರ್ಬಲ್ ಕೋರ್ಟ್ ಸೋಮವಾರ(ಜೂನ್ 07) ದೋಷಿ ಎಂದು ತೀರ್ಪು ನೀಡಿತ್ತು. ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ಆಫ್ರಿಕಾದ ಉದ್ಯಮಿ ಎಸ್.ಆರ್.ಮಹಾರಾಜ್ ಎಂಬವರ ಬಳಿ ಲತಾ ರಾಮ್ 6.2 ದಶಲಕ್ಷ ರಾಂಡ್ ಹಣ ಪಡೆದಿದ್ದರು. ಅಲ್ಲದೇ ತಾವು ಗಳಿಸಿದ ಆದಾಯದಲ್ಲಿ ಪಾಲು ನೀಡುವುದಾಗಿ ಹೇಳಿ, ಲತಾ ವಂಚಿಸಿರುವುದಾಗಿ ಉದ್ಯಮಿ ಆರೋಪಿಸಿ ದೂರು ನೀಡಿದ್ದರು.

ಖ್ಯಾತ ಸಾಮಾಜಿಕ ಹಕ್ಕುಗಳ ಕಾರ್ಯಕರ್ತರಾದ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿಂದ್ ಅವರ ಪುತ್ರಿ ಲತಾ ರಾಮ್‌ಗೋಬಿನ್ ಅವರಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಅವಕಾಶ ನಿರಾಕರಿಸಿತು.

2015 ರಲ್ಲಿ ಲತಾ ರಾಮ್‌ಗೋಬಿನ್ ವಿರುದ್ಧದ ಪ್ರಕರಣದ ವಿಚಾರಣೆ ಪ್ರಾರಂಭವಾದಾಗ, ನ್ಯಾಷನಲ್ ಪ್ರಾಸಿಕ್ಯೂಟಿಂಗ್ ಪ್ರಾಧಿಕಾರದ (ಎನ್‌ಪಿಎ) ಬ್ರಿಗೇಡಿಯರ್ ಹಂಗ್ವಾನಿ ಮುಲಾಡ್ಜಿ ಅವರು ಭಾರತದಿಂದ ಮೂರು ಲಿನಿನ್ ಕಂಟೇನರ್‌ಗಳನ್ನು ಸಾಗಿಸಲಾಗುತ್ತಿದೆ ಎಂದು ಸಂಭಾವ್ಯ ಹೂಡಿಕೆದಾರರಿಗೆ ಮನವರಿಕೆ ಮಾಡಲು ನಕಲಿ ಇನ್‌ವಾಯ್ಸ್ ಮತ್ತು ದಾಖಲೆಗಳನ್ನು ಒದಗಿಸಿದ್ದಾರೆ ಎಂದು ಹೇಳಿದ್ದರು

ಆ ಸಮಯದಲ್ಲಿ, ಲತಾ ರಾಮ್‌ಗೋಬಿನ್ 50,000 ರಾಂಡ್‌ನ ಜಾಮೀನಿನ ಮೇಲೆ ಬಿಡುಗಡೆಯಾದರು ಎಂದು ವರದಿ ಹೇಳಿದೆ. ಲತಾ ರಾಮ್‌ಗೋಬಿನ್ ಅವರು 2015ರ ಆಗಸ್ಟ್‌ನಲ್ಲಿ "ನ್ಯೂ ಆಫ್ರಿಕಾ ಅಲೈಯನ್ಸ್" ಕಂಪನಿ ನಿರ್ದೇಶಕ ಮಹಾರಾಜ್ ಅವರನ್ನು ಭೇಟಿ ಮಾಡಿದ್ದರು. ನ್ಯೂ ಆಫ್ರಿಕಾ ಅಲೈಯನ್ಸ್‌ ಕಂಪನಿಯು ಲೆನಿನ್‌ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತದೆ. ಮಹಾರಾಜ್ ಅವರ ಕಂಪನಿಯು ಲಾಭ-ಷೇರು ಆಧಾರದ ಮೇಲೆ ಇತರ ಕಂಪನಿಗಳಿಗೆ ಹಣಕಾಸು ನೆರವು ಒದಗಿಸುತ್ತದೆ. ದಕ್ಷಿಣ ಆಫ್ರಿಕಾದ ನೆಟ್‌ಕೇರ್‌ ಆಸ್ಪತ್ರೆ ಸಮೂಹಗಳಿಗೆ ವಿತರಿಸಲೆಂದು ಭಾರತದಿಂದ ಮೂರು ಕಂಟೇನರ್ ಲಿನಿನ್ ಬಟ್ಟೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದಾಗಿ ಲತಾ ರಾಮ್‌ಗೋಬಿನ್ ಮಹಾರಾಜ್‌ ಅವರಿಗೆ ತಿಳಿಸಿದ್ದರು ಎನ್ನಲಾಗಿದೆ.

ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಗಾಂಧಿ ಮರಿ ಮೊಮ್ಮಗಳು ಆಶಿಶ್ ಲತಾ ರಾಮ್‌ಗೋಬಿನ್ ಅವರು ತಪ್ಪಿತಸ್ಥರು ಎಂದು ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

RELATED TOPICS:
English summary :Gandhiji granddaughter

ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ವಿಕೃತ ಕಾಮುಕನ ಬಂಧನ | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ತಂದೆಯ ತಲೆಯನ್ನ ರುಬ್ಬವ ಕಲ್ಲಿಂದ ಜಜ್ಜಿ ಕೊಂದ ಮಗ! | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ - ಹೆಚ್. ವಿಶ್ವನಾಥ್ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 138 ಸಾವು, 5,983 ಹೊಸ ಪ್ರಕರಣ : ಬೆಂಗಳೂರಲ್ಲಿ 1,209 | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ  | ಜನತಾ ನ್ಯೂ&#
ವಿಶ್ವದ ಅತಿಹೆಚ್ಚು ಡೇಟಾ ಬಳಕೆ, ಅತಿಕಡಿಮೆ ಡೇಟಾ ದರವಿರುವ ಭಾರತದಲ್ಲಿ ಹೂಡಿಕೆಗೆ ಅಹ್ವಾನ - ಪ್ರಧಾನಿ ಮೋದಿ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ನಾಲ್ವರು ಶ್ರೀಗಂಧ ಕಳ್ಳರ ಬಂಧನ: 25 ಲಕ್ಷ ಮೌಲ್ಯದ ಶ್ರೀಗಂಧ ವಶ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ರಾಜ್ಯಕ್ಕೆ ರಕ್ಷಣಾ ತಂತ್ರಜ್ಞಾನ ಹಬ್‌ ಘೋಷಿಸುವಂತೆ ರಕ್ಷಣಾ ಸಚಿವರಿಗೆ ಪತ್ರ | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ! | ಜನತಾ ನ್ಯೂ&#
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ  ಸ್ಪಷ್ಟನೆ | ಜನತಾ ನ್
ಪದವಿ ಶಿಕ್ಷಣದಲ್ಲಿ ಕನ್ನಡ ಕಲಿಕೆ ಕಡಿತ ಇಲ್ಲ - ಡಿಸಿಎಂ ಸ್ಪಷ್ಟನೆ | ಜನತಾ ನ್
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ಜೂನ್​ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಸಂಚಾರ ಆರಂಭ, ಆದರೆ ಷರತ್ತು ಅನ್ವಯ! | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ?  | ಜನತಾ ನ್ಯೂ&#
ವಿಶ್ವನಾಥ್ ಮಗ ಜಿಪಂ‌ ಸದಸ್ಯ ಅಲ್ವಾ, ಅದು ಕುಟುಂಬ ರಾಜಕೀಯ ಅಲ್ವಾ? | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#
ಸೋನಿಯಾ ಎರಡೂ ಡೋಸ್ ಪಡೆದಿದ್ದಾರೆ, ರಾಹುಲ್ ಕಾಯುವ ಅವಧಿಯ ಬಳಿಕ ತೆಗೆದುಕೊಳ್ಳಲಿದ್ದಾರೆ - ಕಾಂಗ್ರೆಸ್ | ಜನತಾ ನ್ಯೂ&#

ನ್ಯೂಸ್ MORE NEWS...