ಪ್ರಧಾನಿ ಮೋದಿ ಕಾರ್ಯವೈಖರಿಯಿಂದ ಪ್ರಭಾವಿತರಾಗಿ ಬಿಜೆಪಿ ಸೇರ್ಪಡೆ - ಕಾಂಗ್ರೆಸ್ ತೊರೆದ ಮಾಜಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ | ಜನತಾ ನ್ಯೂಸ್

09 Jun 2021
401

ನವದೆಹಲಿ : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಯಾಗಲಿರುವುದು ದೇಶದ ಅತ್ಯಂತ ಹಳೇ ರಾಜಕೀಯ ಪಕ್ಷ ಕಾಂಗ್ರೆಸ್‌ ಪಕ್ಷದ ಚುಕ್ಕಾಣಿ ಹಿಡಿದಿರುವ ಗಾಂಧಿ ಕುಟುಂಬದ ನಾಯಕತ್ವದ ಮೇಲೆ ಮತ್ತೊಂದು ಸವಾಲು ಎದುರಾಗಿದೆ. ಇದಕ್ಕೂ ಮೊದಲು ರಾಹುಲ್ ಗಾಂಧಿ ಆಪ್ತ ವಲಯದಲ್ಲಿದ್ದ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬೆನ್ನಲ್ಲೇ ಜಿತಿನ್ ಪ್ರಸಾದ್ ಅವರು ಕಾಂಗ್ರೆಸ್ ನ್ನು ತಿರಸ್ಕರಿಸಿದ್ದಾರೆ.

ದೇಶದಲ್ಲಿರುವ ಏಕೈಕ ರಾಷ್ಟೀಯ ಪಕ್ಷವನ್ನು ತಾವು ಸೇರ್ಪಡೆಗೋಳ್ಳುತ್ತಿರುವುದಾಗಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ ಜಿತಿನ್ ಪ್ರಸಾದ ಅವರು, ಹಗಲಿರುಳು ಶ್ರಮಿಸುವ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತರಾಗಿರುವುದಾಗಿ ಹೇಳಿದ್ದು. ಮೋದಿಯವರು ನಿರ್ಮಿಸಲು ಹೊರಟಿರುವ ನವಭಾರತದ ಮಹಾನ್ಕಾರ್ಯದಲ್ಲಿ ಚಿಕ್ಕದಾದರೂ ಯೋಗಧಾನ ನೀಡಲು ಅವಕಾಶ ಪಡೆಯಲು ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.

ತಮ್ಮ ಹಿಂದಿನ ಮೂರು ಪಿಳಿಗೆಯಿಂದ ಕಾಂಗ್ರೆಸ್ ಪಕ್ಷದ ಜೊತೆಗಿದ್ದು, ತುಂಬಾ ಯೋಚನೆ, ವಿಚಾರ, ವಿಮರ್ಶೆಯ ಬಳಿಕ ಇಂತಹದೊಂದು ದೊಡ್ಡ ದೃಡ ನಿರ್ಧಾರಕ್ಕೆ ಬಂದಿರುವುದಾಗಿ, ಈ ಸಂದರ್ಭದಲ್ಲಿ ಪ್ರಸಾದ್ ಹೇಳಿದ್ದಾರೆ. ತಾವು ಯಾವ ಪಕ್ಷ ತೊರೆಯುತ್ತಿದ್ದೇವೆ ಎನ್ನುವುದಕ್ಕಿಂತ ಯಾವ ಪಕ್ಷವನ್ನು ಸೇರುತ್ತಿದ್ದೇವೆ ಎನ್ನುವುದು ತುಂಬಾ ಮುಖ್ಯ ಎಂದಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಹೊಸ್ತಿಲಲ್ಲಿ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿರುವುದು ಕಮಲ ಪಾಳಯಕ್ಕೆ ಲಾಭ ತಂದು ಕೊಡಲಿದೆ. ಜಿತಿನ್ ಪ್ರಸಾದ್ ಉತ್ತರ ಪ್ರದೇಶದ ಪ್ರಭಾವಿ ಬ್ರಾಹ್ಮಣ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಎಪ್ರಿಲ್ ಮೇ ತಿಂಗಳಲ್ಲಿ ನಡೆದ ಐದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಬಹುತೇಕ ದೂಳಿಪಟವಾಗಿದ್ದ ಕಾಂಗ್ರೆಸ್‌ಗೆ ಇದೀಗ ಮತ್ತೊಂದು ಉತ್ತರ ಪ್ರದೇಶ ಚುನಾವಣೆ ಸಂದರ್ಭದಲ್ಲಿ ಶಾಕಿಂಗ್ ಸುದ್ದಿ ಲಭಿಸಿದೆ. ಹೌದು ಮಾಜಿ ಸಚಿವ ಹಾಗೂ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಜಿತಿನ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಭಾರತದ ಮಾಜಿ ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿ ಹಾಗೂ ಪಿ. ವಿ. ನರಸಿಂಹರಾವ್‌ರವರ ರಾಜಕೀಯ ಸಲಹೆಗಾರ ಜಿತೇಂದ್ರ ಪ್ರಸಾದ್‌ರವರ ಪುತ್ರ ಎಂಬುವುದು ಉಲ್ಲೇಖನೀಯ.

ಈವರೆಗೂ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಜಿತಿನ್ ಕುಮಾರ್ ಅವರು ಯಾವುದೇ ಸುಳಿವು ನೀಡಿರಲಿಲ್ಲವಾದರೂ, ಜೂನ್ 5 ರಂದು ಅವರು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು.

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಪ್ರಹ್ಲಾದ್ ಜೋಷಿ ಅವರ ಉಪಸ್ಥಿತಿಯಲ್ಲಿ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಜಿತಿನ್ ಪ್ರಸಾದ್ ಕೇಸರಿ ಪಾಳಯಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

RELATED TOPICS:
English summary :Impressed by PM Modi works joining BJP - Former union Min. Jitin Prasad

ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನೆ ಭ್ರಷ್ಟಾಚಾರ: ಸಿದ್ದರಾಮಯ್ಯ | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
ಗಾಂಧಿಯ ಮಗ ಕುಡುಕನಾದ: ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿಯ ಪುತ್ರನ ಬಗ್ಗೆಯೋ? | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#
60 ಕ್ಕೂ ಹೆಚ್ಚು ಮಂಗಗಳಿಗೆ ವಿಷಪ್ರಾಶನ ಮಾಡಿ, ಗೋಣಿಚೀಲದಲ್ಲಿ ಕಟ್ಟಿ ಎಸೆದ ದುಷ್ಕರ್ಮಿಗಳು | ಜನತಾ ನ್ಯೂ&#

ನ್ಯೂಸ್ MORE NEWS...