ಐಎಸ್​ಡಿ ಕರೆ ಲೋಕಲ್ ಕಾಲ್ ಆಗಿ ಪರಿವರ್ತನೆ: 960 ಸಿಮ್​ ಸಹಿತ ಇಬ್ಬರು ಖತರ್ನಾಕ್​ಗಳ ಬಂಧನ | ಜನತಾ ನ್ಯೂಸ್

09 Jun 2021
473

ಬೆಂಗಳೂರು : ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ದೂರ ಸಂಪರ್ಕ ಇಲಾಖೆಗೆ ನಷ್ಟ ಮಾಡುವ ಜತೆಗೆ ದೇಶದ ಭದ್ರತೆಗೆ ಗಂಡಾಂತರ ತಂದಿಟ್ಟಿದ್ದ ಇಬ್ಬರು ಕೇರಳ ಮೂಲದ ಕಿರಾತಕರನ್ನು ಸಿಸಿಬಿ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರಿಂದ ಏಕಕಾಲಕ್ಕೆ 960 ಸಿಮ್ ಕಾರ್ಡ್ ಅಳವಡಿಸುವಂತಹ 30 ಸಿಮ್ ಬಾಕ್ಸ್ ಇರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದಲ್ಲಿ ಜಾಲಹಳ್ಳಿ ಮೂಲದ ಹಾಗೂ ತಮಿಳುನಾಡಿನ ಓರ್ವ ಆರೋಪಿ ಸೇರಿದಂತೆ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ. ‌ಪ್ರಕರಣದ ಪ್ರಮುಖ‌ ರೂವಾರಿ ಇಬ್ರಾಹಿಂ ಕೆಲ ವರ್ಷಗಳಿಂದ ದುಬೈನಲ್ಲಿ ಚಾಲಕನಾಗಿದ್ದ. ಅರಬ್ ದೇಶಗಳಲ್ಲಿ ಬೆಂಗಳೂರು ಸೇರಿದಂತೆ ದೇಶದ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದ.

ಭಾರತಕ್ಕೆ ಕರೆ ಮಾಡಬೇಕಾದರೆ ಹೆಚ್ಚಿನ ದರ ವಿಧಿಸುತ್ತಿರುವುದನ್ನು ಅರಿತ ಆರೋಪಿ ಸ್ಥಳೀಯ ನಿವಾಸಿ ರಿಯಾಜ್​ ಎಂಬಾತನ ನೆರವಿನಿಂದ ಅಂತಾರಾಷ್ಟ್ರೀಯ ಇನ್​ಕಮಿಂಗ್ ಕಾಲ್​ಗಳನ್ನು (ಐಎಸ್​ಡಿ) ಸ್ಥಳೀಯ ಕರೆಗಳಾಗಿ ಬೆಂಗಳೂರಿನಲ್ಲಿ ಕುಳಿತು ಪರಿವರ್ತಿಸುತ್ತಿದ್ದ.

ಬಿಟಿಎಂ ಲೇಔಟ್​ನ 6 ಕಡೆ ಸಿಸಿಬಿ ದಾಳಿ ನಡೆಸಿತ್ತು. ಈ ವೇಳೆ ಆರೋಪಿಗಳು 32 ಸಿಮ್ ಕಾರ್ಡ್ ಅಳವಡಿಸುವಂತಹ ಎಲೆಕ್ಟ್ರಾನಿಕ್ ಡಿವೈಸ್ ಮೂಲಕ 900ಕ್ಕು ಹೆಚ್ಚು ಸಿಮ್ ಕಾರ್ಡ್ ಅಳವಡಿಸಿಕೊಂಡಿದ್ದರು. ಈ ಮೂಲಕ ISD ಫೋನ್ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುತ್ತಿದ್ದರು. ಅಮಾಯಕರ ಗುರುತಿನ ಚೀಟಿಗಳ ಮೂಲಕ ಸಿಮ್ ಕಾರ್ಡ್​ಗಳನ್ನು ಪಡೆಯುತ್ತಿದ್ದರು.

ಕೇರಳ ಹಾಗೂ ಬೆಂಗಳೂರಿನ ಜಾಲಹಳ್ಳಿಯಲ್ಲಿ ತಮ್ಮ ಸಹಚರರ ಮೂಲಕ ಗುರುತಿನ ಚೀಟಿಗಳನ್ನ ಸಂಗ್ರಹ ಮಾಡ್ತಿದ್ದರು. ಸಿಮ್ ಪಡೆಯಲು ಬರುವ ಗ್ರಾಮೀಣ ಭಾಗದ ಜನರ ಐಡಿ ಕಾರ್ಡ್ ಡುಪ್ಲೀಕೇಟ್ ಪಡೆದು, ಆ ಮೂಲಕ ಈ ಗ್ಯಾಂಗ್ ಬೇರೆ ಸಿಮ್ ಕಾರ್ಡ್​​ಗಳನ್ನು ಪಡೆಯುತ್ತಿತ್ತು ಎಂದು ಕಮಲ್ ಪಂತ್ ಮಾಹಿತಿ ನೀಡಿದ್ದಾರೆ.

ದುಬೈನ ತಮ್ಮ ನೆಟ್​ವರ್ಕ್​ನಿಂದ ಆರೋಪಿಗಳು ಇಲ್ಲಿ ಹವಾಲಾ ಮೂಲಕ ಹಣ ಪಡೆಯುತ್ತಿದ್ದರು. ಈ ಕೇಸ್​ನಲ್ಲಿ ಸದ್ಯ ಐವರು ಭಾಗಿಯಾಗಿದ್ದಾರೆ. ತಿಂಗಳಿಗೆ 10 ರಿಂದ 15 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು‌.‌ ಹವಾಲಾ ಮೂಲಕ ಇದುವರೆಗೂ ಎಷ್ಟು ಹಣ ವರ್ಗಾವಣೆ ಮಾಡಲಾಗಿದೆ. ಎಷ್ಟು ಜನರೊಂದಿಗೆ ವ್ಯವಹಾರ ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

RELATED TOPICS:
English summary :Bangalore

ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#

ನ್ಯೂಸ್ MORE NEWS...