ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅಪರೂಪದ ಮಾದಕ ವಸ್ತು, ನಾಲ್ವರು ಆರೋಪಿಗಳ ಬಂಧನ! | ಜನತಾ ನ್ಯೂಸ್

09 Jun 2021
517

ಬೆಂಗಳೂರು : ನಗರದಲ್ಲಿ ಅಕ್ರಮವಾಗಿ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ತಜ್ಮುಲ್ (54), ಸಲೀಂ ಪಾಷಾ (48), ರಫೀ ಉಲ್ಲಾ ಶರೀಫ್ (45) ಹಾಗೂ ನಾಸೀರ್ ಪಾಷಾ (34) ಬಂಧಿತ ಆರೋಪಿಗಳು.

ಬಂಧಿತರಿಂದ ಅಂದಾಜು 8 ಕೋಟಿ ರೂ ಬೆಲೆಬಾಳುವ 6ಕೆಜಿ 700 ಗ್ರಾಂ ತೂಕದ ವೀರ್ಯ ತಿಮಿಂಗಲದ ಅಂಬರ್ ಗ್ರೀಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಬಲು ಅಪರೂಪ ಎನ್ನಿಸಿಕೊಂಡಿರುವ ಹಾಗೂ ನಿಷೇಧಿತಗೊಂಡಿರುವ, ತಿಮಿಂಗಿಲ ವೀರ್ಯದಿಂದ ಹೊರಬರುವ ಮೇಣದ ರೀತಿಯಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದ ನಾಲ್ವರು ದಂಧೆಕೋರರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯ ಎಂಆರ್ ಕೆ ಟಂಟ್ ಹೌಸ್ ಹಿಂಭಾಗ ಲಕ್ಷ್ಮೀ ಪತಿ ಗಾರ್ಡನ್ ಬಳಿ ಅಪರಿಚಿತ ವ್ಯಕ್ತಿಗಳು ಮಾದಕ ವಸ್ತುಗೆ ಸಂಬಂಧಿಸಿದ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಅಂಬೆರ್ಗ್ರಿಸ್:
ಸ್ಪರ್ಮ್ ವೇಲ್ ಪ್ರಭೇಧದ ತಿಮಿಂಗಿಲವು ಹೊರಹಾಕುವ ವೀರ್ಯಾಣು ಹಾಗೂ ವಾಂತಿಯನ್ನು ಅಂಬೆರ್ಗ್ರಿಸ್ ಎನ್ನುತ್ತಾರೆ. ಇದು ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತದೆ‌‌‌.

ಅರಬ್, ಚೀನಾ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ಸುಮಾರು ಒಂದೂವರೆ ಕೋಟಿ ಬೆಲೆ ಇದೆ.ಸುಗಂಧ ದ್ರವ್ಯಕ್ಕೆ ಬಳಕೆಯಾಗುವ ಅಂಬೆರ್ಗ್ರಿಸ್ ಭಾರತದಲ್ಲಿ ಕಾನೂನು ಪ್ರಕಾರ ಮಾರಾಟ ಮಾಡುವಂತಿಲ್ಲ.

ಸಂಶೋಧನೆಗೆ ಮಾತ್ರ ಬಳಸಬಹುದಾಗಿದೆ. ಮೇಣದ ರೀತಿಯ ವಸ್ತುವನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬ ನಗರಕ್ಕೆ ಬಂದು ಆರೋಪಿಗಳಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡಿದ್ದಾನೆ. ಇದನ್ನು ಬೇರೆ ದಂಧೆಕೋರರಿಗೆ ಮಾರಾಟಕ್ಕೆ ಯೋಜನೆ ರೂಪಿಸಿದ್ದಾಗ ಕೆ.ಜಿ‌‌.ಹಳ್ಳಿ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ.

RELATED TOPICS:
English summary :Bangalore

ಕಾಂಗ್ರೆಸ್ ಪಕ್ಷಕ್ಕೆ ನನ್ನ ಶಕ್ತಿಯನ್ನೆಲ್ಲಾ ಧಾರೆಯೆರೆವೆ, ತಂದೆ ಹೆಸರನ್ನು ಉಳಿಸುವ ಕೆಲಸ ಮಾಡುವೆ: ಮಧುಬಂಗಾರಪ್ಪ | ಜನತಾ ನ್ಯೂ&#
ಕಾಂಗ್ರೆಸ್ ಪಕ್ಷಕ್ಕೆ ನನ್ನ ಶಕ್ತಿಯನ್ನೆಲ್ಲಾ ಧಾರೆಯೆರೆವೆ, ತಂದೆ ಹೆಸರನ್ನು ಉಳಿಸುವ ಕೆಲಸ ಮಾಡುವೆ: ಮಧುಬಂಗಾರಪ್ಪ | ಜನತಾ ನ್ಯೂ&#
ದಾವಣಗೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ! | ಜನತಾ ನ್ಯೂ&#
ದಾವಣಗೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ! | ಜನತಾ ನ್ಯೂ&#
 ಮೃತ ಅಭಿಮಾನಿ ಕುಟುಂಬಕ್ಕೆ ಯಡಿಯೂರಪ್ಪ 5 ಲಕ್ಷ ಆರ್ಥಿಕ ನೆರವು, ಇನ್ನೂ ಐದು ಲಕ್ಷ ನೀಡುವ ಭರವಸೆ! | ಜನತಾ ನ್ಯೂ&#
ಮೃತ ಅಭಿಮಾನಿ ಕುಟುಂಬಕ್ಕೆ ಯಡಿಯೂರಪ್ಪ 5 ಲಕ್ಷ ಆರ್ಥಿಕ ನೆರವು, ಇನ್ನೂ ಐದು ಲಕ್ಷ ನೀಡುವ ಭರವಸೆ! | ಜನತಾ ನ್ಯೂ&#
ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್ ಹೊಸ ಬಾಂಬ್! | ಜನತಾ ನ್ಯೂ&#
ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್ ಹೊಸ ಬಾಂಬ್! | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#

ನ್ಯೂಸ್ MORE NEWS...