ಫ್ರೆಂಡ್ಸ್ ಜತೆ ಕಪಲ್ ಸೆಕ್ಸ್ ಮಾಡು ಅಂತಾ ಹೆಂಡತಿಗೆ ಟಾರ್ಚರ್! | ಜನತಾ ನ್ಯೂಸ್
ಬೆಂಗಳೂರು : ಸ್ನೇಹಿತನೊಂದಿಗೆ ಲೈಂಗಿಕ ಕ್ರಿಯೆ ನಡೆಸು ಎಂದು ಒತ್ತಾಯಿಸಿ ಹಿಂಸೆ ನೀಡುತ್ತಿದ್ದ ಸೈಕೋಪಾತ್ ಗಂಡನ ಕಿರುಕುಳ ತಾಳಲಾರದ ಹೆಂಡತಿ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಆತನ ವಿರುದ್ಧ ದೂರು ನೀಡಿದ್ದಾಳೆ.
ಬೆಂಗಳೂರಿನ ಶಿವಾಜಿನಗರ ನಿವಾಸಿ ವಸೀಂ ಶರೀಫ್ ಆರೋಪಿ, ಬನಶಂಕರಿಯ ಯುವತಿ 2018ರ ಜನವರಿಯಲ್ಲಿ ಬಿಟಿಎಂ ಲೇಔಟ್ ನಿವಾಸಿ ವಸೀಂ ಶರೀಫ್ ಎಂಬಾತನನ್ನ ವಿವಾಹವಾಗಿದ್ದಳು. ಇತ್ತೀಚಿನ ದಿನಗಳಲ್ಲಿ ಪತ್ನಿಗೆ ಕಪಲ್ ಸೆಕ್ಸ್ಗೆ ಈತ ಒತ್ತಾಯಿಸಿದ್ದಾನೆ.
ಮೊದಲಿಗೆ ಪತ್ನಿಯನ್ನ ಊಟಿ, ಗೋವಾಗೆ ಕರೆದೊಯ್ದಿರೋ ಆರೋಪಿ ವಸೀಂ ಪತ್ನಿಗೆ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಿ ವಾಪಸ್ ಬೆಂಗಳೂರಿಗೆ ಕರೆ ತಂದಿದ್ದಾನೆ.
ಸಾಲದ್ದಕ್ಕೆ ಮನೆಯಲ್ಲೇ ಎಣ್ಣೆ ಪಾರ್ಟಿ ಮಾಡುತ್ತಿದ್ದ ಸೈಕೋ ಪತಿ ವಸೀಂ, ತನ್ನ ಗೆಳೆಯರನ್ನ ಮನೆಗೆ ಆಹ್ವಾನಿಸಿದ್ದಾನೆ. ಈ ವೇಳೆ ಪತ್ನಿಯ ಕೈಯಲ್ಲೇ ಡ್ರಿಂಕ್ಸ್ ಸಪ್ಲೈ ಮಾಡಿಸಿ ಸ್ನೇಹಿತರ ಜೊತೆ ಸೆಕ್ಸ್ ಮಾಡು ಎಂದು ಪೀಡಿಸುತ್ತಿದ್ದನಂತೆ. ನಾನು ನನ್ನ ಸ್ನೇಹಿತರ ಹೆಂಡತಿಯರ ಜತೆ ಸೆಕ್ಸ್ ಮಾಡುತ್ತೇನೆ. ಅದೇ ರೀತಿ ನೀನು ನನ್ನ ಸ್ನೇಹಿತರ ಜತೆ ಸೆಕ್ಸ್ ಮಾಡಬೇಕು ಎಂದು ಹಿಂಸೆ ಕೊಟ್ಟಿದ್ದ.
ಪತ್ನಿಗೆ ಎರಡು ಬಾರಿ ಅಬಾರ್ಷನ್ ಮಾಡಿಸಿರುವ ಆರೋಪಿ ವಸೀಂ, ಮೂರನೇ ಬಾರಿ ಹೆಣ್ಣು ಮಗು ಜನನವಾದಾಗ ಮಗುವಿಗೆ ನೀಲಿ ಕಣ್ಣಿದೆ ಎಂಬ ಕಾರಣಕ್ಕೆ ಪತ್ನಿಯನ್ನ ಮನೆಯಿಂದ ಹೊರಹಾಕಿ ವಿಕೃತಿ ಮೆರೆದಿದ್ದಾನೆ ಎಂದು ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.