ಮೊಬೈಲ್ ಟವರ್ ಕಂಬ ಏರಿ ಕುಳಿತ ಯುವಕ ಯಾಕೆ ಗೊತ್ತಾ ? | ಜನತಾ ನ್ಯೂಸ್

14 Jun 2021
372

ವಿಜಯನಗರ : ಹುಡುಗಿ ಫಿಕ್ಸ್ ಮಾಡಿದ ಮೇಲೆ ಮದುವೆ ಮತ್ತೆ ಯಾಕೆ ತಡ? ಬೇಗ ಮದುವೆ ಮಾಡಿಸಿ ಎಂದು ಯುವಕನೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಬೆದರಿಕೆ ಹಾಕಿ, ಮೊಬೈಲ್ ಟವರ್ ಏರಿ ಕುಳಿತಿತುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿಯಲ್ಲಿ ಸೋಮವಾರ ನಡೆದಿದೆ.

ಚಿರಂಜೀವಿ (23) ಟವರ್ ಏರಿ ಕುಳಿತ ಯುವಕ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಜೆಸ್ಕಾಂ ಕಚೇರಿಗೆ ಕರೆ ಮಾಡಿ ಟವರ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.

ಗೊತ್ತಾಗಿರುವ ಹುಡುಗಿಯ ಅಣ್ಣ ಮತ್ತು ಆತನ ಸ್ನೇಹಿತರು ಸೇರಿ ಟವರ್ ಮೇಲೆ ಏರಿ ಚಿರಂಜೀವಿ ಮನವೊಲಿಸಿದರು. ಪೊಲೀಸರು ಮಧ್ಯಪ್ರವೇಶಿಸಿ ನಾವು ಮುಂದೆ ನಿಂತು ಮದುವೆ ಮಾಡಿಸುತ್ತೇವೆ ಎಂದು ಮೈಕ್ ಮೂಲಕ ಘೋಷಣೆ ಮಾಡಿದ್ದಾರಂತೆ, ಟವರ್ ಮೇಲಿಂದ ಇಳಿದ ಮೇಲೆ ನನಗ್ಯಾರು ಹೊಡೆಯಬಾರದು ಎಂದು ಷರತ್ತು ಹಾಕಿದ ಚಿರಂಜೀವಿ ಕೊನೆಗೆ ಕೆಳಗಿಳಿದು ಬಂದಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಮರಿಯಮ್ಮನಹಳ್ಳಿ ಪೊಲೀಸರು ಕೊನೆಗೂ ಹರಸಾಹಸ ಮಾಡಿ, ಮನವೊಲಿಸಿ ಯುವಕನಮ್ನು ಟವರ್ ನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಮದುವೆಗೆಂದು ಹುಡುಗಿ ಫಿಕ್ಸ್ ಮಾಡಿ ಪೋಷಕರು ಮಾತುಕತೆ ಮಾಡಿ ಮುಗಿಸಿದ್ದಾರೆ. ಪೋಷಕರಿಗೆ ಇಬ್ಬರು ಗಂಡು ಮಕ್ಕಳು ಇರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುಗನ ಮದುವೆ ಆಗಲಿ ಎಂದು ಪೋಷಕರು ಚಿರಂಜೀವಿ ಮದುವೆ ಮಾಡುವುದನ್ನು ತಡ ಮಾಡಿದ್ದಾರೆ.

ಆದರೆ, ಪೋಷಕರ ಮಾತನ್ನು ಕೇಳದ ಚಿರಂಜೀವಿ, ನನಗೆ ಹುಡುಗಿ ಫಿಕ್ಸ್ ಮಾಡಿದ್ದೀರಿ. ಆದರೆ, ಮದುವೆ ಮಾಡುವುದನ್ನು ಏಕೆ ತಡ ಮಾಡುತ್ತಿದ್ದೀರಿ. ನನಗೆ ಮದುವೆ ಬೇಕು ಅಂತ ಈ ಹಿಂದೆಯೂ ಹಠ ಮಾಡಿದ್ದ ಎನ್ನಲಾಗಿದೆ.

RELATED TOPICS:
English summary :Vijaypura

ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ "ಕೆಳದಿ ಶಿವಪ್ಪ ನಾಯಕ" ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ:  9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#

ನ್ಯೂಸ್ MORE NEWS...