ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ, ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಜೂನ್.21ರ ಸೋಮವಾರದಿಂದ ಲಸಿಕಾ ಅಭಿಯಾನ ಆರಂಭವಾಗಲಿದೆ. ಜೂನ್ 21ರಂದು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿದೆ. ಅಂದು ಬಹಿರಂಗ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ, ಸೋಮವಾರದಂದು ಸಾಂಕೇತಿಕವಾಗಿ ಲಸಿಕಾ ಮೇಳ ನಡೆಸಲಾಗುವುದು. 18 ರಿಂದ 44 ರವರೆಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ ಎಂದರು.
ಈ ಮೂಲಕ ರಾಜ್ಯದಲ್ಲಿ 5 ರಿಂದ 7 ಲಕ್ಷ ಜನರಿಗೆ ಲಸಿಕೆ ಗುರಿಯನ್ನು ಹೊಂದಲಾಗಿರೋದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈಗಾಗಲೇ ಕೋವಿಶೀಲ್ಡ್ 14 ಲಕ್ಷ ಡೋಸ್ ದಾಸ್ತಾನು ಇದೆ. ಅಂದು ಒಂದೇ ದಿನ 5 ರಿಂದ 7 ಲಕ್ಷ ಲಸಿಕೆ ನೀಡಲು ಗುರಿ ಹೊಂದಿದ್ದೇವೆ ಎಂದರು. ಈವರೆಗೆ ರಾಜ್ಯದಲ್ಲಿ 1 ಕೋಟಿ 80 ಡೋಸ್ ಹಾಕಿದ್ದೇವೆ ಎಂದರು.
ಯಾರು ಎರಡು ಡೋಸ್ ಲಸಿಕೆ ಪಡೆದಿದ್ದಾರೋ ಅವರಿಗೆ ಶೇ. 99.9 % ಸೋಂಕು ಬಂದಿಲ್ಲ. ಸೋಂಕು ಬಂದವರು ಐಸಿಯುವರೆಗೆ ಹೋಗಿಲ್ಲ. ಎರಡು ಡೋಸ್ ಲಸಿಕೆ ಪಡೆದವರಿಗೆ ಯಾವುದೇ ಮ್ಯೂಟೆಂಟ್ ವೈರಸ್ ಸಹ ಬಾಧಿಸುವುದಿಲ್ಲ. ಹೀಗಾಗಿ, ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.