ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ತಂದೆ, ಯಾಕೆ ಗೊತ್ತಾ? | ಜನತಾ ನ್ಯೂಸ್
ತುಮಕೂರು : ಹೆರಿಗೆ ಬಳಿಕ ಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದ ಅಯ್ಯನಬಾವಿಯಲ್ಲಿ ಸಂಭವಿಸಿದೆ.
ನಾಗರಾಜ್ ಎಸ್.ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅರಸೀಕೆರೆ ತಾಲೂಕು ಚಿಂದೇನಹಳ್ಳಿ ಗಡಿ ಸಮೀಪದ ಸೋಮೇನಹಳ್ಳಿಯ ಬೇಬಿಕಲಾ ಎಂಬಾಕೆ ಜತೆ ನಾಗರಾಜುವಿನ ಮದುವೆ ಕಳೆದ ವರ್ಷ ಆಗಿತ್ತು. ಈ ದಂಪತಿಗೆ ಮೂರು ದಿನದ ಹಿಂದಷ್ಟೇ ಗಂಡು ಮಗು ಕೂಡ ಜನಿಸಿದೆ.
ಹೆರಿಗೆ ಬಳಿಕ ಬೇಬಿಕಲಾ ಪತಿಗೆ ತಿಳಿಸದೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಇದರಿಂದ ಕೋಪಗೊಂಡ ನಾಗರಾಜ್, ನನ್ನನ್ನೂ ಕೇಳದೆ ಪತ್ನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದಕ್ಕೆ, ಪತ್ನಿಯ ಸಂಬಂಧಿಕರೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪೊಲೀಸರಿಗೆ ದೂರು ನೀಡುವುದಾಗಿ ಸಂಬಂಧಿಕರು ಹೆದರಿಸಿದ್ದರು.
ಇದೇ ವಿಚಾರವಾಗಿ ನೊಂದಿದ್ದ ನಾಗರಾಜು ಸೋಮವಾರ ಬೆಳಗ್ಗೆ 7.30ರ ಸುಮಾರಿನಲ್ಲಿ ಅಯ್ಯನಬಾವಿ ಸಮೀಪ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.