ರಮೇಶ್ ಸಚಿವರಾಗೋದಕ್ಕೆ ಪ್ರಯತ್ನಪಟ್ಟರೆ ತಪ್ಪೇನು? ರಾಜಕಾರಣದಲ್ಲಿ ಯಾರು ಸನ್ಯಾಸಿಗಳಲ್ಲ!
ಶಿವಮೊಗ್ಗ : ಮಠಕ್ಕೆ ಯಾರು ಬೇಕಾದರೂ ಭೇಟಿ ನೀಡಿ ಆಶೀರ್ವಾದ ಪಡೆಯಬಹುದು. ಮಂತ್ರಿ ಆಗುವುದಕ್ಕೆ ಯಾರೂ ಮಠಕ್ಕೆ ಭೇಟಿ ನೀಡುವುದಿಲ್ಲ. ಸ್ವಾಮೀಜಿಗಳ ಆಶೀರ್ವಾದ ಪಡೆಯಲು ಹೋಗಿರುತ್ತಾರೆ ಎಂದು ರಮೇಶ್ ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಯತ್ನ ಪಡುತ್ತಿರಬಹುದು. ಆದರೆ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ, ಇಲ್ಲವೋ ಎಂಬುದು ಕೇಂದ್ರದ ನಾಯಕರು ಹಾಗೂ ಮುಖ್ಯಮಂತ್ರಿ ಅವರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ರಾಜಕಾರಣಕ್ಕೆ ಸುಮ್ಮನೆ ಯಾರು ಬರುವುದಿಲ್ಲ. ರಾಜಕಾರಣಕ್ಕೆ ಬರುವುದೇ ಸ್ಥಾನ ಮಾನ ಪಡೆಯಲು. ರಾಜಕೀಯದಲ್ಲಿ ಯಾರೂ ಕೂಡ ಸನ್ಯಾಸಿಯಲ್ಲ. ಹೀಗಾಗಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ಪ್ರಯತ್ನ ಪಟ್ಟರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಚಿವರಾಗೋದಕ್ಕೆ ಪ್ರಯತ್ನಪಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಪರೋಕ್ಷವಾಗಿ ರಮೇಶ್ ಸಚಿವ ಸ್ಥಾನ ಪ್ರಯತ್ನಕ್ಕೆ ಸಚಿವ ಕೆ ಎಸ್ ಈಶ್ವರಪ್ಪ ಪರೋಕ್ಷ ಬೆಂಬಲ ನೀಡಿದ್ದಾರೆ.