ನೀಲಿ ಚಿತ್ರ ತೋರಿಸಿ ಸಲಿಂಗ ಕಾಮದಾಟಕ್ಕೆ ವಿದ್ಯಾರ್ಥಿ ಬಳಸಿಕೊಂಡಿದ್ದ ಹೆಡ್ ಮಾಸ್ಟರ್ ಬಂಧನ | ಜನತಾ ನ್ಯೂಸ್

26 Jun 2021
575

ಬೆಂಗಳೂರು : ಬೆಂಗಳೂರಿನಲ್ಲಿ ಶಾಲೆಯ ಮುಖ್ಯೋಪಾಧ್ಯಾಯರೇ ತಮ್ಮ ವಿದ್ಯಾರ್ಥಿಯನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿತ್ತು. ನೀಲಿ ಚಿತ್ರ ತೋರಿಸಿ, ಬಟ್ಟೆ ಬಿಚ್ಚಿಸಿ ಮೈ - ಕೈ ನೇವೇರಿಸುವಂತೆ, ಸಲಿಂಗ ಕಾಮಕ್ಕೆ ವಿದ್ಯಾರ್ಥಿಯನ್ನ ಬಳಸಿಕೊಂಡಿದ್ದ ತಾಲೂಕಿನ ನರಸೀಪುರ ಗ್ರಾಮದ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯನನ್ನು ಬಂಧಿಸಲಾಗಿದೆ.

ಬೆಂಗಳೂರಿನ ನೆಲಮಂಗಲದಲ್ಲಿರುವ ಧರಿತ್ರಿ ಎಂಬ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯ ಈ ರೀತಿಯ ನೀಚ ಕೃತ್ಯ ಎಸಗಿದ್ದಾರೆ.

ದಿನಾಂಕ 06/05/2021 ಮತ್ತು 07/05/2021 ರಂದು ಮುಖ್ಯೋಪಾಧ್ಯಾಯ ಎಸ್. ರಂಗನಾಥ ವಸತಿ ಶಾಲೆಯ 21 ವರ್ಷದ ವಿದ್ಯಾರ್ಥಿಯನ್ನ ತಮ್ಮ ಮನೆಯಲ್ಲಿ ಹೆಂಡತಿ ಇರದ ಸಮಯದಲ್ಲಿ ಮನೆಗೆ ವಿಧ್ಯಾರ್ಥಿಯನ್ನ ಕರೆದೊಯ್ದು ನಂತರ ಯುವಕನಿಗೆ ನೀಲಿ ಚಿತ್ರ ತೋರಿಸಿ, ಬಟ್ಟೆ ಬಿಚ್ಚಿಸಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೆಲಮಂಗಲ ತಾಲೂಕಿನ ನರಸೀಪುರದ ಧರಿತ್ರಿ ವಿಶೇಷ ಮಕ್ಕಳ ವಸತಿ ಶಾಲೆಯ ಮುಖ್ಯೋಪಾಧ್ಯಾಯ ರಂಗನಾಥ್ ತನ್ನ ವಿದ್ಯಾರ್ಥಿಗೆ ಬ್ಲೂ ಫಿಲ್ಮ್ ತೋರಿಸಿ, ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಲಿಂಗ ಕಾಮಕ್ಕೆ ತುತ್ತಾಗಿದ್ದ ವಿದ್ಯಾರ್ಥಿ ಊರಿಗೆ ಬಂದಾಗ ಈ ವಿಷಯವನ್ನು ತನ್ನ ತಾಯಿಗೆ ತಿಳಿಸಿದ್ದಾನೆ. ಆತನ ತಾಯಿ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರು.

ಈ ಘಟನೆ ಬಗ್ಗೆ ಶಾಲೆಯ ವ್ಯವಸ್ಥಾಪಕರಿಗೆ ಮಾಹಿತಿ ತಿಳಿಸಿದ್ದ ಸಂತ್ರಸ್ತ ವಿಧ್ಯಾರ್ಥಿ ಬಳಿಕ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೇರಿ ಮಾರ್ಗದರ್ಶನದಲ್ಲಿ ಕೌನ್ಸಿಲಿಂಗ್ ಕೂಡ ಪಡೆದಿದ್ದರು. ಸಂತ್ರಸ್ತ ವಿದ್ಯಾರ್ಥಿ ಹಾಗೂ ಮುಖ್ಯೋಪಾಧ್ಯಾಯರ ಕೌನ್ಸಿಲಿಂಗ್ ನಡೆಸಲಾಗಿತ್ತು. ಕೌನ್ಸಿಲಿಂಗ್ ವೇಳೆ ತಾನು ಸಲಿಂಗ ಕಾಮಕ್ಕೆ ವಿದ್ಯಾರ್ಥಿಯನ್ನು ಬಳಸಿಕೊಂಡ ಬಗ್ಗೆ ಮುಖ್ಯೋಪಾಧ್ಯಾಯ ರಂಗನಾಥ್ ಒಪ್ಪಿಕೊಂಡಿದ್ದರು.

ಜೂನ್ 11ರಂದು ಈ ಕೃತ್ಯದ ಬಗ್ಗೆ ಮಾನಸಿಕ ತಜ್ಞರು ವರದಿ ನೀಡಿದ್ದರು. ಆ ವರದಿ ಆಧರಿಸಿ ಡಾಬಸ್ಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು. ಧರಿತ್ರಿ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಬೆಟ್ಟಗೆರಿಯವರಿಂದ ಮುಖ್ಯೋಪಾಧ್ಯಾಯ ರಂಗನಾಥ್ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

RELATED TOPICS:
English summary :Bangalore

ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
2022ರ ಮಾರ್ಚ್​ನಲ್ಲಿ
2022ರ ಮಾರ್ಚ್​ನಲ್ಲಿ "ಗಡ್ಡಧಾರಿ ವ್ಯಕ್ತಿ" ರಾಜ್ಯದ ಸಿಎಂ ಆಗ್ತಾರೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್

ನ್ಯೂಸ್ MORE NEWS...