ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟ್ರ್ಯಾಕ್ ಲೋಕಾರ್ಪಣೆ : ವಾಹನಗಳ ಹೈಸ್ಪೀಡ್ ಕಾರ್ಯಕ್ಷಮತೆ ಪರೀಕ್ಷೆ ಈಗ ಭಾರತದಲ್ಲೇ ಸಾಧ್ಯ | ಜನತಾ ನ್ಯೂಸ್

30 Jun 2021
487

ಇಂದೋರ್ : ನ್ಯಾಟ್ರಾಕ್ಸ್- ಹೈ ಸ್ಪೀಡ್ ಟ್ರ್ಯಾಕ್(ಎಚ್‌ಎಸ್‌ಟಿ), ಏಷ್ಯಾದ ಅತಿ ಉದ್ದದ ಹೈಸ್ಪೀಡ್ ಟ್ರ್ಯಾಕ್ ಅನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂದು ಬುಧವಾರ ಉದ್ಘಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತದ ಅಡಿಯಲ್ಲಿ ಈ ಟ್ರ್ಯಾಕ್ ನಿರ್ಮಿಸಲಾಗಿದ್ದು, ಈಗ ಭಾರತದ ವಾಹನಗಳನ್ನು ಭಾರತದಲ್ಲಿಯೇ ಪರೀಕ್ಷಿಸಬಹುದಾದ ಕಾರಣದಿಂದ, ವಾಹನಗಳನ್ನು ವಿದೇಶಕ್ಕೆ ಕಳುಹಿಸುವ ಅಗತ್ಯವಿರುವುದಿಲ್ಲ. ಈ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಾಹನ ತಯಾರಕರು ಸಹ ತಮ್ಮ ವಾಹನಗಳನ್ನು ಈ ಬೃಹತ್ ಟ್ರ್ಯಾಕ್‌ನಲ್ಲಿ ಪರೀಕ್ಷಿಸಲು ಸಾಧ್ಯವಾಗಲಿದೆ.

ಬೃಹತ್ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾವಡೇಕರ್ ಅವರು ಇಂದೋರ್‌ನಲ್ಲಿ ನ್ಯಾಟ್ರಾಕ್ಸ್- ಹೈ ಸ್ಪೀಡ್ ಟ್ರ್ಯಾಕ್(ಎಚ್‌ಎಸ್‌ಟಿ)ಯನ್ನು ಉದ್ಘಾಟಿಸಿದರು, ಇದು ಏಷ್ಯಾದ ಅತಿ ಉದ್ದದ ಟ್ರ್ಯಾಕ್ ಆಗಿದೆ. 1000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿದ ನ್ಯಾಟ್ರಾಕ್ಸ್, ದ್ವಿಚಕ್ರ ವಾಹನಗಳಿಂದ ಹಿಡಿದು ಹೆವಿ ಟ್ರಾಕ್ಟರ್ ಟ್ರೇಲರ್‌ಗಳವರೆಗಿನ ವ್ಯಾಪಕ ವರ್ಗದ ವಾಹನಗಳಿಗೆ ಎಲ್ಲಾ ರೀತಿಯ ಹೈಸ್ಪೀಡ್ ಕಾರ್ಯಕ್ಷಮತೆ ಪರೀಕ್ಷೆಗಳಿಗೆ ಒಂದು ಸಂಪೂರ್ಣ ಪರಿಹಾರವಾಗಿದೆ.

ವಿಶ್ವ ದರ್ಜೆಯ 11.3 ಕಿ.ಮೀ ಹೈ ಸ್ಪೀಡ್ ಟ್ರ್ಯಾಕ್‌ನ ಇ-ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ಜಾವಡೇಕರ್ ಅವರು, ಭಾರತವು ವಾಹನಗಳು, ಉತ್ಪಾದನೆ ಮತ್ತು ಬಿಡಿಭಾಗಗಳ ಕೇಂದ್ರವಾಗಲು ಉದ್ದೇಶಿಸಲಾಗಿದೆ, ಎಂದು ಹೇಳಿದರು. ಸಚಿವರು ಮಾತನಾಡಿ, ನಾವು ವೇಗವಾಗಿ "ಆತ್ಮನಿರ್ಭರ ಭಾರತ" ಕಡೆಗೆ ಸಾಗುತ್ತಿದ್ದೇವೆ ಮತ್ತು ಈ ದಿಕ್ಕಿನಲ್ಲಿ ಎಲ್ಲ ಸುತ್ತಿನ ಪ್ರಯತ್ನಗಳು ನಡೆಯುತ್ತಿವೆ. ಭಾರತವು ವಾಹನ ತಯಾರಿಕೆಯ ಕೇಂದ್ರವಾಗುವುದನ್ನು ಖಾತ್ರಿಪಡಿಸಿಕೊಳ್ಳುವ ಪ್ರಧಾನ ಮಂತ್ರಿಯ ಕನಸನ್ನು ಈಡೇರಿಸಲು ಅವರ ಸಚಿವಾಲಯ ಬದ್ಧವಾಗಿದೆ, ಎಂದು ಅವರು ಹೇಳಿದರು. ವಾಹನಗಳು ಮತ್ತು ಉತ್ಪಾದನಾ ಕೈಗಾರಿಕೆಗಳನ್ನು ವಿಸ್ತರಿಸುವುದರಿಂದ ಉದ್ಯೋಗ ಸೃಷ್ಟಿಸಲು ಸಹಾಯವಾಗುತ್ತದೆ, ಎಂದರು.

ದಶಕಗಳಿಂದ ನೆನೆಗುದಿಗೆ ಬಿದ್ದ ರೈಲ್ವೆ, ಹೆದ್ದಾರಿಗಳು ಮತ್ತು ಜಲಮಾರ್ಗಗಳಲ್ಲಿನ ಯೋಜನೆಗಳು ಇಂದು ಬಲವಾದ ರಾಜಕೀಯ ಇಚ್ಚಾಶಕ್ತಿಯಿಂದಾಗಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುತ್ತಿವೆ, ಎಂದು ಸಚಿವರು ಹೇಳಿದರು.

RELATED TOPICS:
English summary :Asian longest high speed track inaugurated : Vehicles high speed performance test now possible in India

ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : 49 ವರ್ಷಗಳ ನಂತರ ಪುರುಷರ ಹಾಕಿ ಸೆಮಿಫೈನಲ್ ತಲುಪಿದ ಭಾರತೀಯ ತಂಡ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ಒಲಂಪಿಕ್ಸ್ : ಕಂಚು ಗೆದ್ದ ಪಿ.ವಿ.ಸಿಂಧು, 2 ಪದಕ ಗೆದ್ದ ಪ್ರಥಮ ಭಾರತೀಯ ಮಹಿಳೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ವಿಹಾರಕ್ಕೆ ಬಂದಿದ್ದ ಸ್ನೇಹಿತರ ತಂಡ, ಯುವತಿಯೋರ್ವಳು ನೀರುಪಾಲು, ಮೂವರ ರಕ್ಷಣೆ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ರಾಜಕೀಯ ಮುಖ್ಯವಲ್ಲ, ಜನರ ಹಿತವೇ ನನಗೆ ಮುಖ್ಯ: ಎಂ.ಪಿ.ರೇಣುಕಾಚಾರ್ಯ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ಪ್ರವಾಹ: ರಾಜ್ಯ ಸರ್ಕಾರದಿಂದ 510 ಕೋಟಿ ರೂ. ಬಿಡುಗಡೆ, ಸಿಎಂ ಬೊಮ್ಮಾಯಿ ಘೋ‍ಷಣೆ | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ವಿದ್ಯಾರ್ಥಿನಿಯರಿಗೆ ಪ್ರಾಧ್ಯಾಪಕನಿಂದ ಲೈಂಗಿಕ ಕಿರುಕುಳ ಆರೋಪ! | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
ಮುಖ್ಯಮಂತ್ರಿ ಆಗಬೇಕೆಂದು ಗಡ್ಡಬಿಟ್ಟಿದ್ದಲ್ಲ: ಸಿ.ಟಿ.ರವಿ | ಜನತಾ ನ್ಯೂ&#
2022ರ ಮಾರ್ಚ್​ನಲ್ಲಿ
2022ರ ಮಾರ್ಚ್​ನಲ್ಲಿ "ಗಡ್ಡಧಾರಿ ವ್ಯಕ್ತಿ" ರಾಜ್ಯದ ಸಿಎಂ ಆಗ್ತಾರೆ: ಕುತೂಹಲ ಮೂಡಿಸಿದ ಭವಿಷ್ಯವಾಣಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಕಷ್ಟಕಾಲ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್​​ಡಿಡಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಬೊಮ್ಮಾಯಿಗೆ ಹೈಕಮಾಂಡ್ ದಿಢೀರ್ ಬುಲಾವ್: ಮತ್ತೆ ದೆಹಲಿಗೆ ತೆರಳಿದ ಸಿಎಂ ಬೊಮ್ಮಾಯಿ | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್-19 ನಿಂದ ರಾಜ್ಯಾದ್ಯಂತ 37 ಸಾವು, 1,987 ಹೊಸ ಪ್ರಕರಣ : ಬೆಂಗಳೂರಿನಲ್ಲಿ 450 | ಜನತಾ ನ್ಯೂ&#
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್
ಕೋವಿಡ್ 3ನೇ ಅಲೆ: ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ! | ಜನತಾ ನ್

ನ್ಯೂಸ್ MORE NEWS...