Fri,Apr26,2024
ಕನ್ನಡ / English

ಒಂದು ಕೋಟಿ ರೂಪಾಯಿ ಬೆಲೆಬಾಳುವ ಮಾದಕ ದ್ರವ್ಯ ಸಾಗಣೆ ಮಾಡುತ್ತಿದ್ದ MBBS ವಿದ್ಯಾರ್ಥಿನಿ ಸಹಿತ ಇಬ್ಬರ ಬಂಧನ | ಜನತಾ ನ್ಯೂಸ್

30 Jun 2021
2263

ಮಂಗಳೂರು : ಒಂದು ಕೋಟಿ ರೂಪಾಯಿ ಮೌಲ್ಯದ ಹೈಡ್ರೋವೀಡ್ ಗಾಂಜಾ ಸಾಗಿಸುತ್ತಿದ್ದ ಮಹಿಳಾ ವೈದ್ಯೆಯನ್ನು ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕಾಂಞಗಾಡ್‌ನ ಹರಿಮಲ ಆಸ್ಪತ್ರೆ ವೈದ್ಯೆ ಮಿನು ರಶ್ಮಿ ಬಂಧಿತ ಮಹಿಳೆ. ಮೂಲತಃ ಸುರತ್ಕಲ್​ನಲ್ಲಿ ವಾಸವಾಗಿರುವ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಮಿನು ರಶ್ಮಿ ಹಾಗೂ ಕಾಸರಗೋಡು ಜಿಲ್ಲೆಯ ಉಪ್ಪಳದ ಅಜ್ಮಲ್ ಟಿ. ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳು ಗಾಂಜಾವನ್ನು ತರಿಸಿಕೊಂಡು ಕೊಣಾಜೆ, ಉಳ್ಳಾಲ, ಉಪ್ಪಳ ಹಾಗೂ ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ಪ್ರಕರಣದ ಪ್ರಮುಖ ಆರೋಪಿ ನದೀರ್ ಎಂಬುವವನು ಕಾಸರಗೋಡು ಮೂಲದವನಾಗಿದ್ದು, ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇನ್ನು ಆರೋಪಿ ರಶ್ಮಿಯು ವೈದ್ಯೆಯಾಗಿದ್ದು, ನದೀರ್ ಮತ್ತು ಅಜ್ಮಲ್ ಅವರಿಗೆ ಸ್ನೇಹಿತೆಯಾಗಿದ್ದಾಳೆ. ಅಲ್ಲದೆ ನದೀರ್ ಸ್ನೇಹಿತನಿಗೆ ಗಾಂಜಾವನ್ನು ನೀಡಲು ದೇರಳ ಕಟ್ಟೆಗೆ ಬಂದಾಗ ಈಕೆಯನ್ನು ಪೊಲೀಸರು ಬಂಧಿಸಿದ್ದಾರೆ.

janata

1 ಕೆಜಿ 236 ಗ್ರಾಂ ತೂಕದ ಹೈಡ್ರೋವೀಡ್ ಗಾಂಜಾ ಇದಾಗಿದ್ದು, ಇದರ ಮೌಲ್ಯ ಸುಮಾರು 30 ಲಕ್ಷದಿಂದ 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿಸಿಬಿ ಪೊಲೀಸರು ಬಂಧಿತ ಆರೋಪಿಗಳ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳಿಂದ 1 ಕೋಟಿ ರೂ.ವರೆಗೆ ಹೈಡ್ರೋ ವೀಡ್ ಸಹಿತ ಒಂದು‌ ಕಾರು, ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಗಾಂಜಾದ ಗಿಡವನ್ನು ಬಹಳ ಪ್ರತಿಕೂಲ ಹವಾಮಾನದಲ್ಲಿ ಒಣಗಿಸಿ ಹೈಡ್ರೋ ವೀಡ್ ಅನ್ನು ತಯಾರಿಸಲಾಗುತ್ತದೆ‌‌. ಇದನ್ನು ಹೊರದೇಶಗಳಲ್ಲಿ ಸಿದ್ಧಪಡಿಸಿ ಭಾರತ ಮತ್ತಿತರ ದೇಶಗಳಿಗೆ ರವಾನೆ ಮಾಡಲಾಗುತ್ತದೆ. ಇದು ಯುರೋಪ್ ದೇಶದಿಂದ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಮಂಗಳೂರಿನ ಇಕಾನಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದ ಹಿಂದೆ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

RELATED TOPICS:
English summary :drug peddling in Mangalore

40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ,  ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
40 ಕೋಟಿ ಜನರ ಬಡತನ ನಿರ್ಮೂಲನೆ, ಅಧಿಕಾರಶಾಹಿ ವ್ಯವಸ್ಥೆ ಮುಗಿಸಲು ಕಠಿಣ ಆಡಳಿತ, ಮೋದಿ ನಂಬಲಾಗದ ಕೆಲಸ ಮಾಡಿದ್ದಾರೆ - ಜೆಪಿ ಮೋರ್ಗಾನ್ ಸಿಇಒ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಪಕ್ಷದ ಚುನಾವಣಾ ಪ್ರಣಾಳಿಕೆ ಪತ್ರ ವನ್ನು ಖುದ್ದಾಗಿ ವಿವರಿಸಲು ಪ್ರಧಾನಿ ಮೋದಿ ಸಮಯ ಕೇಳಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಇಡೀ ಮುಸ್ಲಿಂ ಸಮುದಾಯವನ್ನು ಒಬಿಸಿ 2ಬಿ ಗೆ ಸೇರಿಸುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಭಾರಿ ಟೀಕೆ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಕಾಂಗ್ರೆಸ್ ಸರ್ಕಾರ ಬಂದರೆ ತಾಯಂದಿರ ಚಿನ್ನ, ಮಂಗಳಸೂತ್ರ, ಆಸ್ತಿಗಳನ್ನು ಕಿತ್ತು ಮುಸ್ಲಿಮರಿಗೆ ಹಂಚುತ್ತಾರೆ - ಪ್ರಧಾನಿ ಮೋದಿ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ಚುನಾವಣಾ ಆಯೋಗ ನನ್ನ ಹೆಲಿಕಾಪ್ಟರ್ ಅನ್ನು ಸಹ ಹುಡುಕಬಹುದು - ಅಮಿತ್ ಶಾ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ನನ್ನ ಮಗಳ ಹತ್ಯೆ ವಿಷಯದಲ್ಲಿ ಸರ್ಕಾರ ದಾರಿ ತಪ್ಪಿಸುತ್ತಿದೆ: ನೇಹಾ ತಂದೆ ನಿರಂಜನ್ ಹಿರೇಮಠ ಆರೋಪ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ರಾಜ್ಯಾದ್ಯಂತ ಮುಂದಿನ ಮೂರು ದಿನ ಮಳೆ, ಬೆಂಗಳೂರಿನ ಹಲವೆಡೆ ಗುಡುಗು ಸಹಿತ ತುಂತುರು ಮಳೆ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಬಿಜೆಪಿ ಕೇಂದ್ರ ಸಚಿವರ ಬಳಿ ಗೋಗರೆದು ಬೇಡಿಕೊಂಡ ಕಾಂಗ್ರೆಸ್ ಪಾಲಿಕೆಸದಸ್ಯ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ವೈದ್ಯಕೀಯ ಜಾಮೀನು ಪಡೆಯಲು ಹೆಚ್ಚು ಸಕ್ಕರೆಯ ಆಹಾರವನ್ನು ಸೇವಿಸುತ್ತಿದ್ದಾರೆ ಅರವಿಂದ್ ಕೇಜ್ರಿವಾಲ್ - ಇಡಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸೂರ್ಯ ತಿಲಕ್ : ವಿಶೇಷತೆಗಳೇನು? ಹೆಚ್ಚಿನ ಮಾಹಿತಿ
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಭಾರತದಲ್ಲಿ ಗೋಮಾಂಸ ರಫ್ತು ಸಂಪೂರ್ಣ ನಿಷೇಧಿಸಲಾಗಿದೆ - ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ
ಜೆಡಿಎಸ್ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ ಮತ್ತು ಕೇವಲ 3 ಸ್ಥಾನಗಳಲ್ಲಿ ಅಲ್ಲ - ಹೆಚ್‌ಡಿ.ದೇವೇಗೌಡ

ನ್ಯೂಸ್ MORE NEWS...