ವಿದ್ಯುತ್ ಪೂರೈಕೆ ಘಟಕದಲ್ಲಿ ಭಾರೀ ಅಗ್ನಿ ಅವಘಡ: ಟ್ರಾನ್ಸ್ಫಾರ್ಮರ್, ಎಲೆಕ್ಟ್ರಾನಿಕ್ ಉಪಕರಣ ಸುಟ್ಟುಭಸ್ಮ | ಜನತಾ ನ್ಯೂಸ್
ಕೋಲಾರ : ಕೋಲಾರ ಬೈಪಾಸ್ ಬಳಿ ಇರುವ ಬೆಸ್ಕಾಂ ವಿದ್ಯುತ್ ಪೂರೈಕೆ ಘಟಕಗಳಲ್ಲಿ ಬಾರಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಟ್ರಾನ್ಸ್ಫಾರ್ಮರ್, ಎಲೆಕ್ಟ್ರಾನಿಕ್ ಉಪಕರಣ ಸುಟ್ಟುಭಸ್ಮವಾಗಿವೆ.
ಆಕಸ್ಮಿಕವಾಗಿ ಬೆಂಕಿ ಸಂಭವಿಸಿ ದಗದಗನೆ ಹೊತ್ತಿ ಉರಿದಿದ್ದು, ಆಕಾಶದೆತ್ತರಕ್ಕೆ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಟ್ರಾನ್ಸ್ಫಾರ್ಮರ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗಾಹುತಿಯಾಗಿವೆ.
ಮಹಾಲಕ್ಷ್ಮೀ ಬಡಾವಣೆ ಬಳಿಯಿರುವ ಈ ಸಬ್ ಸ್ಟೇಷನ್ನಲ್ಲಿರುವ ಬೆಂಕಿ ಹೊತ್ತಿ ಉರಿಯುತ್ತಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳಗಳು ಧಾಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
RELATED TOPICS:
English summary :Kolar