ನಾಯಕತ್ವ ಬದಲಾವಣೆ ಹಾದಿ ಬೀದಿಯ ಚರ್ಚೆ ವಿಷಯವಲ್ಲ: ನಳಿನ್ ಕುಮಾರ್ ಕಟೀಲ್ | ಜನತಾ ನ್ಯೂಸ್

05 Jul 2021
411

ಹಾವೇರಿ: : ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ. ಶಾಸಕಾಂಗ ಸಭೆಗಳನ್ನ ಕರೆಯುತ್ತದೆ. ಅಲ್ಲಿ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗೋದಿಲ್ಲ ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದರು.

ಹಿರೇಕೇರೂರಿನಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್ ಹಡಗಿಗೆ ತೂತು ಬಿದ್ದಿದೆ. ಯಾವಾಗ ಮುಳುಗುತ್ತೋ ಗೊತ್ತಿಲ್ಲ. ಯಾರಾದರೂ ಬಂದು ರಕ್ಷಿಸಲಿ ಎಂದು ಡಿ ಕೆ ಶಿವಕುಮಾರ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಮುಳುಗುವ ಹಡಗನ್ನು ಹತ್ತುವ ಜನ ಇಲ್ಲ. ಹೀಗಾಗಿ ಯಾವ ಪಕ್ಷದವರಾದರೂ ನಮ್ಮ ಹಡಗು ಹತ್ತಲಿ ಎಂದು ಬಾಂಬೆ ಟೀಂ ಶಾಸಕರಿಗೆ ಡಿ.ಕೆ ಶಿವಕುಮಾರ್ ಮತ್ತ ಕಾಂಗ್ರೆಸ್ ಪಕ್ಷ ಸೇರಿ ಎಂಬ ಆಫರ್ ನೀಡಿದೆ ಎಂದರು.

ಯತ್ನಾಳ ಅವರ ಆಗಸ್ಟ್​ನಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಹೇಳಿಕೆಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆಯ ಕುರಿತಂತೆ ಯಾವುದೇ ಗೊಂದಲಗಳು ಬೇಡ, ನಾಯಕತ್ವ ಬದಲಾವಣೆ ಅಥವಾ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಸಿಎಂ ನಿವಾಸದ ಹಿಂದೆ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಯುತ್ತದೆ ಎಂಬ ಯತ್ನಾಳ್ ಅವರ ಆರೋಪಕ್ಕೆ ಪ್ರತಿಯಾಗಿ, ಯತ್ನಾಳ್ ಅವರ ಹೇಳಿಕೆಗಳಿಗೆ ನಾನು ಹೆಚ್ಚು ಗೌರವಗಳನ್ನು ಕೊಡುವುದಿಲ್ಲ ಎಂದು ಕಟೀಲ್ ಹೇಳಿದರು.

ಯೋಗೇಶ್ವರ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅವರು ಯಾವ ರೀತಿಯಾದ ಭಾವನೆಯಲ್ಲಿ ಮಾತನಾಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಅದರ ವಿವರಣೆಯನ್ನು ಕೇಳುತ್ತೇನೆ. ಮಾಧ್ಯಮಗಳ ಮುಂದೆ ನಮ್ಮ ಸರ್ಕಾರ, ನಮ್ಮ ಮಂತ್ರಿಗಳು ಹಾಗೂ ಶಾಸಕರು ಮಾತನಾಡಬಾರದು. ಜನರ ಪ್ರಾಣ ರಕ್ಷಣೆಯ ಕೆಲಸ ಮಾಡಲು ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಯೋಗೇಶ್ವರ್‌ ಏನು ಹೇಳಿದ್ದಾರೆ ಎನ್ನುವ ವಿವರಣೆ ಪಡೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

"ಬಿಜೆಪಿಯಲ್ಲಿ ಸದ್ಯ ನಾಯಕತ್ವ ಬದಲಾವಣೆ ಹಾಗೂ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಇಲ್ಲ. ಹಾದಿ-ಬೀದಿಯಲ್ಲಿ ನಾಯಕತ್ವದ ಚರ್ಚೆ ಮಾಡುವಂತದಲ್ಲ.ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗುವುದಿಲ್ಲ. ಇದಕ್ಕಾಗಿ ಶಾಸಕಾಂಗ ಸಭೆ ಕರೆಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ-ಕಾರ್ಯಗಳಿಗೆ ಜನರು ಆಶೀರ್ವದಿಸಿದ್ದಾರೆ.ಇವರ ದುರಹಂಕಾರದ ಕಾರಣದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ಯೋಗ್ಯತೆಯನ್ನೂ ಕೊಟ್ಟಿಲ್ಲ. ಈ ಬಗ್ಗೆ ಅರಿತು ಮಾತನಾಡಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED TOPICS:
English summary :Nalin Kumar Kateel

ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಅಫ್ಘಾನಿಸ್ತಾನ ಜನರ ಲಾಭಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ - ನವದೆಹಲಿಯಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಹೇಳಿಕೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಬೆಂಗಳೂರಲ್ಲಿ ಹಾಡಹಗಲೇ ತಲೆ ಮೇಲೆ ಕಲ್ಲು ಹಾಕಿ ರೌಡಿಶೀಟರ್ ಭೀಕರ ಕೊಲೆ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ಎಸ್.ಆರ್. ಬೊಮ್ಮಾಯಿ ಗುಣ ಮಗನಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ: ಸಿದ್ದರಾಮಯ್ಯ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
₹15 ಲಕ್ಷ ಲಂಚ ಪಡೆಯುತ್ತಿದ್ದಾಗ ಬೀದರ್ ತಹಶೀಲ್ದಾರ್ ಗಂಗಾದೇವಿ ಎಸಿಬಿ ಬಲೆಗೆ | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಪ್ರಿಯಕರನೊಂದಿಗೆ ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ನೇಣಿಗೆ ಶರಣು! | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ಕಳೆದೆರಡು ವರ್ಷದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ. ಶಿವಕುಮಾರ್ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ರೈತ ಮಕ್ಕಳಿಗೆ ವಿಶೇಷ ಶಿಷ್ಯವೇತನ, ನೂತನ ಸಿಎಂ ಬೊಮ್ಮಾಯಿ ಘೋಷಣೆ | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಕರ್ನಾಟಕ ನೂತನ ಸಿಎಂ ಬಸವರಾಜ ಬೊಮ್ಮಾಯಿಗೆ ಶುಭಹಾರೈಸಿದ ಪ್ರಧಾನಿ ನರೇಂದ್ರ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ಯಡಿಯೂರಪ್ಪನವರ ಕೆಲಸ, ಕೊಡುಗೆ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದ ಪ್ರಧಾನಿ ಮೋದಿ! | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೊಮ್ಮಾಯಿ | ಜನತಾ ನ್ಯೂ&#

ನ್ಯೂಸ್ MORE NEWS...