ದೇಶದ ಕೋವಿನ್ ಫ್ಲಾಟ್-ಫಾರಂ 50 ದೇಶಕ್ಕೆ ಉಚಿತ : ಕೋವಿಡ್-19 ಜಾಗತಿಕ ಹೋರಾಟಕ್ಕೆ ಭಾರತ ಬದ್ಧ - ಪ್ರಧಾನಿ ಮೋದಿ | ಜನತಾ ನ್ಯೂಸ್

05 Jul 2021
526

ನವದೆಹಲಿ : ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಲಸಿಕಾಕರಣ ಮಾನವೀಯತೆಯ ಅತ್ಯುತ್ತಮ ಭರವಸೆ, ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. ವರ್ಚುವಲ್ ಕೋವಿನ್ ಗ್ಲೋಬಲ್ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಲಸಿಕಾಕರಣ ಕಾರ್ಯಕ್ರಮದಲ್ಲಿ ಭಾರತದ ಡಿಜಿಟಲ್ ವಿಧಾನವನ್ನು ಶ್ಲಾಘಿಸಿದರು ಮತ್ತು ನಾಗರಿಕರ ವ್ಯಾಕ್ಸಿನೇಷನ್ ಸ್ಥಿತಿಯನ್ನು ಪತ್ತೆಹಚ್ಚಲು ಅದರ ಮಹತ್ವವನ್ನು ಒತ್ತಿಹೇಳಿದ್ದಾರೆ.

ಭಾರತದಲ್ಲಿ ಯಶಸ್ವಿಯಾಗಿ ಲಸಿಕಾಕರಣಕ್ಕೆ ಬಳಸಲಾಗುತ್ತಿರುವ ಕೋವಿನ್ ಫ್ಲಾಟ್-ಫಾರಂ ಅನ್ನು ಡಿಜಿಟಲ್ ಸಾರ್ವಜನಿಕ ಹಿತದೃಷ್ಟಿಯಿಂದ ಇತರ ದೇಶಗಳಿಗೆ ತಮ್ಮದೇ ಆದ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ಚಲಾಯಿಸಲು, ಭಾರತವು ಉಚಿತವಾಗಿ ನೀಡಲಿದ್ದು, ಈ ಸಂದರ್ಭದಲ್ಲಿ ಕೋವಿನ್ ಗ್ಲೋಬಲ್ ಕಾನ್ಕ್ಲೇವ್‌ನಲ್ಲಿ ತಮ್ಮ ಆಲೋಚನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

ಕೆನಡಾ, ಮೆಕ್ಸಿಕೊ, ನೈಜೀರಿಯಾ, ಪನಾಮ ಮತ್ತು ಉಗಾಂಡಾ ಸೇರಿದಂತೆ ಸುಮಾರು 50 ದೇಶಗಳು ತಮ್ಮ ವ್ಯಾಕ್ಸಿನೇಷನ್ ಡ್ರೈವ್‌ಗಳನ್ನು ನಡೆಸಲು ಕೋವಿನ್ ಎಂಬ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ, ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ(ಎನ್‌ಎಚ್‌ಎ) ಸಿಇಒ ಡಾ.ಆರ್.ಎಸ್. ಶರ್ಮಾ ಇತ್ತೀಚೆಗೆ ಹೇಳಿದ್ದಾರೆ , ಓಪನ್ ಸೋರ್ಸ್ ಸಾಫ್ಟ್‌ವೇರ್ ಅನ್ನು ಉಚಿತವಾಗಿ ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ, ಎಂದು ತಿಳಿಸಿದ್ದಾರೆ. ವೇದಿಕೆಯ ಮುಕ್ತ ಮೂಲ ಆವೃತ್ತಿಯನ್ನು ರಚಿಸಲು ಮತ್ತು ಅದನ್ನು ಉಚಿತವಾಗಿ ಬಯಸುವ ಯಾವುದೇ ದೇಶಕ್ಕೆ ನೀಡುವಂತೆ ಪ್ರಧಾನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಶರ್ಮಾ ಅವರು ಹೇಳಿದ್ದಾರೆ.

"ವ್ಯಾಕ್ಸಿನೇಷನ್ ಮಾನವೀಯತೆಯು ಸಾಂಕ್ರಾಮಿಕ ರೋಗದಿಂದ ಯಶಸ್ವಿಯಾಗಿ ಹೊರಹೊಮ್ಮುವ ಅತ್ಯುತ್ತಮ ಆಶಯವಾಗಿದೆ. ಮತ್ತು ಮೊದಲಿನಿಂದಲೂ, ಭಾರತದಲ್ಲಿ ನಾವು ನಮ್ಮ ವ್ಯಾಕ್ಸಿನೇಷನ್ ತಂತ್ರವನ್ನು ಯೋಜಿಸುವಾಗ ಸಂಪೂರ್ಣವಾಗಿ ಡಿಜಿಟಲ್ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ" ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತೀಯ ನಾಗರಿಕತೆಯು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತದೆ ಮತ್ತು ಈ ತತ್ತ್ವಶಾಸ್ತ್ರದ ಮೂಲಭೂತ ಸತ್ಯವನ್ನು ಅನೇಕ ಜನರಿಗೆ ಅರಿತುಕೊಳ್ಳುವ ಹಾಗೆ ಸಾಂಕ್ರಾಮಿಕ ರೋಗವು ಮಾಡಿದೆ, ಎಂದು ಪ್ರಧಾನಿ ಮೋದಿ ಹೇಳಿದರು. ಈ
ಭಾರತೀಯ ತತ್ತ್ವಶಾಸ್ತ್ರದ ಆಧಾರದ ಮೇಲೆ, ಕೋವಿಡ್-19 ಲಸಿಕೆಗಾಗಿ ರಚಿಸಲಾದ ಭಾರತದ ತಂತ್ರಜ್ಞಾನ ವೇದಿಕೆಯನ್ನು ಮುಕ್ತ-ಮೂಲ(ಓಪನ್ ಸೊರ್ಸ್)ವನ್ನಾಗಿ ಮಾಡಲು ಸಿದ್ಧಪಡಿಸಲಾಗುತ್ತಿದೆ, ಎಂದು ಅವರು ಹೇಳಿದರು.

2019ರಿಂದ ಜಗತ್ತನ್ನು ಹಿಡಿದಿರುವ ಮಾರಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಅಳವಡಿಸಿಕೊಂಡ ಜಾಗತಿಕ ವಿಧಾನವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಭಾರತವು ತನ್ನ ಅನುಭವ, ಪರಿಣತಿ, ಸಂಪನ್ಮೂಲಗಳನ್ನು ಜಾಗತಿಕ ಸಮುದಾಯದೊಂದಿಗೆ ಕೋವಿಡ್-19ರ ಆರಂಭದಿಂದಲೇ ಹಂಚಿಕೊಳ್ಳಲು ಬದ್ಧವಾಗಿದೆ, ಎಂದು ಹೇಳಿದರು.

RELATED TOPICS:
English summary :COWIN flatform will be freely available for 50 nations : India committed in fight against COVID19 - PM Modi

ದಾವಣಗೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ! | ಜನತಾ ನ್ಯೂ&#
ದಾವಣಗೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ! | ಜನತಾ ನ್ಯೂ&#
 ಮೃತ ಅಭಿಮಾನಿ ಕುಟುಂಬಕ್ಕೆ ಯಡಿಯೂರಪ್ಪ 5 ಲಕ್ಷ ಆರ್ಥಿಕ ನೆರವು, ಇನ್ನೂ ಐದು ಲಕ್ಷ ನೀಡುವ ಭರವಸೆ! | ಜನತಾ ನ್ಯೂ&#
ಮೃತ ಅಭಿಮಾನಿ ಕುಟುಂಬಕ್ಕೆ ಯಡಿಯೂರಪ್ಪ 5 ಲಕ್ಷ ಆರ್ಥಿಕ ನೆರವು, ಇನ್ನೂ ಐದು ಲಕ್ಷ ನೀಡುವ ಭರವಸೆ! | ಜನತಾ ನ್ಯೂ&#
ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್ ಹೊಸ ಬಾಂಬ್! | ಜನತಾ ನ್ಯೂ&#
ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿ ಬಿಎಸ್ ವೈ ನನಗೆ ಸಿಎಂ ಹುದ್ದೆ ತಪ್ಪಿಸಿದ್ದಾರೆ: ಯತ್ನಾಳ್ ಹೊಸ ಬಾಂಬ್! | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಕೆರೆಗೆ ಉರುಳಿದ ಕೆಎಸ್‌ಆರ್​ಟಿಸಿ ಬಸ್; ಇಬ್ಬರು ಮೃತಪಟ್ಟ ಶಂಕೆ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಪ್ರಮಾಣವಚನ ಬಳಿಕ ಮೊದಲ ಬಾರಿ ದೆಹಲಿಗೆ ಸಿಎಂ: ಪ್ರಧಾನಿ ಭೇಟಿಯಾಗಲಿರುವ ಬೊಮ್ಮಾಯಿ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ಕ್ಯಾಮ್ಸ್​​ ಪ್ರಧಾನ ಕಾರ್ಯದರ್ಶಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ನೆರೆರಾಜ್ಯ ಕೇರಳದಲ್ಲಿ 22,000 ಪ್ರಕರಣ ಪ್ರತಿದಿನ : ರಾಜ್ಯಕ್ಕೆ ಎಚ್ಚರಿಕೆಯ ಗಂಟೆ? | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂ&#
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ತಮ್ಮ ನೆಚ್ಚಿನ ನಾಯಿಯ ಸಾವಿಗೆ ಕಣ್ಣಿರು ಸುರಿಸಿದ ಪ್ರಾಣಿಪ್ರಿಯ ಸಿಎಂ ಬಸವರಾಜ್ ಬೊಮ್ಮಾಯಿ - ವೀಡಿಯೊ ವೈರಲ್ | ಜನತಾ ನ್
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಮಾದಕ ವಸ್ತು ದಂಧೆ ಮಾಡುತ್ತಿದ್ದವರು ಅಂದರ್: 20 ಲಕ್ಷ ಮೌಲ್ಯದ ಅಫೀಮು ವಶ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#
ಡಿಸಿಎಂ, ಸಚಿವ ಸ್ಥಾನ ಯಾವುದು ಕೊಟ್ಟರೂ ಬೇಡ ಅನ್ನಲ್ಲ: ಕೆ.ಎಸ್. ಈಶ್ವರಪ್ಪ | ಜನತಾ ನ್ಯೂ&#

ನ್ಯೂಸ್ MORE NEWS...