2023ರಲ್ಲಿ ಸಿದ್ದರಾಮಯ್ಯ ಚುನಾವಣೆ ನಿಲ್ಲೋದಕ್ಕೆ ಕ್ಷೇತ್ರ ಫಿಕ್ಸ್! | ಜನತಾ ನ್ಯೂಸ್

06 Jul 2021
644

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ನಾನು ಚಾಮರಾಜಪೇಟೆ ಅಳಿಯ ಅಂತ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದೆದುರು ಬದಾಮಿಯ ನೂರಾರು ಬೆಂಬಲಿಗರು ಜಮಾಯಿಸಿದ್ದು ಬದಾಮಿಯಿಂದಲೇ ಮುಂದಿನ ಬಾರಿಯೂ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ಈ ವೇಳೆ ಹೇಳಿಕೆ ನೀಡಿದ ಸಿದ್ದರಾಮಯ್ಯ, ತಾವು ಬದಾಮಿ ಬಿಟ್ಟು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ತೀನಿ ಅಂತ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನನಗೆ ಕೋಲಾರ, ಚಾಮರಾಜಪೇಟೆ, ಕೊಪ್ಪಳದಲ್ಲಿ ಎಲ್ಲಾ ಕಡೆಯಿಂದ ಕರೀತಿದ್ದಾರೆ.. ಆದರೆ ನಾನು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ನಿಲ್ತೀನಿ ಅಂತ ಹೇಳಿಲ್ಲ.. ಅಸೆಂಬ್ಲಿ ಯಲ್ಲಿ ಚರ್ಚೆ ಆದಾಗ ಅಶೋಕ್ ಕೇಳಿದಾಗ ನಾನು ಬದಾಮಿ ಶಾಸಕ ಅಂತ ಹೇಳಿದ್ದೆ ಎಂದರು. ಈ ವೇಳೆ ಅಭಿಮಾನಿಗಳು ಭಾರೀ‌ ಕರತಾಡನ ಹರ್ಷೋದ್ಗಾರದ ಮೂಲಕ ಸಂಭ್ರಮಿಸಿದರು.

ಬದಾಮಿ ಕ್ಷೇತ್ರದ ಜನರನ್ನು ಮರೆಯಲು ಸಾಧ್ಯವೇ ಇಲ್ಲ. ಬೇರೆ ಕಡೆ ನಿಲ್ತೀನಿ ಅಂತ ನಾನು ಎಲ್ಲೂ ಹೇಳಿಲ್ಲ. ಒಬ್ಬ ಶಾಸಕನಾದವನು ದಿನನಿತ್ಯ ಜನರ ಕಷ್ಟಸುಖಗಳಿಗೆ ಸ್ಪಂದಿಸಬೇಕು. ನಾನು ಅಲ್ಲಿಗೆ ಹೆಚ್ಚು ಬರಲು ಆಗ್ತಿಲ್ಲ ಎಂದರು.

ಬದಾಮಿ ಕ್ಷೇತ್ರದ ಜನ ಬಹಳ ಒಳ್ಳೆಯವರು, ನಿಮ್ಮನ್ನು ಖುಷಿಪಡಿಸಲು ಈ ಮಾತು ಹೇಳ್ತಿಲ್ಲ, ಇನ್ನೂ ಎರಡು ವರ್ಷಗಳಿವೆ ಏನೇನೆಲ್ಲ ಮಾಡಲು ಸಾಧ್ಯವೋ ಎಲ್ಲ ಮಾಡ್ತೀನಿ. ನಾನು ನಿಮಗೆ ನೀರು, ಆಸ್ಪತ್ರೆ, ಜವಳಿ ಪಾರ್ಕ್ ಕೊಡಿಸಿರೋದೆಲ್ಲ ಒಬ್ಬ ಶಾಸಕನಾಗಿ ಮಾಡಬೇಕಾದ ಕೆಲಸ ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ಸುಮ್ಮನೆ ಖರ್ಚು ಮಾಡಿಕೊಂಡು ನೀವು ಇಲ್ಲಿಗೆ ಬರಬೇಡಿ, ನಾನೇ ಭಾನುವಾರ ಬಾದಾಮಿಗೆ ಬರುವೆ. ಅಲ್ಲಿಯೇ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದಿದ್ದೆ. ಆದರೂ ಬಂದಿದ್ದೀರಿ. ನಾನು ಬಾದಾಮಿ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧಿಸುವುದಾದರೂ ನಿಮ್ಮ ಅನುಮತಿ ಪಡೆದೇ ಹೋಗುವೆ ಎಂದರು.

RELATED TOPICS:
English summary :Siddaramaiah

ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ "ಕೆಳದಿ ಶಿವಪ್ಪ ನಾಯಕ" ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ:  9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಭಾರೀ ಮಳೆ : ಉತ್ತರಕನ್ನಡ ಜಿಲ್ಲೆಯ ಅನೇಕ ಭಾಗ ಜಲಾವೃತ, ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ-63 ಬಂದ್ | ಜನತಾ ನ್ಯೂ&#
ಭಾರೀ ಮಳೆ : ಉತ್ತರಕನ್ನಡ ಜಿಲ್ಲೆಯ ಅನೇಕ ಭಾಗ ಜಲಾವೃತ, ಭೂಕುಸಿತದಿಂದ ರಾಷ್ಟ್ರೀಯ ಹೆದ್ದಾರಿ-63 ಬಂದ್ | ಜನತಾ ನ್ಯೂ&#

ನ್ಯೂಸ್ MORE NEWS...