ಸುಮಲತಾ ವೈಯಕ್ತಿಕ ಲಾಭಕ್ಕೆ ಟೀಕಿಸುವುದನ್ನು ಬಿಟ್ಟು ಮೊದಲು ಮಂಡ್ಯ ಜನರ ಋಣ ತೀರಿಸಲಿ! | ಜನತಾ ನ್ಯೂಸ್

08 Jul 2021
380

ಕೋಲಾರ : ಸಂಸದೆ ಸುಮಲತಾ ಅವರಿಗೆ ರಾಜಕೀಯವಾಗಿ ಅನುಭವದ ಕೊರತೆಯಿದೆ. ಅವರು ವೈಯಕ್ತಿಕ ಲಾಭಕ್ಕೆ ಟೀಕಿಸುವುದನ್ನು ಬಿಟ್ಟು ಮೊದಲು ಮಂಡ್ಯ ಜನರ ಋಣ ತೀರಿಸಲಿ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.

ಮುಳಬಾಗಿಲಿನಲ್ಲಿ ಹಾಲು ಉತ್ಪಾದಕರಿಗೆ ಆಹಾರದ ಕಿಟ್​ ವಿತರಣಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರ ಜೊತೆಗೆ ಮಾತನಾಡಿ, ಕೆಆರ್‌ಎಸ್ ಡ್ಯಾಂಗೆ ತನ್ನದೇ ಆದ ಇತಿಹಾಸವಿದೆ. ಮೀಡಿಯಾ ಮುಂದೆ‌ ಪೋಸ್‌ಗಾಗಿ ಮಂಡ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಬೇಡಿ. ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್​ ಟೀಂ ಇದೆ. ಸರ್ಕಾರ ಅದರ ಬಗ್ಗೆ ಉತ್ತರಕೊಡುತ್ತೆ. ಈ ರೀತಿ ಗೊಂದಲ ಸೃಷ್ಟಿಸೋದಲ್ಲ ಎಂದು ಹೇಳಿದರು.

ಕೆಆರ್‌ಎಸ್‌ ಜಲಾಶಯ ಬಿರುಕು ಬಿಟ್ಟಿದ್ದರೆ ಆ ಬಗ್ಗೆ ತಾಂತ್ರಿಕ ಸಮಿತಿ ಅಥವಾ ಸರ್ಕಾರ ಉತ್ತರ ಕೊಡಲಿ. ಆದರೆ, ಸುಮಲತಾ ಅವರು ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಎಂದು ಗೊಂದಲ ಸೃಷ್ಟಿಸುವುದು ಸರಿಯಲ್ಲ. ಜಲಾಶಯದ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಎಷ್ಟೇ ಪ್ರಭಾವಿಗಳಾದರೂ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

ಎಲ್ಲಿ ಭ್ರಷ್ಟಾಚಾರ ಇರುತ್ತೋ ಅಲ್ಲಿ ಹೆಚ್​ಡಿಕೆ ಇರ್ತಾರೆ ಅನ್ನೋ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸುಮಲತಾಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ. ಜೆಡಿಎಸ್​ ಪಕ್ಷ, ಕುಮಾರಸ್ವಾಮಿ, ದೇವೇಗೌಡರು, ರಾಜ್ಯದ ಸಂಪತ್ತನ್ನು ಉಳಿಸುವ ಕೆಲಸ ಮಾಡಿದ್ದೇವೆ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.

ಪ್ರಜ್ವಲ್​​ ರೇವಣ್ಣರನ್ನು ಸುಮಲತ ಹೊಗಳಿಕೆ ವಿಚಾರವಾಗಿ ಮಾತನಾಡುತ್ತಾ, ನನ್ನ ತಮ್ಮನ ಬಗ್ಗೆ ಸುಮಲತಾ ಪೊಲಿಟಿಕಲ್ ಸರ್ಟಿಫಿಕೇಟ್​ ಕೊಟ್ಟಿದ್ದಾರೆ. ಅದಕ್ಕೆ ಅಭಿನಂದನೆ. ನನಗೆ ಸಂತೋಷವಾಗಿದೆ ಎಂದರು.

ಮಂಡ್ಯದ ಸಂಸದರನ್ನಾಗಿ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಜನರ ಋಣ ತೀರಿಸಿಕೊಳ್ಳುವ ಕೆಲಸ ಮಾಡಿ, ಈ ರೀತಿಯ ವೈಯಕ್ತಿಕ ಕಲ್ಲೆರಚಾಟ ಮಾಡಿಕೊಂಡು ಟೀಕೆ ಮಾಡುವುದು ಬೇಡ. ನಾನು ಮಂಡ್ಯದ ಚುನಾವಣೆಯಲ್ಲಿ ಸೋತಿದ್ದೇನೆ. ನಾನು ಸೋಲು ಒಪ್ಪಿಕೊಂಡಿದ್ದೇನೆ, ಆದರೆ ಐದುಮುಕ್ಕಾಲು ಲಕ್ಷ ಜನ ಮತ ಹಾಕಿದ್ದಾರೆ, ಬೇಜಾರಿಲ್ಲ. ಆದರೆ ಅವರು ಸಂಸದರಾಗಿದ್ದಾರೆ. ಜನರ ಋಣ ತೀರಿಸುವ ಕೆಲಸ ಮಾಡಲಿ ಎಂದರು.

RELATED TOPICS:
English summary :Nikhil kumaraswamy

ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಅಮೆಜಾನ್ ಗೋಡನ್ ಕಳ್ಳತನ: ₹10 ಲಕ್ಷ ಹಣವಿದ್ದ ಲಾಕರ್​ ಪತ್ತೆ ಹಚ್ಚಿದ ಡಾಗ್​ ಸ್ಕ್ವಾಡ್ | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಆಡುವ ವೇಳೆ ಗಣೇಶ ಮೂರ್ತಿಯನ್ನೇ ನುಂಗಿದ ಮೂರು ವರ್ಷದ ಮಗು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಮನೆಯಲ್ಲಿ ಫ್ಯಾನ್​ಗೆ ನೇಣು ಬಿಗಿದುಕೊಂಡು ಎಎಸ್​ಐ ಆತ್ಮಹತ್ಯೆಗೆ ಶರಣು! | ಜನತಾ ನ್ಯೂ&#
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ
ಇರುವಕ್ಕಿ ನೂತನ ಕೃಷಿ ಮತ್ತು ತೋಟಗಾರಿಕಾ ವಿವಿಗೆ "ಕೆಳದಿ ಶಿವಪ್ಪ ನಾಯಕ" ಹೆಸರು ಘೋಷಿಸಿದ ಬಿಎಸ್ ಯಡಿಯೂರಪ್ಪ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
ಕೇರಳದಲ್ಲಿ ಹೆಚ್ಚಿದ ಪ್ರಕರಣ, ಗಡಿ ಚೆಕ್ ಪೋಸ್ಟ್‌ಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ ತಮಿಳುನಾಡು ಸರ್ಕಾರ | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
Tokyo Olympics: ವೇಯ್ಟ್​​​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು! | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಗುರು ಪೂರ್ಣಿಮೆ 2021: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಪ್ರವಾಹ ಪರಿಸ್ಥಿತಿ ಅವಲೋಕನ: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ‌ ಬೆಳಗಾವಿ ಪ್ರವಾಸ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ಬೈಕ್​ ಉಳಿಸಿಕೊಳ್ಳಲು ಹೋದ ಯುವಕ ತಾನೇ ಕೊಚ್ಚಿಹೋದ! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ:  9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ರಾಜ್ಯದಲ್ಲಿ ಇನ್ನೂ 3 ದಿನ ಮಳೆ: 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್! | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#
ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಬಾಲಕಿಯ ಶವ ಪತ್ತೆ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ | ಜನತಾ ನ್ಯೂ&#

ನ್ಯೂಸ್ MORE NEWS...